ಯಲ್ಲಾಪುರ ; ಆಧಾರ್ ಕಾರ್ಡ್ ತಿದ್ದುಪಡಿ ಅಗತ್ಯವಿರುವ 2012 ವಿದ್ಯಾರ್ಥಿಗಳ ಆಧಾರ್ ಕಾರ್ಡ್ ತಿದ್ದುಪಡಿಸಲು ರಾಜ್ಯ ಸರ್ಕಾರ ಓರ್ವ ಸಿಬ್ಬಂದಿ ಹಾಗೂ ಆಧಾರ್ ಕಾರ್ಡ್ ಕೆಟ್ಟನ್ನು ತಾಲೂಕಿಗೆ ಒದಗಿಸಿದೆ. ಸೋಮವಾರ ಬಿ.ಆರ್.ಸಿ ಕಛೇರಿಯಲ್ಲಿ ತಹಶೀಲ್ದಾರ ಅಶೋಕ ಭಟ್ಟ ಆಧಾರ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಈ ಸಂದರ್ಭದಲ್ಲಿದ್ದರು.
ತಾಲೂಕಿನಲ್ಲಿ 2812 ವಿದ್ಯಾರ್ಥಿಗಳ ಆಧಾರ ಕಾರ್ಡನಲ್ಲಿ ತಿದ್ದುಪಡಿ ಅಗತ್ಯವಿದ್ದುದರಿಂದ ಈ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ತೊಂದರೆಯಾಗಿತ್ತು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ 8 ತಿಂಗಳ ಸತತ ಪ್ರಯತ್ನದಿಂದ ಆಧಾರ ಕಾರ್ಡ ತಿದ್ದುಪಡಿಗಾಗಿ ವಿಶೇಷ ಮನವಿನಮಾಡಲಾಗಿತ್ತು, ಹೀಗಾಗಿ, ರಾಜ್ಯ ಸರಕಾರದಿಂದ ತಾಲೂಕಿಗೆ ಆಧಾರ ಕಾರ್ಡ ತಿದ್ದುಪಡಿ ಕಿಟ್ ಹಾಗೂ ಒಬ್ಬ ಸಿಬ್ಬಂದಿಯನ್ನು ಒದಗಿಸಲಾಗಿದೆ. ಇದರ ಸಹಾಯದಿಂದ ಇಂದು ಜುಲೈ 15 ರಂದು ವಿದ್ಯಾರ್ಥಿಗಳ ಆಧಾರ ಕಾರ್ಡ ತಿದ್ದುಪಡಿ ಅಭಿಯಾನವನ್ನು ಬಿ.ಆರ್.ಸಿ ಕಛೇರಿ ಯಲ್ಲಾಪುರದಲ್ಲಿ ಆರಂಭಿಸಲಾಗಿದೆ.
19.08.2024 ರವರೆಗೆ ವಿದ್ಯಾರ್ಥಿಗಳ ಆಧಾರಕಾರ್ಡ ತಿದ್ದುಪಡಿ ಅಭಿಯಾನವನ್ನು ತಾಲೂಕಿನ ವಿವಿಧ ಶಾಲೆಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ. ಈ ವೇಳಾಪಟ್ಟಿಯನ್ನು ತಾಲೂಕಿನ ಎಲ್ಲಾ ಶಾಲೆಗಳಿಗೆ ಒದಗಿಸಲಾಗಿದ್ದು ತಿದ್ದುಪಡಿಗೆ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಲು ಎಲ್ಲಾ ಮಾಹಿತಿ ನೀಡಲಾಗಿದೆ.
ಆಧಾರ ಕಾರ್ಡ್ ಅಭಿಯಾನವು ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಆಗಿದ್ದರೂ, ಕೂಡ ಜುಲೈ 17 ರಂದು ಮೊಹರಂ ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ಇದೆ. ಆ ದಿನದಂದು ಅದೇ ಕಿಟ್ ಬಳಸಿ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರ ಅಧಾರ ಕಾರ್ಡ ಸಂಬಂಧಿತ ಕಾರ್ಯಗಳನ್ನು ಮಾಡಿಕೊಡಲಾಗುತ್ತದೆ. ರವಿವಾರ ಸಹ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರ ಅಧಾರ ಕಾರ್ಡ ಸಂಬಂಧಿತ ಕಾರ್ಯಗಳನ್ನು ಮಾಡಿಕೊಡಲು ತಹಶೀಲ್ದಾರ ಅಶೋಕ ಭಟ್ಟ ತಾಲೂಕ ಪಂಚಾಯಿತ ಸಿಬ್ಬಂದಿಗಳಿಗೆ ಆದೇಶಿಸಿರುತ್ತಾರೆ.