ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಉಚಗೇರಿ ಗ್ರಾಮದ ಮಜ್ಜಿಗೆಹಳ್ಳದ ಭಾಗು ಡೋಯಿಪಡೆ ಸಿ.ಎ. (ಚಾರ್ಟೆಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ತಾಲೂಕಿಗೆ ಮತ್ತು ತಮ್ಮ ದನಗರ ಗೌಳಿ ಸಮುದಾಯಕ್ಕೆ ಗೌರವ ತಂದಿದ್ದಾನೆ.
ಪ್ರಾಥಮಿಕ ಶಿಕ್ಷಣವನ್ನು ಉಚಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ ಈತ, ಕಾತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್.ಸಿ ಮುಗಿಸಿ, ಶಿರಸಿ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ, ಧಾರವಾಡದಲ್ಲಿ ಪದವಿ ಪಡೆದು ನಂತರ ಸಿ.ಎ. ಪರೀಕ್ಷೆ ಕಟ್ಟಿ, ಇದೀಗ ಉತ್ತೀರ್ಣನಾಗಿದ್ದಾನೆ.