ಯಲ್ಲಾಪುರ : ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಮತ್ತು ಗ್ರಾ.ಪಂ ವಜ್ರಳ್ಳಿ ವ್ಯಾಪ್ತಿಯ ಭಾಗ್ಯಶ್ರೀ ಸಂಜೀವಿನಿ ವಾರ್ಡ ಮಟ್ಟದ ಒಕ್ಕೂಟ ಆಶ್ರಯದಲ್ಲಿ ತೇಲಂಗಾರ ಗ್ರಾಮದಲ್ಲಿ ಪಶುಸಂಗೋಪನೆ ಕುರಿತು ಇತ್ತೀಚೆಗೆ ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಪಶುವೈದ್ಯಾಧಿಕಾರಿ ಕೆ.ಜಿ.ಹೆಗಡೆ ಅವರು ಪಶುಸಂಗೋಪನೆ, ಪಶು ಆಹಾರ, ಜಾನುವಾರುಗಳ ತಳಿಗಳ ಕುರಿತು ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ನಾರಾಯಣ ಭಟ್ಟ ಮತ್ತು ಉಪಾಧ್ಯಕ್ಷರಾದ ಅನ್ನಪೂರ್ಣ ಭಟ್ಟ ಉಪಸ್ಥಿತರಿದ್ದು ಮಾತನಾಡಿದರು. ವಾರ್ಡ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಯಮುನಾ ಭಟ್ಟರವರು ಸಭೆಯ ನೇತೃತ್ವ ವಹಿಸಿದ್ದರು. ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನರಸಿಂಹ ಗಾಂವ್ಕಾರ್ ಮತ್ತು ವಲಯ ಮೇಲ್ವಿಚಾರಕರು (ಕೌಶಲ್ಯ) ಶರೀಫಾಬಿ ಮುಲ್ಲಾ ಉಪಸ್ಥಿತರಿದ್ದರು.
ಪಶು ಸಖಿ ಹೇಮಾ ಆಚಾರಿಯವರ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕರಾದ ರಾಜಾರಾಮ ವೈದ್ಯ ಪ್ರಾಸ್ತಾವಿಕಗೈದರು. ಭಾಗೀರಥಿ ಭಟ್ಟ ಸ್ವಾಗತಿಸಿದರು ಮತ್ತು ಹೇಮಾ ಆಚಾರಿ ವಂದಿಸಿದರು. ಗ್ರಾಮ ಪಂಚಾಯತಿ ಸದಸ್ಯರಾದ ರತ್ನಾ ಬಾಂದೇಕರ ಕಾರ್ಯಕ್ರಮ ನಿರೂಪಿಸಿದರು.
ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಮತ್ತು ಸಿಬ್ಬಂದಿಗಳು,ವಾರ್ಡ ಮಟ್ಟದ ಒಕ್ಕೂಟದ ಪದಾಧಿಕಾರಿಗಳು ಮತ್ತು ಸ್ವ ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಾನುವಾರುಗಳ ಆರೋಗ್ಯ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಬಳಸಲು,