Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 24 July 2024

ಮಂಚಿಕೇರಿಯಲ್ಲಿ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಯಲ್ಲಾಪುರ ; ತಾಲೂಕಿನ ಮಂಚಿಕೇರಿಯ ಹಾಸಣಗಿ ಪಂಚಾಯತಿ ವ್ಯಾಪ್ತಿಯ ಮಾಳಕೊಪ್ಪ ಶಾಲೆಯ ಎದುರಿಗೆ ಬುಧವಾರ ಬೆಳಿಗ್ಗೆ ರಭಸವಾಗಿ ಬಿಸಿದ ಗಾಳಿಗೆ ಮರವೊಂದು ಬೈಕ್ ಸವಾರನ ಮೇಲೆ ಬಿದ್ದು ಬೈಕ್  ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
   ಮೃತ ವ್ಯಕ್ತಿಯನ್ನು ವಿನಯ ಮಂಜುನಾಥ ಗಾಡೀಗ (27) ಎಂದು ಗುರುತಿಸಲಾಗಿದ್ದು ಕಬ್ಬಿನಗದ್ದೆ ನಿವಾಸಿಯಾಗಿದ್ದಾನೆ‌. ತಾಲೂಕಿನಾಧ್ಯಂತ ಸುರಿಯುತ್ತಿರುವ ಭಾರಿ ಮಳೆ ಕಡಿಮೆ ಆಗಿದ್ದರೂ ಕೂಡ ಆ ಗಾಳಿಯ ಪ್ರಮಾಣ ಇನ್ನೂ ಹೆಚ್ಚಾಗಿದೆ. ವಾರದಿಂದ ಸುರಿದ‌ ಭಾರಿ  ಮಳೆಗೆ ಮಣ್ಣು ದುರ್ಭಲವಾಗಿ ಮರಗಳು ಉರುಳಿ ಬೀಳುತ್ತಿವೆ. ಮಂಗಳವಾರ ಸಂಜೆ ಅರ್ಲಿಕೊಪ್ಪದಲ್ಲಿ ಬೈಕ್ ಸವಾರನ‌ ಮೇಲೆ ಮರದ ಟೊಂಗೆ ಬಿದ್ದು ಆತ ಗಾಯಗೊಂಡಿದ್ದ, ಬುಧವಾರ ಮಾಳಕೊಪ್ಪ ಶಾಲೆಯ ಹತ್ತಿರ ಮರಬಿದ್ದು ಸವಾರ ಸ್ಥಳದಲ್ಲಿಯೇ ಮ್ರತನಾಗಿದ್ದಾನೆ.
  ಘಟನಾ ಸ್ಥಳಕ್ಕೆ ತಹಶೀಲ್ದಾರ ಅಶೋಕ ಭಟ್ಟ, ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ, ಪಿಎಸ್ಐ ಸಿದ್ದಪ್ಪ ಗುಡಿ, ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೈಕ್ ಮೇಲೆ ಮರ ಬಿದ್ದು ಮೃತಪಟ್ಟ ಕಬ್ಬಿನಗದ್ದೆ ನಿವಾಸಿ ವಿನಯ ಮಂಜುನಾಥ ಗಾಡೀಗ ಮೃತ ದೇಹ ಇಟ್ಟ ತಾಲೂಕ ಆಸ್ಪತ್ರೆಗೆ ಶಿರಸಿ ಉಪವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಭೇಟಿ ನೀಡಿ ಮೃತನ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರವನ್ನು ಶೀಘ್ರವಾಗಿ ನೀಡುವ ಭರವಸೆಯನ್ನು ನೀಡಿದರು.