ಯಲ್ಲಾಪುರ : ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಮಳೆಯ ನೀರು ಸರಾಗಿವಾಗಿ ಸಾಗದೆ ರಾಜಕಲುವೆಯೂ ಸರಿಯಾಗಿ ಇಲ್ಲದೆ ಅರೆಬರೆಗೊಂಡ ಕಾಮಗಾರಿ ಮೂಲಕ ಗೋಪಾಲಕೃಷ್ಣ ಗಲ್ಲಿಯ ರೈತರ ಭೂಮಿಗೆ ನೀರು ನುಗ್ಗುತ್ತಿದೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಲಿಶಾ ಗಲ್ಲಿ ಪ.ಪಂ ಸದಸ್ಯ ಕೇಸರ್ ಸಯ್ಯದಲಿ ಬುಧವಾರ ಪ.ಪಂ ಮುಖ್ಯಾಧಿಗಳನ್ನು ಸ್ಥಳಕ್ಕೆ ಕರೆದು ಸಂಫೂರ್ಣ ವಿವರಣೆ ನೀಡಿದರು.
ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಈಶ್ವರದಲ್ಲಿ ಗೋಪಾಲಕೃಷ್ಣ ಗಲ್ಲಿ, ಅಂಬೇಡ್ಕರ್ ನಗರ, ಇಸ್ಲಾಂ ಗಲ್ಲಿ, ಅಕ್ಬರ್ ಗಲ್ಲಿ ಸೇರಿದಂತೆ ಬಹುತೇಕ ಶೇ . 65 ರಷ್ಟು ನೀರನ್ನು ಇದೇ ಕಾಲುವೆಯ ಮೂಲಕ ತಣ್ಣೀರು ಹಳ್ಳಕ್ಕೆ ಹರಿದು ಹೋಗುತ್ತದೆ. ಈ ಮಧ್ಯೆ ಈ ಭಾಗದಲ್ಲಿ ಮನೆ ಮತ್ತು ಇನ್ನಿತರ ಕೆಲಸಗಳು ನಡೆದಿರುವುದರಿಂದ ನೀರಿನ ಹರಿವಿನ ಒತ್ತಡ ಹೆಚ್ಚಾಗಿದ್ದು, ಒತ್ತಡ ಸಹಿಸಲಾರದ ಇಷ್ಟೊಂದು ನೀರು, ಕೃಷಿಭೂಮಿಗೆ ನುಗ್ಗುತ್ತಿದೆ ಎಂದು ಅಧಿಕಾರಿಗಳಿಗೆ ಕೆಸರ್ ಸಯ್ಯದಲಿ ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುನೀಲ ಗಾವಡೆ ಸೇರಿದಂತೆ, ಆರೋಗ್ಯ ನಿರೀಕ್ಷಕ ಗುರು ಗಡಗಿ ಇನ್ನಿತರ ಅಧಿಕಾರಿಗಳನ್ನು ರಾಜಕಾಲುವೆ ಹರಿದು ಹೋಗುವ ಪ್ರದೇಶಕ್ಕೆ ತೆರಳಿ ಅರೆಬರೆ ಕಾಮಗಾರಿಯಾದ ಗೋಪಾಲಕೃಷ್ಣ ಗಲ್ಲಿಯಲ್ಲಿ ಯಲ್ಲಾಪುರದ ಎಲ್ಲ ಭಾಗದ ನೀರು ಹರಿದು ಹೋಗುವ ರಾಜ ಕಾಲವೆಯಲ್ಲಿ ಆಗಿರುವ ಅನಾಹುತವನ್ನು ಪ್ರತ್ಯಕ್ಷವಾಗಿ ಗಮನಿಸಿದರು.
ಕಳೆದ ಮೂರು ವರ್ಷದಿಂದ ರಾಜಕಾಲುವೆಯನ್ನು ಸದೃಢವಾಗಿ ಕಟ್ಟುವ ಕಾರ್ಯ ನಡೆದಿದ್ದರೂ ಕೂಡ, ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಹೀಗಾಗಿ ಈ ಬಾರಿ ಕೂಡ ಸ್ಥಳೀಯರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಈ ಬಗ್ಗೆ ಪಟ್ಟಣ ಪಂಚಾಯತಿ ಗಮನ ಹರಿಸುವಂತೆ ಕೆಸರಲಿ ವಿನಂತಿಸಿದರು.
ಈ ಬಗ್ಗೆ ಮುಂದಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರ ಗಮನಕ್ಕೆ ತಂದು ಶಾಶ್ವತ ಯೋಜನೆಯನ್ನು ನಿರ್ಮಿಸಲಾಗುವುದು, ಈ ಕುರಿತು ಶಾಸಕರೊಂದಿಗೂ ಕೂಡ ಮಾತನಾಡಲಾಗುವುದು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುನೀಲ ಗಾವಡೆ ಭರವಸೆ ನೀಡಿದರು.
____
ಮಹಿಳಾ ಮಂಡಳ ಸಮೀಪದ ಕೊಳವೆ ಭಾವಿ ಹಾಳಾದ ಕೆಲವೇ ನಿಮಿಷದಲ್ಲಿ ವಲೀಶಾಗಲ್ಲಿ ವಾರ್ಡ್ ಸದಸ್ಯ ಕೇಸರಲಿ ಸಯ್ಯದರಿಂದ ದುರಸ್ತಿ.