ಯಲ್ಲಾಪುರ ; ಯಲ್ಲಾಪುರ ಮುಂಡಗೋಡ ತಾಲೂಕಿನ ಗಡಿ ಗುರುತಿಸುವ ಸಿಡ್ಲಗುಂಡಿ ಹಳ್ಳ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ.
ಹುಬ್ಬಳ್ಳಿ, ಧಾರವಾಡ, ಕಲಘಟಗಿ ಮುಂಡಗೋಡ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಸಿಡ್ಲಗುಂಡಿ ಹಳ್ಳಕ್ಕೆ ನೀರು ಹರಿದು ಬರುತ್ತದೆ, ಮುಂಡಗೋಳ ಯಲ್ಲಾಪುರ ರಸ್ತೆಯ ಶಿಡ್ಲಗುಂಡಿಯಲ್ಲಿ ಹಳ್ಳದ ಮೇಲೆ ಹೊಸ ಸೇತುವೆ ಕಟ್ಟಿದ್ದು, ಬಹಳಷ್ಟು ಎತ್ತರದಲ್ಲಿ ಸೇತುವೆ ಕಟ್ಟಿರುವುದರಿಂದ ಹಿಂದಿನ ಬ್ರಿಟಿಷ ಕಾಲದ ಸೇತುವೆಯಂತೆ ಹಳ್ಳದ ನೀರು ಸೇತುವೆ ಮೇಲೆ ಹರಿದು ಬರಲು ಸಾಧ್ಯವಿಲ್ಲ. ಹೀಗಾಗಿ ನೀರಿನ ಪ್ರಮಾಣ ಹೆಚ್ಚಿದ್ದರೂ ಕೂಡ ಎತ್ತರದ ಸೇತುವೆ ಮೇಲೆ ನಿಂತು ನೋಡಿದಾಗ ನೀರು ಕೆಳಮಟ್ಟದಲ್ಲಿ ಹರಿಯುತ್ತಿರುವಂತೆ ಭಾಸವಾಗುತ್ತದೆ.
ಶಿಡ್ಲಗುಂಡಿ ಹಳ್ಳದಿಂದ ಬರುವ ನೀರು ಮುಂದೆ ಹರಿದು ಬೇಡ್ತಿಗೆ ನದಿಗೆ ಸೇರುತ್ತದೆ. ಮುಂದೆ ಮಾಗೋಡು ಜಲಪಾತದ ದುಮ್ಮಿಕ್ಕಿದ ನಂತರ ಘಟ್ಟದ ಕೆಳಗೆ ಗಂಗಾವಳಿ ನದಿಯಾಗಿ ಪರಿವರ್ತನೆಯಾಗುತ್ತದೆ. ಸಿಡ್ಲಗುಂಡಿ ಹಳ್ಳಕ್ಕೆ ಸೇರುವ ಹುಬ್ಬಳ್ಳಿ ಧಾರವಾಡ ಕಲಘಟಗಿ ಮುಂಡಗೋಡ ಮಳೆಯ ನೀರು, ನಂತರ ಸಮುದ್ರಕ್ಕೆ ಸೇರುತ್ತದೆ.
ಒಮ್ಮೊಮ್ಮೆ ಯಲ್ಲಾಪುರದಲ್ಲಿ ಮಳೆ ಸುರಿಯದಿದ್ದರೂ ಕೂಡ ಧಾರವಾಡ ಹುಬ್ಬಳ್ಳಿಗಳಲ್ಲಿ ಸುರಿದ ಮಳೆಯಿಂದಾಗಿ ಬೇಡ್ತಿ ನದಿ ತುಂಬಿ ಹರಿದ ಉದಾಹರಣೆಗೆ ಇದೇ. ಗುರುವಾರಕ್ಕಿಂತ ಬುಧವಾರ 82.2 ಮಿ.ಮೀ ಮಳೆಯಾಗಿದೆ. ಬೇಡ್ತಿ ಪಾತ್ರದಲ್ಲಿ ಸುರಿಯುವ ಮಳೆಯನ್ನು ಹೊರತುಪಡಿಸಿ, ಯಲ್ಲಾಪುರದಲ್ಲಿ ಸುರಿಯುವ ಮಳೆ ಬೇಡ್ತಿ ಅಥವಾ ಗಂಗಾವಳಿ ನದಿಗೆ ಯಾವುದೇ ಪರಕ್ ಬಿಳುವುದಿಲ್ಲ. ಹೀಗಾಗಿ ಬೇಡ್ತಿ ನದಿಯ ತುಂಬಿ ಹರಿಯುವಾಗ ಸಿಡ್ಲಗುಂಡಿಯಲ್ಲಿ ಸೇರುವ ನೀರು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಯಲ್ಲಾಪುರ ತಾಲೂಕಿನ ಅತ್ಯಂತ ಬುಧವಾರ ಭಯಾನಕ ವಾತಾವರಣವನ್ನು ಸೃಷ್ಟಿಸಿದ ಭಾರಿ ಮಳೆ ಗುರುವಾರ ದಿನ ತಣ್ಣಗಾಗಿದ್ದು ಆಗಾಗ ಬಿಟ್ಟು ಸುರಿದಿದ್ದು ಬಿಟ್ಟರೆ ನಿರಂತರವಾಗಿ ಜೋರಾಗಿ ಸುರಿದಿಲ್ಲ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.
ಮಳೆಗಾಲದಲ್ಲಿ ಆಕರ್ಷಣೀಯ ತಾಣವಾದ ಕೊಚ್ಚಿಹೋದ ಗುಳ್ಳಾಪುರ ಸೇತುವೆ
ಗುಳ್ಳಾಪುರ ಹಳವಳ್ಳಿ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ, ಗುಳ್ಳಾಪುರ ಹಳವಳ್ಳಿ ಮಾರ್ಗಮಧ್ಯದ ಸೇತುವೆ ಕೊಚ್ಚಿಹೋಗು ಜುಲೈ ತಿಂಗಳಲ್ಲಿ ಮೂರು ವರ್ಷ ಕಳೆದಿದೆ. ಉಕ್ಕೇರಿ ಹರಿಯುವ ಗಂಗಾವಳಿ ನದಿಯ ಕೊಚ್ಚಿ ಹೋದ ಸೇತುವೆ ಕೆಳಗೆ ಹರಿಯುತ್ತಿದ್ದು, ಈ ರುದ್ರರಮಣಿಯ ದೃಶ್ಯವನ್ನು ನೋಡಲು ಸ್ಥಳೀಯರು ಕೊಚ್ಚಿ ಹೋದ ಸೇತುವೆ ಎರಡು ಭಾಗದಲ್ಲಿ ಸೇರಿ ತಮ್ಮ ಮೊಬೈಲ್ ನಲ್ಲಿ ನೀರಿನ ಹರಿವನ್ನು ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ.
23 ಜುಲೈ 2021ರ ರಾತ್ರಿ ಸಮಯದಲ್ಲಿ ಯಲ್ಲಾಪುರ ತಾಲೂಕು ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಸುರಿದ ಭಾರೀ ನೀರಿನ ಹರಿವಿನ ರಭಸಕ್ಕೆ ಸೇತುವೆ ಮಧ್ಯ ಭಾಗದಲ್ಲಿ ಕೊಚ್ಚಿಹೋಗಿತ್ತು, ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಹಳವಳ್ಳಿ, ಕಮ್ಮಾಣಿ, ಶೇವಕಾರ ಸೇರಿದಂತೆ ಹತ್ತಾರು ಹಳ್ಳಿಗಳ 3000 ಕ್ಕೂ ಹೆಚ್ಚು ಜನ ರಸ್ತೆ ಸಂಪರ್ಕ ಇಲ್ಲದೇ ಅತಂತ್ರ ವಾಗುವಂತೆ ಮಾಡಿತ್ತು. ಇದೀಗ ಅಂತಹುದೆ ಮಳೆ ಸುರಿಯುತ್ತಿರುವ ಕಾರಣಕ್ಕೆ ಜನ ಕುತೂಹಲದಿಂದ ಕೊಚ್ಚುವುದು ಸೇತುವೆ ಸಮೀಪ ಬಂದು ನೀರಿನ ಶಕ್ತಿಯನ್ನು ನೋಡುತ್ತಿದ್ದಾರೆ.