ಯಲ್ಲಾಪುರ: ಕಳೆದ ವಾರದಿಂದ ಯಲ್ಲಾಪುರ ತಾಲೂಕಿನಲ್ಲಿ ಮಳೆ ಅಟ್ಟಹಾಸ ಮೆರೆದಿತ್ತು, ಗುರುವಾರ, ಶುಕ್ರವಾರ ಕಡಿಮೆ ಪ್ರಮಾಣದಲ್ಲಿ ಸುರಿದರೆ, ಶನಿವಾರದಿಂದ ಮತ್ತೆ ಪ್ರಾರಂಭವಾಗಿ ರವಿವಾರ ಬೆಳಿಗ್ಗೆಯವರೆಗೂ ಮುಂದುವರೆದಿದೆ.
ನಿರಂತರವಾಗಿ ಸಣ್ಣ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ, ಯಾವುದೇ ಅವಘಡಕ್ಕೆ ಕಾರಣವಾಗದಿದ್ದರೂ, ಬಿಟ್ಟು ಬಿಡದೇ ಸುರಿಯುತ್ತಿರುವುದರಿಂದ ಜನರಿಗೆ ತುಂಬಾ ಬೇಸರ ತರಿಸಿದೆ. ದ್ವೀಚಕ್ರ ವಾಹನಸವಾರರಿಗೆ ಪಾದಚಾರಿಗಳಿಗೆ ಬಯಲಿನಲ್ಲಿಕೆಲಸಮಾಡುವ ಕಾರ್ಮಿಕರಿಗೆ, ರೈತರು ಮತ್ತು ದೈನಂದಿನ ಕೆಲಸಗಾರರು ತುಂಬಾ ಬೇಸತ್ತಿದ್ದಾರೆ.
ಕರಾವಳಿ ಮಲೇನಾಡಿನಲ್ಲಿ ಮಳೆ ಇನ್ನೂ ನಾಲ್ಕು ದಿನಹ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಗಳು ಸೂಚನೆ ನೀಡಿದ್ದು, ನಾಲ್ಕೈದು ದಿನ ಸಹಿಸಿಕೊಂಡು ಹೋಗಬೇಕಾಗಿದೆ.
ಮಳೆ ಯಾವಾಗ ತಗ್ಗುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಜನತೆ ಈ ಪರಿಸ್ಥಿತಿಗೆ ತಾವು ಹೇಗೆ ಮುಕ್ತವಾಗಬೇಕೆಂದು ಯೋಚಿಸುತ್ತಿದ್ದಾರೆ.
ಭಾರೀ ಮಳೆ ಸಾಧ್ಯತೆ: ಉತ್ತರಕನ್ನಡ ಸೇರಿ ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್
ಕೇರಳದ ಕರಾವಳಿಯಿಂದ ಹಿಡಿದು ಗುಜರಾತ್ ಕರಾವಳಿ ವರೆಗೆ ತೇವಾಂಶ ಭರಿತ ದಟ್ಟ ಮೋಡಗಳು ರಚನೆಯಾಗಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲಿ ಮುಂದಿನ ನಾಲೈದು ದಿನ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಂದಿನ 2 ದಿನಗಳು ಅತಿಯಾದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಜುಲೈ 14 ಹಾಗೂ 15ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಅವಧಿಯಲ್ಲಿ ದಿನಕ್ಕೆ 204 ಮಿಮೀ ಮಳೆ ಬೀಳಬಹುದು ಎಂದು ಅಂದಾಜಿಸಿದೆ. ಜುಲೈ 16, 17ರಂದು ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಭಾನುವಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಾಳಿಯ ವೇಗವು 40-50 ಕಿ.ಮೀ. ತಲುಪುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.