ಯಲ್ಲಾಪುರ ; ಮಂಗಳವಾರ ರಾತ್ರಿಯಿಂದ ಸುರಿದ ಬಾರಿ ಮಳೆಗೆ ಯಲ್ಲಾಪುರ ಪಟ್ಟಣದಲ್ಲಿ ಹಲವಾರು ಅವತಾರ ಅವಾಂತರಗಳು ನಿರ್ಮಾಣವಾಗಿದೆ.
ಬಾರಿ ಮಳೆಯಿಂದಾಗಿ ಮಂಜುನಾಥ ನಗರದಲ್ಲಿ ಹಳೆ ಮನೆ ಗೋಡೆಯೊಂದು ನಿರ್ಮಾಣ ಹಂತದ ಕಟ್ಟಡದ ಗೋಡೆ ಮೇಲೆ ಉರುಳಿ ಬಿದ್ದಿರುವ ಕಾರಣಕ್ಕೆ, ನಿರ್ಮಾಣ ಹಂತದ ಕಟ್ಟಡಕ್ಕೆ ಹಾನಿಯಾಗಿದೆ. ಬೀಮವ್ವ ಬೋವಿ ವಡ್ಡರ್ ಎಂಬುವರ ಹಳೆಯ ಮನೆಯ ಗೋಡೆ ಎಡಬಿಡದೆ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ಕುಸಿದು ಪಕ್ಕದಲ್ಲಿ ನಿರ್ಮಿಸುತ್ತಿರುವ ಮಣಿಕಂಠ ಉಣಕಲ್ ಅವರ ಮನೆ ಗೋಡೆಯ ಮೇಲೆ ಬಿದ್ದ ಪರಿಣಾಮ ಆ ಗೋಡೆಯು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೆ ಅವಘಡ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ ಮಂಜುನಾಥ ನಗರ ವಾರ್ಡ್ ಸದಸ್ಯ ಸತೀಶ್ ಶಿವಾನಂದ ನಾಯ್ಕ ವಾಸ್ತವಿಕ ಸ್ಥಿತಿಯನ್ನು ತಹಶೀಲ್ದಾರ ಕಚೇರಿಗೆ ಮಾಹಿತಿ ನೀಡಿದ್ದಾರೆ.
ಯಲ್ಲಾಪುರ ಪಟ್ಟಣ ಪಂಚಾಯಿತಿ ವಾರ್ಡ್ ನಂಬರ್ 2 ರ ಮಹಿಳಾ ಮಂಡಲದ ಎದುರು ಮರವೊಂದು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ವ್ಯರ್ಥ್ಯವಾಗಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಾರ್ಡ್ ಸದಸ್ಯ ಕೇಸರಲಿ ಸಯ್ಯದ್ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಿರವತ್ತಿ ಪವರ್ ಗ್ರಿಡ್ ನಿಂದ ಯಲ್ಲಾಪುರಕ್ಕೆ ಸಬ್ ಸ್ಟೇಷನ್ ಗೆ ಸಂಪರ್ಕವಿರುವ ವಿದ್ಯುತ್ ಮಾರ್ಗದ ಮೇಲೆ ಬೃಹತ್ ಮರ ಒಂದು ಉರುಳಿ ಬಿದ್ದ ಪರಿಣಾಮ ಬೆಳಗ್ಗೆಯಿಂದ ವ್ಯತ್ಯಯಗೊಂಡಿದ್ದ ವಿದ್ಯುತ್ ಸಂಜೆ 4:00 ವರೆಗೆ ಮರು ಸ್ಥಾಪನೆ ಕಷ್ಟ ಎಂದು ಹೇಳಲಾಗುತ್ತಿದೆ.