Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 15 July 2024

ಅಂಕೋಲಾ ಕನಕನಹಳ್ಳಿಯಲ್ಲಿ ಕಾಳಿಂಗ ಸರ್ಪ ರಕ್ಷಣೆ

ಯಲ್ಲಾಪುರ : ಅಂಕೋಲಾ ತಾಲೂಕಿನ ರಾಮನಗುಳಿ ಸಮೀಪದ ಕನಕನಹಳ್ಳಿಯಲ್ಲಿ ಒಂದು ತೋಟದಲ್ಲಿ ಸುತ್ತಾಡಿಕೊಂಡಿದ್ದ ಕಾಳಿಂಗ ಸರ್ಪವನ್ನು ಸ್ಥಳೀಯ ಸರ್ಪ ರಕ್ಷಕ ಸೂರಜ ಮುರುಗೇಶ ಶೆಟ್ಟಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
  ಸುಬ್ಬಾ ಸಿದ್ದಿ ಎಂಬ ರೈತರ ತೋಟದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವು ಸ್ಥಳೀಯರಿಗೆ ಆತಂಕವನ್ನುಂಟುಮಾಡಿತ್ತು. ಸ್ಥಳೀಯರು ಅರಬೈಲ್ ಗ್ರಾಮದ ಸೂರಜ ಮುರುಗೇಶ ಶೆಟ್ಟಿಯನ್ನು ಸಂಪರ್ಕಿಸಿದರು. ಸೂರಜ ಶೆಟ್ಟಿ ಅವರು ಹರೀಶ ಮಡಿವಾಳ, ಡಿಆರ್ಎಫ್ಓ ಅಂಕಲಿ ಸಹಾಯ ಮಾಡಿದ್ದರು. 12 ಅಡಿ ಉದ್ದ 7.5 ಕೆ.ಜಿ ತೂಕದ ಕಾಳಂಗ ಸರ್ಪವನ್ನು ನಂತರ ಕಾಡಿಗೆ ಬಿಡಲಾಯಿತು.
  ಸೂರಜ ಶೆಟ್ಟಿ ಯಲ್ಲಾಪುರದ ಗಸ್ತು ವನಪಾಲಕ ಪ್ರಶಾಂತ ನಾಯ್ಕ ಅವರಿಂದ ತರಬೇತಿ ಪಡೆದ ಅನುಭವಿ ಸರ್ಪ ರಕ್ಷಕರಾಗಿದ್ದು, ಈಗಾಗಲೇ ನೂರಾರು ನಾಗರ ಹಾವುಗಳು, 14 ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು, ಹೆಬ್ಬಾವುಗಳು ಮತ್ತು ಇತರ ಅಪಾಯಕಾರಿ ಕಾಡುಪ್ರಾಣಿಗಳನ್ನು ರಕ್ಷಿಸಿದ್ದಾರೆ.