ಯಲ್ಲಾಪುರ : ಹಣವಿರುವ ಮತ್ತೊಂದಿಷ್ಟು ದಾಖಲೆ ಇರುವ ಮಹಿಳೆಯರು ಉಪಯೋಗಿಸುವ ಪರ್ಸ್ ಒಂದು ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ತಾಲೂಕಾ ಪಂಚಾಯತಿ ಎದುರು ಇಲ್ಲಿಯ ವ್ಯಕ್ತಿ ಒಬ್ಬರಿಗೆ ದೊರಕಿದ್ದು ಪರ್ಸ್ ಕಳೆದುಕೊಂಡವರು ತಮ್ಮ ಸಂಪೂರ್ಣ ವಿವರ ಹಾಗೂ ಪರ್ಸಿನಲ್ಲಿರುವ ದಾಖಲೆಗಳು ವಿವರವನ್ನು ತಿಳಿಸಿ ಪರ್ಸನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಯಲ್ಲಾಪುರದ ಯೋಗಿ ಟುಟೋರಿಯಲ್ ಮಾಲಿಕರಾದ ಯೋಗೇಶ ಶಾನಭಾಗ ಸೋಮವಾರ ಮಧ್ಯಾನ ಬೆಲ್ ರಸ್ತೆಯ ಮೂಲಕ ತಮ್ಮ ವಾಹನದ ಮೂಲಕ ಹೋಗುತ್ತಿದ್ದಾಗ ಅವರಿಗೆ ಲೇಡಿಸ್ ಪರ್ಸ್ ದೊರಕಿದೆ.