ಯಲ್ಲಾಪುರ ; ತಾಲೂಕಿನ ಅತಿ ದೊಡ್ಡ ಗ್ರಾಮವಾಗಿರುವ ಕಿರವತ್ತಿಯಲ್ಲಿ ಬುಧವಾರ ಮುಸ್ಲಿಂ ಸಮುದಾಯದವರು ಶ್ರದ್ಧೆ ಹಾಗೂ ಭಕ್ತಿ ನೋವು ನಲಿವುಗಳಿಂದ ಮಮ್ಮದ್ ಪೈಗಂಬರ್ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್ ಇಸ್ಲಾಂ ರಕ್ಷಣೆಗಾಗಿ ಬಲಿದಾನ ಗೈದ ದಿನವನ್ನು ಮೋಹರಂ ಎಂದು ಆಚರಿಸಿದರು.
ಕಿರವತ್ತಿ ಮೋಹರಂ ಕಮಿಟಿ ವತಿಯಿಂದ ಆಚರಿಸಲಾದ ಮೊಹರಂ ಹಬ್ಬದ ನೇತೃತ್ವವನ್ನು ಮಕ್ಸೂದ್ ಶೇಖ, ಹರೂನ್ ಶೇಖ, ಕುತುಬ್ ಅಂಚಿ, ಮುಸ್ತಾಕ ಶೇಖ, ಅಹ್ಮದ್ ಕೋಳಿಕೇರಿ, ಫಜ್ಜು ಮುಲ್ಲಾ, ಮೌಲಾಲಿ ಪಟೇಲ್, ಮೆಹಬೂಬ್ ಅಲಿ ಬಮ್ಮಕಟ್ಟಿ ಮುಂತಾದವರು ವಹಿಸಿದ್ದರು. ಯಲ್ಲಾಪುರ ಪೊಲೀಸ್‌ರು ಸೂಕ್ತ ಬಂಧೋಬಸ್ತ ಕೈಗೊಂಡಿದ್ದರು.