ಯಲ್ಲಾಪುರ: ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕವು ಶುಕ್ರವಾರ ಲಾರ್ವಾ ಸಂತಾನೋತ್ಪತ್ತಿ ವಿರೋಧಿ ಚಟುವಟಿಕೆಗೆ ಚಾಲನೆ ನೀಡಿತು. ತಹಶೀಲ್ದಾರ ಅಶೋಕ್ ಭಟ್ ಹಸಿರು ಬಾವುಟ ತೋರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಆರ್.ಡಿ.ಜನಾರ್ದನ್, ಎನ್ಎಸ್ಎಸ್ ಅಧಿಕಾರಿ ಸುರೇಖಾ ತಡವಾಲ್, ಉಪನ್ಯಾಸಕಿ ಸವಿತಾ ನಾಯಕ್, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್, ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್ ತಾಳಿಕೋಟಿ, ಯು.ಜೋಸೆಫ್, ಎನ್.ಎಲ್.ಕಳಸದ್, ಪಪಂ ಆರೋಗ್ಯ ನಿರೀಕ್ಷಕ ಗುರು ಗಡಗಿ, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ತಂಡವು ಕಾಳಮ್ಮನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಿ, ಲಾರ್ವಾ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸಿತು ಮತ್ತು ಆರೋಗ್ಯ ಶಿಕ್ಷಣವನ್ನು ನೀಡಿತು. ಲಾರ್ವಾ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವ ಮೂಲಕ ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳು ಹರಡುವುದನ್ನು ತಡೆಗಟ್ಟುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ನರ್ಮದಾ ನಾಯಕ್ ಉಪಸ್ಥಿತರಿದ್ದರು.
ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮತ್ತು ರೋಗಗಳು ಹರಡುವುದನ್ನು ತಡೆಯಲು ಎನ್ಎಸ್ಎಸ್ ಘಟಕವು ಉತ್ತಮವಾದ ಕ್ರಮ ಕೈಗೊಂಡಿದೆ.
ದೆಹಳ್ಳಿಯಲ್ಲಿ ಜಾಗೃತಿ ;
ಶುಕ್ರವಾರ ದೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಾರ್ವ ಸಮೀಕ್ಷೆ ಹಾಗೂ ಡೆಂಗ್ಯೂ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಶಿಕ್ಷಣ ನೀಡಲಾಯಿತು.
ಮನೆ ಬೇಟೆಯ ಸಂದರ್ಭದಲ್ಲಿ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಪತಿ ಮುದ್ದೇಪಾಲ್ ರವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.