ಯಲ್ಲಾಪುರ ; ಜಿಲ್ಲಾಧ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜುಲೈ.16ರಂದು ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ ಶಾಲೆ ಪಿಯು ಕಾಲೇಜು, ಅಂಗನವಾಡಿಗಳು ಮತ್ತು ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರೀಯಾ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತ್ತು ಮುಂಡಗೋಡ ತಾಲ್ಲೂಕನ್ನು ಹೊರತುಪಡಿಸಿ ಇನ್ನುಳಿದ 10 ತಾಲ್ಲೂಕುಗಳ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ(12ನೇಯ ತರಗತಿಯ ವರೆಗೂ) ದಿನಾಂಕ: 16-07-2024 ರಂದು ರಜೆಯನ್ನು ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ.
ಯಲ್ಲಾಪುರ ; ರವಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆಯವರೆಗೆ ಯಲ್ಲಾಪುರ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ.
ಯಲ್ಲಾಪುರ ತಾಲೂಕು, ಅಷ್ಟೇ ಅಲ್ಲದೆ ಮುಂಡಗೋಡ ಕಲಘಟಗಿ ಹಾಗೂ ಹುಬ್ಬಳ್ಳಿ ಧಾರವಾಡ ಕಡೆಗೆಗಳಲ್ಲೂ ಕೂಡ ಭಾರಿ ಮಳೆ ಸುರಿದಿದ್ದು, ಬೆಡ್ತಿ ನದಿ ಗಂಗಾವಳಿ ನದಿ ತುಂಬಿ ಹರಿಯುತ್ತಿವೆ. ರಾಮನಗುಳಿಯಿಂದ ಹಳವಳ್ಳಿ ಹೊಸ ಸೇತುವೆಯ ಮೇಲ್ಭಾಗದ ಕೆಲವೆಕೆಲವು ಅಡಿಗಳ ಕೆಳಗೆ ನೀರು ಹರಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಲೂಕಿನ ವಜ್ರಳ್ಳಿ ಪಂಚಾಯಿತಿ ಹೊನ್ನಗದ್ದೆ ಗ್ರಾಮದ ಲಿಂಗಾ ನಾಯ್ಕರವರ ಮನೆಯ ಸಮೀಪದಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ಎರಡು ವಿದ್ಯುತ್ ಕಂಬ ಮುರಿದು ಬಿದ್ದಿದೆ. ಮನೆಗೆ ಸ್ವಲ್ಪದರಲ್ಲೇ ದೂರದಲ್ಲಿ ಬಿದ್ದ ಮರದಿಂದ ದೊಡ್ಡ ಅಪಾಯ ತಪ್ಪಿದೆ. ರವಿವಾರ ರಾತ್ರಿಯಿಂದ ವಜ್ರಳ್ಳಿಯ ಭಾಗದಲ್ಲಿ ಸುರಿದ ಮಳೆ ಈ ಭಾಗದ ಅಲ್ಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.