ಯಲ್ಲಾಪುರ : ತಾಲೂಕಿನ ಕಂಪ್ಲಿ ಮತ್ತು ಹಾಸಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಸರಿಪಡಿಸುವಂತೆ ಆಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಸಾರ್ವಜನಿಕರು ಗುರುವಾರ ಮಂಚಿಕೇರಿ ಹೆಸ್ಕಾಂ ಶಾಖಾಧಿಕಾರಿ ನಾಗಾರಾಜ ಆಚಾರಿಗೆ ಮನವಿ ಸಲ್ಲಿಸಿದರು.
ಮಂಚಿಕೇರಿ ಹೆಸ್ಕಾಂ ಶಾಖೆಯ ವ್ಯಾಪ್ತಿಯಲ್ಲಿ ಬರುವ ಕಂಪ್ಲಿ ಮತ್ತು ಹಾಸಣಗಿ ಪಂಚಾಯತ ಗ್ರಾಮಸ್ಥರು ಕಳೆದ ಒಂದು ತಿಂಗಳಿಂದ ಊರಿನಲ್ಲಿ ವಿದ್ಯುತ್ ದಿನಕ್ಕೆ 3 ತಾಸು ಸರಿಯಾಗಿ ಇರುವುದೇ ಕಷ್ಟವಾಗಿದೆ. ಮಳೆಗಾಲದ ಪ್ರಾರಂಭದಲ್ಲಿ ವಿದ್ಯುತ್ ಸರಿಯಾಗಿ ಕೊಡಲು ಬೇಕಾದ ವ್ಯವಸ್ಥೆಯನ್ನು ತಾವುಗಳು ಮಾಡಿಕೊಳ್ಳದೇ ಹೋದಲ್ಲಿ ತಮ್ಮ ಇಲಾಖೆಯ ನಿಷ್ಕಾಳಜಿಯನ್ನು ತೋರಿಸುತ್ತದೆ. ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಅಂತ ತಿಳಿದಿದ್ದೇವೆ' ಈ ಕೂಡಲೇ ವಿದ್ಯುತ್ ಬಳಕೆದಾರರಾದ ನಾವುಗಳು ಬರುವ ಇನ್ನೊಂದು ವಾರದಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಮನವಿಯಲ್ಲಿ ಕೇಳಿಕೊಂಡಿದ್ದಾರೆ.
ಇನ್ನೊಂದು ವಾರದಲ್ಲಿ ವಿದ್ಯುತ್ ಅವ್ಯವಸ್ಥೆಯನ್ನು ಸರಿಪಡಿಸದೇ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಘವೇಂದ್ರ ಭಟ್ ಹಾಸಣಗಿ, ಕಂಪ್ಲಿ ಪಂಚಾಯತಿ ಉಪಾಧ್ಯಕ್ಷ ಸದಾಶಿವ ಚಿಕ್ಕೋತಿ, ಸದಸ್ಯ ರಘುಪತಿ ಹೆಗಡೆ, ಹಾಸಣಗಿ ಪಂಚಾಯಿತಿ ಅಧ್ಯಕ್ಷೆ ವಿನೋದಾ ಬಿಲ್ಲವ, ಉಪಾಧ್ಯಕ್ಷ ಪುರಂದರ ನಾಯ್ಕ, ಪ್ರಮುಖರಾದ ಪವನ್ ಕೈಸರಕರ್, ದಿನಕರ ಪೂಜಾರಿ, ಮುಸ್ತಾಕ್ ಶೇಖ್, ಬಾಲಚಂದ್ರ ಹೆಗಡೆ, ಹಿರಿಯಾ ಪೂಜಾರಿ ಹಾಗೂ ಇನ್ನಿತರರು ಇದ್ದರು.