Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Thursday, 4 July 2024

ಬೀಗಾರ-ಕಳಚೆ ರಸ್ತೆ ಕುಸಿತ: ಸಂಚಾರ ಸ್ಥಗಿತ, ಗ್ರಾಮಸ್ಥರಿಗೆ ಎಚ್ಚರಿಕೆ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯ ಬೀಗಾರ ಗ್ರಾಮದಿಂದ ಕಳಚೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಾಗಿನಕಟ್ಟಾ ಬಳಿ ಕುಸಿತವಾದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಈ ಘಟನೆಯಿಂದಾಗಿ ಗ್ರಾಮಸ್ಥರು ತೊಂದರೆಗೆ ಸಿಲುಕಿದ್ದಾರೆ.
ಕುಸಿತಕ್ಕೆ ಕಾರಣ:

 * ಅತಿಯಾದ ಮಳೆ: 
ಇತ್ತೀಚಿನ ದಿನಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ರಸ್ತೆ ದುರ್ಬಲಗೊಂಡು ಕುಸಿದಿದೆ ಎಂದು ಊಹಿಸಲಾಗಿದೆ.
 * ಕಳಪೆ ನಿರ್ಮಾಣ: 
ರಸ್ತೆಯ ನಿರ್ಮಾಣ ಗುಣಮಟ್ಟ ಕಳಪೆಯಾಗಿತ್ತು ಎಂದು ಕೆಲವು ಗ್ರಾಮಸ್ಥರು ಆರೋಪಿಸಿದ್ದಾರೆ:

 * ರಸ್ತೆ ಸಂಚಾರ ಸ್ಥಗಿತ: 
ರಸ್ತೆ ಕುಸಿತದಿಂದಾಗಿ ಬೀಗಾರ ಮತ್ತು ಕಳಚೆ ಗ್ರಾಮಗಳ ನಡುವಿನ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಶಾಲೆ, ಆಸ್ಪತ್ರೆ ಮತ್ತು ಇತರ ಅಗತ್ಯ ಸೇವೆಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ.

 * ಭಾರಿ ವಾಹನ ಸಂಚಾರ ನಿಷೇಧ: 
ಭಾರಿ ಗಾತ್ರದ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಕ್ರಮಗಳು:
 * ಪರಿಶೀಲನೆ: 
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಬಂಟ್, ಸಹಾಯಕ ಇಂಜಿನಿಯರ್ ಮೀನಾಕ್ಷಿ ಮಾಸ್ತಿಮನೆ, ಮತ್ತು ಗುತ್ತಿಗೆದಾರ ನವೀನ ಕಿರಗಾರೆ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

 * ಮುನ್ನೆಚ್ಚರಿಕೆ ಕ್ರಮಗಳು: 
ಕುಸಿತದ ಸ್ಥಳದಲ್ಲಿ ಕೆಂಪು ರಿಬ್ಬನ್ ಕಟ್ಟಿ ಅಪಾಯಕಾರಿ ಸ್ಥಳ ಎಂದು ಗುರುತಿಸಲಾಗಿದೆ.

 * ಸಂಚಾರ ನಿರ್ಬಂಧ: 
ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
 * ಸಾರ್ವಜನಿಕರಿಗೆ ತಿಳುವಳಿಕೆ: 
ಗ್ರಾಮಸ್ಥರಿಗೆ ಈ ಬಗ್ಗೆ ತಿಳಿಸಲಾಗಿದ್ದು, ರಸ್ತೆ ಬಳಸುವಾಗ ಜಾಗರೂಕರಾಗಿರಲು ಸೂಚಿಸಲಾಗಿದೆ.

 * ದುರಸ್ತಿ ಕಾರ್ಯ: 
ಕುಸಿದ ರಸ್ತೆಯನ್ನು ತ್ವರಿತವಾಗಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 * ಸ್ಥಾಯಿ ಪರಿಹಾರ: 
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ.

ಗ್ರಾಮಸ್ಥರ ಆಗ್ರಹ:
 * ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯ. 
 * ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಅಧಿಕಾರಿಗಳಲ್ಲಿ‌ ಮನವಿ.

 

ಗಾಣಿಗಾಪುರ ದತ್ತಾತ್ರೇಯ ದೇವಾಲಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಸಭೆಯ ಶಾಸಕ ಹೆಬ್ಬಾರ್ ಭಾಗಿ

ಕಲ್ಬುರ್ಗಿ/ಯಲ್ಲಾಪುರ : ಶಾಸಕ ಶಿವರಾಮ ಹೆಬ್ಬಾರ್ ಅವರು ಗುರುವಾರ ಅಪಜಲಪುರ ತಾಲೂಕಿನ ಗಾಣಿಗಾಪುರ ದತ್ತಾತ್ರೇಯ ದೇವಾಲಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಕುರಿತಂತೆ ಕಲ್ಬುರ್ಗಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅರ್ಜಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು‌.
   ಪುರಾಣಪ್ರಸಿದ್ದ ಶ್ರೀ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ವಸತಿ ಯೋಜನೆ ಹಾಗೂ ಮೂಲಭೂತ ಸೌಕರ್ಯಗಳ ಕುರಿತಂತೆ ಶಾಸಕರು ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
   ಈ ಸಂದರ್ಭದಲ್ಲಿ ವಿಧಾಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಸುರೇಶ ಕುಮಾರ್, ಎಸ್ ಟಿ ಸೋಮಶೇಖರ್, ಅಫಜಲ್‌ಪುರ ಶಾಸಕರು. ಜಿಲ್ಲಾಧಿಕಾರಿ ಫೌಜಿಯಾ, ಅಪರಜಿಲ್ಲಾಧಿಕಾರಿ ರಾಯಪ್ಪ ಸೇರಿದಂತೆ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತುಂಬಿ ಹರಿಯುತ್ತಿರುವ ಸಿಡ್ಲಗುಂಡಿ ಹಳ್ಳ, ಹಿಂದೆ ಕೊಚ್ಚಿಹೋದ ಗುಳ್ಳಾಪುರ ಸೇತುವೆಯ ಕೆಳಗೆ ನೀರನ್ನು‌ ಕುತೂಹಲದಿಂದ ನೋಡುತ್ತಿರುವ ಜನ

ಯಲ್ಲಾಪುರ ; ಯಲ್ಲಾಪುರ ಮುಂಡಗೋಡ ತಾಲೂಕಿನ ಗಡಿ ಗುರುತಿಸುವ ಸಿಡ್ಲಗುಂಡಿ ಹಳ್ಳ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. 
    ಹುಬ್ಬಳ್ಳಿ, ಧಾರವಾಡ, ಕಲಘಟಗಿ ಮುಂಡಗೋಡ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಸಿಡ್ಲಗುಂಡಿ ಹಳ್ಳಕ್ಕೆ ನೀರು ಹರಿದು ಬರುತ್ತದೆ, ಮುಂಡಗೋಳ ಯಲ್ಲಾಪುರ ರಸ್ತೆಯ ಶಿಡ್ಲಗುಂಡಿಯಲ್ಲಿ ಹಳ್ಳದ ಮೇಲೆ ಹೊಸ ಸೇತುವೆ ಕಟ್ಟಿದ್ದು, ಬಹಳಷ್ಟು ಎತ್ತರದಲ್ಲಿ ಸೇತುವೆ ಕಟ್ಟಿರುವುದರಿಂದ ಹಿಂದಿನ ಬ್ರಿಟಿಷ ಕಾಲದ ಸೇತುವೆಯಂತೆ ಹಳ್ಳದ ನೀರು ಸೇತುವೆ ಮೇಲೆ ಹರಿದು ಬರಲು ಸಾಧ್ಯವಿಲ್ಲ. ಹೀಗಾಗಿ ನೀರಿನ ಪ್ರಮಾಣ ಹೆಚ್ಚಿದ್ದರೂ ಕೂಡ ಎತ್ತರದ ಸೇತುವೆ ಮೇಲೆ ನಿಂತು ನೋಡಿದಾಗ ನೀರು ಕೆಳಮಟ್ಟದಲ್ಲಿ ಹರಿಯುತ್ತಿರುವಂತೆ ಭಾಸವಾಗುತ್ತದೆ. 
 
  ಶಿಡ್ಲಗುಂಡಿ ಹಳ್ಳದಿಂದ ಬರುವ ನೀರು ಮುಂದೆ ಹರಿದು ಬೇಡ್ತಿಗೆ ನದಿಗೆ ಸೇರುತ್ತದೆ. ಮುಂದೆ  ಮಾಗೋಡು ಜಲಪಾತದ ದುಮ್ಮಿಕ್ಕಿದ ನಂತರ ಘಟ್ಟದ ಕೆಳಗೆ ಗಂಗಾವಳಿ ನದಿಯಾಗಿ ಪರಿವರ್ತನೆಯಾಗುತ್ತದೆ. ಸಿಡ್ಲಗುಂಡಿ ಹಳ್ಳಕ್ಕೆ ಸೇರುವ ಹುಬ್ಬಳ್ಳಿ ಧಾರವಾಡ ಕಲಘಟಗಿ ಮುಂಡಗೋಡ ಮಳೆಯ ನೀರು, ನಂತರ ಸಮುದ್ರಕ್ಕೆ ಸೇರುತ್ತದೆ. 
    ಒಮ್ಮೊಮ್ಮೆ ಯಲ್ಲಾಪುರದಲ್ಲಿ ಮಳೆ ಸುರಿಯದಿದ್ದರೂ ಕೂಡ ಧಾರವಾಡ ಹುಬ್ಬಳ್ಳಿಗಳಲ್ಲಿ ಸುರಿದ ಮಳೆಯಿಂದಾಗಿ ಬೇಡ್ತಿ ನದಿ ತುಂಬಿ ಹರಿದ ಉದಾಹರಣೆಗೆ ಇದೇ. ಗುರುವಾರಕ್ಕಿಂತ ಬುಧವಾರ 82.2 ಮಿ.ಮೀ ಮಳೆಯಾಗಿದೆ. ಬೇಡ್ತಿ  ಪಾತ್ರದಲ್ಲಿ ಸುರಿಯುವ ಮಳೆಯನ್ನು ಹೊರತುಪಡಿಸಿ, ಯಲ್ಲಾಪುರದಲ್ಲಿ ಸುರಿಯುವ ಮಳೆ ಬೇಡ್ತಿ ಅಥವಾ ಗಂಗಾವಳಿ ನದಿಗೆ ಯಾವುದೇ ಪರಕ್ ಬಿಳುವುದಿಲ್ಲ. ಹೀಗಾಗಿ ಬೇಡ್ತಿ ನದಿಯ ತುಂಬಿ ಹರಿಯುವಾಗ ಸಿಡ್ಲಗುಂಡಿಯಲ್ಲಿ ಸೇರುವ ನೀರು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. 
   ಯಲ್ಲಾಪುರ ತಾಲೂಕಿನ ಅತ್ಯಂತ ಬುಧವಾರ ಭಯಾನಕ ವಾತಾವರಣವನ್ನು ಸೃಷ್ಟಿಸಿದ ಭಾರಿ ಮಳೆ ಗುರುವಾರ ದಿನ ತಣ್ಣಗಾಗಿದ್ದು ಆಗಾಗ ಬಿಟ್ಟು ಸುರಿದಿದ್ದು ಬಿಟ್ಟರೆ ನಿರಂತರವಾಗಿ ಜೋರಾಗಿ ಸುರಿದಿಲ್ಲ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.

ಮಳೆಗಾಲದಲ್ಲಿ ಆಕರ್ಷಣೀಯ ತಾಣವಾದ ಕೊಚ್ಚಿಹೋದ ಗುಳ್ಳಾಪುರ ಸೇತುವೆ
ಗುಳ್ಳಾಪುರ ಹಳವಳ್ಳಿ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ, ಗುಳ್ಳಾಪುರ ಹಳವಳ್ಳಿ ಮಾರ್ಗಮಧ್ಯದ ಸೇತುವೆ ಕೊಚ್ಚಿಹೋಗು ಜುಲೈ ತಿಂಗಳಲ್ಲಿ ಮೂರು ವರ್ಷ ಕಳೆದಿದೆ. ಉಕ್ಕೇರಿ ಹರಿಯುವ ಗಂಗಾವಳಿ ನದಿಯ ಕೊಚ್ಚಿ ಹೋದ ಸೇತುವೆ ಕೆಳಗೆ ಹರಿಯುತ್ತಿದ್ದು, ಈ ರುದ್ರರಮಣಿಯ ದೃಶ್ಯವನ್ನು ನೋಡಲು ಸ್ಥಳೀಯರು ಕೊಚ್ಚಿ ಹೋದ ಸೇತುವೆ ಎರಡು ಭಾಗದಲ್ಲಿ ಸೇರಿ ತಮ್ಮ ಮೊಬೈಲ್ ನಲ್ಲಿ ನೀರಿನ ಹರಿವನ್ನು ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ.
   
23 ಜುಲೈ 2021ರ ರಾತ್ರಿ ಸಮಯದಲ್ಲಿ ಯಲ್ಲಾಪುರ ತಾಲೂಕು ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಸುರಿದ ಭಾರೀ ನೀರಿನ ಹರಿವಿನ ರಭಸಕ್ಕೆ ಸೇತುವೆ ಮಧ್ಯ ಭಾಗದಲ್ಲಿ ಕೊಚ್ಚಿಹೋಗಿತ್ತು, ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಹಳವಳ್ಳಿ, ಕಮ್ಮಾಣಿ, ಶೇವಕಾರ ಸೇರಿದಂತೆ ಹತ್ತಾರು ಹಳ್ಳಿಗಳ 3000 ಕ್ಕೂ ಹೆಚ್ಚು ಜನ ರಸ್ತೆ ಸಂಪರ್ಕ ಇಲ್ಲದೇ ಅತಂತ್ರ ವಾಗುವಂತೆ ಮಾಡಿತ್ತು. ಇದೀಗ ಅಂತಹುದೆ ಮಳೆ ಸುರಿಯುತ್ತಿರುವ ಕಾರಣಕ್ಕೆ ಜನ ಕುತೂಹಲದಿಂದ ಕೊಚ್ಚುವುದು ಸೇತುವೆ ಸಮೀಪ ಬಂದು ನೀರಿನ ಶಕ್ತಿಯನ್ನು ನೋಡುತ್ತಿದ್ದಾರೆ.