ಯಲ್ಲಾಪುರ : ಪಟ್ಟಣದ ಬಾಳಗಿಮನೆ ಬಳಿ ರಾಹೆ 63 ರ ಮೇಲೆ ಸಂಭವಿಸಿದ ಭಾರೀ ಅಪಘಾತದಲ್ಲಿ ಟ್ಯಾಂಕರ ಚಾಲಕ ಮಹಾಂತೇಶ ನಾರಾಯಣ ಗೌಂಡರ್(37) ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಂದಕೇರಿ ನಿವಾಸಿಯಾದ ಮಹಾಂತೇಶ, ತನ್ನ ಕೆ.ಎ-22/ಎಎ-4143 ನಂಬರ್ ಹೊಂದಿರುವ ಟ್ಯಾಂಕರನ್ನು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿ ಕೊಂಡು ಬಂದು, ಬಾಳಗಿಮನೆ ಶಾಲೆ ಹತ್ತಿರ, ರಾಷ್ಟ್ರೀಯ ಹೆದ್ದಾರಿ 63 ರಲ್ಲಿ, ಟ್ಯಾಂಕರ ಚಾಲಕ ತನ್ನ ಮುಂದೆ ಹೋಗುತ್ತಿದ್ದ ಒಂದು ವಾಹನಕ್ಕೆ ಓವರ್‌ಟೇಕ್ ಮಾಡಲು ಯತ್ನಿಸಿ, ಕಾರವಾರ ಕಡೆಗೆ ಹೋಗುತ್ತಿದ್ದ ಮಹೇಶ ಗಜಾನನ ಮಡಿವಾಳ(49) ಎಂಬುವವರ ಕೆ.ಎ-47/ಎಮ್-2789 ನಂಬರ್ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದಿಂದಾಗಿ ಟ್ಯಾಂಕರ ಚಾಲಕ ಮಹಾಂತೇಶ, ಅದೇ ವೇಗದಲ್ಲಿ ಮುಂದೆ ಹೋಗಿ, ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಮೋಟಾರ ಸೈಕಲ್ (ನಂಬರ್: ಕೆ.ಎ-65/ಜೆ-7183) ಮೇಲೆ ಟ್ಯಾಂಕರ ಹತ್ತಿಸಿ ಮೋಟಾರ ಸೈಕಲ್ ಜಕಂ ಮಾಡಿದ್ದಾನೆ.
ಈ ಅಪಘಾತದ ಕುರಿತು ಮಹೇಶ ಮಡಿವಾಳ ಅವರು ಟ್ಯಾಂಕರ ಚಾಲಕ ಮಹಾಂತೇಶ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್ಐ ಸಿದ್ದಪ್ಪ ಗುಡಿಸಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.