ಯಲ್ಲಾಪುರ : ವಾರದಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಯಲ್ಲಾಪುರ ತಾಲೂಕಿನ ಅರಬೈಲ ಗ್ರಾಮದ ಪಕ್ಕದ ಡಬ್ಗುಳಿ ಗ್ರಾಮದ ಅರಣ್ಯದಲ್ಲಿ ಗುಡ್ಡ ಕುಸಿತವಾಗಿದೆ. ಆದರೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮತ್ತು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ತಾಲ್ಲೂಕಿನಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ತಾಲೂಕಿನ ಹಳ್ಳ ಕೊಳ್ಳಗಳು ತುಂಬಿ ನದಿಯಾಗಿ ಪರಿವರ್ತನೆಗೊಂಡಿವೆ. ಯಲ್ಲಾಪುರ ತಾಲೂಕು ಸೇರಿದಂತೆ ಪಕ್ಕದ ಅಂಕೋಲಾ ತಾಲ್ಲೂಕು ಹಾಗೂ ಸುತ್ತಮುತ್ತಲ ತಾಲ್ಲೂಕುಗಳ ಗಡಿ ಭಾಗದಲ್ಲಿ
ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಅದೇ ರೀತಿ ತಾಲ್ಲೂಕಿನ ಡಬ್ಗುಳಿಯಲ್ಲಿ ಗುಡ್ಡಗಳ ಕುಸಿತದ ಪರಿಣಾಮ ನೀರು ಹರಿದು ಹೋಗಲು ಅಳವಡಿಸಲಾದ ಪೈಪ್‌ಗಳು ಕಿತ್ತು ಹೋಗಿದೆ. ಅನೇಕ ಮರಗಿಡಗಳು ಕಿತ್ತು ಗುಡ್ಡದ ಮಣ್ಣಿನೊಂದಿಗೆ ಹರಿದು ತಗ್ಗು ಪ್ರದೇಶಕ್ಕೆ ಬಂದು ಬಿದ್ದಿವೆ.