ಯಲ್ಲಾಪುರ : ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ ಸುದೀರ್ಘಾವಧಿ ಸೇವೆ ಸಲ್ಲಿಸಿದ ಐವರು ಅಧಿಕಾರಿಗಳಿಗೆ ಜುಲೈ 11 ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಅಮಿತ್ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.
ವರ್ಗಾವಣೆಯಾದ ಅಧಿಕಾರಿಗಳಾದ ಉಪ ವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರು, ಉಪ ವಲಯಾರಣ್ಯಾಧಿಕಾರಿ ವಿನಯಕುಮಾರ ಶಿವಣಗಿ, ಗಸ್ತು ಅರಣ್ಯ ಪಾಲಕ ವಿಷ್ಣು ಪೂಜಾರಿ, ಗಸ್ತು ಅರಣ್ಯ ಪಾಲಕ ಸತ್ಯಪ್ಪ ಉಪ್ಪಾರ ಮತ್ತು ಗಸ್ತು ಅರಣ್ಯ ಪಾಲಕ ಪ್ರಶಾಂತ ಅಜರೆಡ್ಡಿ ಅವರ ಸೇವೆಗಳನ್ನು ಸ್ಮರಿಸಿ ಗೌರವಿಸಲಾಯಿತು.
ಬೀಳ್ಕೊಡುಗೆ ನೀಡಿದ ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.