ಯಲ್ಲಾಪುರ: ವಜ್ರಳ್ಳಿಯಂತಹ ಸಾಂಸ್ಕೃತಿಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭೂಮಿಯಲ್ಲಿ ವೀರ ಸಾವರಕರ ಪ್ರತಿಮೆ ಸ್ಥಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ.ಪಂ ಮಾಜಿ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ರಾಮು ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, "ಸಾವರಕರ ವಿರೋಧಿಗಳು ಇನ್ನೂ ಪರಕೀಯರ ಗುಲಾಮತನ ಮಾನಸಿಕತೆಯಲ್ಲಿದ್ದಾರೆ" ಎಂದು ಆರೋಪಿಸಿದ್ದಾರೆ. "ಭಾರತಕ್ಕೆ ಸ್ವಾತಂತ್ರ್ಯ ಪಡೆದ 75 ವರ್ಷಗಳಾದರೂ ಈ ಮನೋಭಾವ ಇಂದಿಗೂ ಉಳಿದುಕೊಂಡಿದೆ.
ವೀರ ಸಾವರಕರ್ ಕ್ರಾಂತಿಕಾರಿಯಾದರೂ, ಬ್ರಿಟಿಷರಿಂದ ಅಂಡಮಾನ್ ಜೈಲಿನಲ್ಲಿ ಹತ್ತಾರು ವರ್ಷಗಳ ಶಿಕ್ಷೆ ಅನುಭವಿಸಿದರು. ಅವರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು" ಅಧಿಕಾರಕ್ಕಾಗಿ, ತಮ್ಮ ವಯಕ್ತಿಕ ಸ್ವಾರ್ಥಕ್ಕಾಗಿ, ಇನ್ಯಾರನ್ನೋ ಮೆಚ್ಚಿಸಲಿಕ್ಕಾಗಿ ಈ ದೇಶದ ಅಸ್ಮಿತೆಯನ್ನೇ ವಿರೋಧಿಸುತ್ತಾರೆಂದರೆ, ಅದು ನಮ್ಮದೇ ಸ್ವತಂತ್ರ ಭಾರತದಲ್ಲಿ!. ಅದನ್ನು ಊಹಿಸಲೂ, ಸಹಿಸಲೂ ಸಾಧ್ಯವಿಲ್ಲ. ಎಂದು ಅವರು ಹೇಳಿದ್ದಾರೆ.