ಯಲ್ಲಾಪುರ ; ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳ ಶಾಲೆ ಕಾಲೇಜುಗಳು ನಾಳೆ (ಜುಲೈ 23)ರಂದು ಪುನರಾರಂಭವಾಗುವುದು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ನಾಳೆ ಶಾಲೆಗೆ ಹಾಜರಾಗಬೇಕು. ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರಿ ಮಳೆ, ಗುಡ್ಡ ಕುಸಿತ, ಭೂಕುಸಿತ, ರಸ್ತೆಯ ಮೇಲೆ ಮರ ಬೀಳುವುದು ಇತ್ಯಾದಿ ಅವಘಡ ಗಳಿಗೆ ಮಕ್ಕಳು ತುತ್ತಾಗಬಾರದು ಎಂದು ಜಿಲ್ಲಾಡಳಿತ ಜುಲೈ 15 ಸೋಮವಾರದಿಂದ ಜುಲೈ 22ರವರೆಗೆ ಪ್ರತಿದಿನ ಸಂಜೆ ಮಾರನೇ ದಿನದ ಸಂದರ್ಭವನ್ನು ಅವಲೋಕಿಸಿ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಒಟ್ಟು ಎಂಟು ದಿನ ರಜೆ ನೀಡಿತ್ತು( ಒಂದು ರವಿವಾರ ಇನ್ನೊಂದು ಮೊಹರಂ ರಜೆ ಹೊರತುಪಡಿಸಿ). ಸೋಮವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಯುತ್ತಿರುವ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮುಂಜಾಗೃತ ಕ್ರಮವಾಗಿ ಹವಾಮಾನ ಇಲಾಖೆ ಕೂಡ ಯಾವುದೇ ಮುನ್ಸೂಚನೆ ನೀಡದೆ ಇರುವ ಕಾರಣಕ್ಕೆ ಜಿಲ್ಲಾಡಳಿತ ಮಂಗಳವಾರದಿಂದ ಶಾಲೆ ಕಾಲೇಜುಗಳು ಪುನರಾರಂಭಗೊಳ್ಳಲಿದೆ. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಉಪನ್ಯಾಸಕರು ಹಾಜರಿರಬೇಕಾಗಿ ಸೂಚಿಸಿದೆ.