Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 7 July 2024

ಬಿಜೆಪಿ ಮಹಿಳಾ ಮೋರ್ಚಾದಿಂದ‌ಕೃಷಿ ಸಖಿ ಶ್ರೀಲತಾ ಹೆಗಡೆ ಸನ್ಮಾನ

ಯಲ್ಲಾಪುರ : ವಾರಣಾಸಿಯಲ್ಲಿ ನಡೆದ ಕಿಸಾನ್ ಸಮ್ಮಾನ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಲ್ಲಾಪುರದ ಜಂಬೆಸಾಲ ಗ್ರಾಮದ ಕೃಷಿ ಸೇವಕಿ ಮತ್ತು ಕೃಷಿ ಸಖಿ ಶ್ರೀಲತಾ ಹೆಗಡೆ ಅವರನ್ನು ಸನ್ಮಾನಿಸಿದರು. 
   ಈ ಗೌರವವು ಇಡೀ ತಾಲ್ಲೂಕು ಮತ್ತು ಜಿಲ್ಲೆಗೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ. ಶ್ರೀಲತಾ ಅವರ ಈ ಸಾಧನೆಯು ಮಹಿಳಾ ಮೋರ್ಚಾ ಬಿಜೆಪಿ ಪಕ್ಷ ದಿಂದ ಸನ್ಮಾನಿಸಲಾಯಿತು. 
  ಕಾರ್ಯಕ್ರಮದ ಅನುಭವವನ್ನು ಶ್ರೀಲತಾ ಹೆಗಡೆ ಹಂಚಿಕೊಂಡಾಗ, ತಮ್ಮ ಸಾಧನೆಯು ರೈತರಿಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಮರ್ಪಿತವಾಗಿದೆ ಎಂದು ಹೇಳಿದರು. 
 ಬಿಜೆಪಿ‌ಮಹಿಳಾ ಮೋರ್ಚಾ ಸನ್ಮಾನ ಕಾರ್ಯಕ್ರಮದಲ್ಲಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಮಹಿಳಾ ಮೋರ್ಚಾ ಅಧ್ಯಕ್ಷ ಶ್ರುತಿ ಹೆಗಡೆ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್, ನಿಕಟಪೂರ್ವ ಅಧ್ಯಕ್ಷ ಜಿ ಎನ್ ಗಾಂವ್ಕರ,, ಎಸ್ ಸಿ ಮೋರ್ಚಾ ಅಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಮಂಡಳ ಉಪಾಧ್ಯಕ್ಷ ನಾಗರಾಜ ಕವಡಿಕೇರಿ, ಪ್ರಧಾನ ಕಾರ್ಯದರ್ಶಿಗಳಾದ ನಟರಾಜ ಗೌಡರ್ ಮತ್ತು ರವಿ ಕೈಟ್ಕರ,ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಾ ನಾಯ್ಕ, ಪಟ್ಟಣ ಪಂಚಾಯತಿ ಸದಸ್ಯೆ ಕಲ್ಪನಾ ನಾಯ್ಕ, ಪ್ರಮುಖರಾದ ಸುನೀತಾ ವೇರ್ಣೇಕರ್, ವೀಣಾ ಗಾಂವ್ಕರ, ಶಕ್ತಿಕೇಂದ್ರದ ಪ್ರಮುಖ ಅಪ್ಪು ಆಚಾರಿ, ಸುಬ್ಬಣ್ಣ ಉದ್ದಾಬೈಲ, ಬೂತ ಅಧ್ಯಕ್ಷ ಗೋಪಣ್ಣ ಮತ್ತು ಗಣಪತಿ ಹೆಗಡೆ  ಉಪಸ್ಥಿತರಿದ್ದರು.

ಭಾರಿ ಮಳೆಯಿಂದ ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ

ಯಲ್ಲಾಪುರ:  ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಭಟ್ಕಳ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಜಿಲ್ಲೆಯ ಇತರ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ, ಭಟ್ಕಳದಲ್ಲಿ ಮಾತ್ರ ನಿರಂತರ ಮಳೆ ಸುರಿಯುತ್ತಿದೆ.
  ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದೆ ರಸ್ತೆಯಲ್ಲಿ ಸಂಗ್ರಹವಾಗಿದೆ. ಸುಮಾರು ಮೂರು ಅಡಿಗಿಂತಲೂ ಹೆಚ್ಚು ನೀರು ರಸ್ತೆಯ ಮೇಲೆ ನಿಂತಿದೆ.
   ವಾಹನ ಚಾಲಕರು ರಸ್ತೆಯ ಹೊಂಡ ಮತ್ತು ತಗ್ಗುಗಳನ್ನು ತಪ್ಪಿಸಿ ವಾಹನ ಚಲಾಯಿಸಬೇಕಾಗಿದ್ದು, ಹೆಚ್ಚಿನವರು ಅಳುಕಿನಿಂದಲೇ ವಾಹನವನ್ನು ನೀರಿನಲ್ಲಿ ತೆಗೆದುಕೊಂಡು ತಮ್ಮ ಗಮ್ಯದತ್ತ ಸಾಗುತ್ತಿದ್ದಾರೆ.
   ಯಲ್ಲಾಪುರ ಮೂಲದ ಗೋಕರ್ಣ ನಿವಾಸಿ ಚೇತನ್ ನಾಯಕ ಮಂಗಳೂರಿನ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಗೋಕರ್ಣಕ್ಕೆ ಕಾರಿನಲ್ಲಿ ಬರುತ್ತಿರುವಾಗ ಈ ಸಮಸ್ಯೆಯನ್ನು ಎದುರಿಸಿದ್ದಾರೆ. ನೀರಿನಲ್ಲಿ ಮುಳುಗಿದ ರಸ್ತೆಯ ಚಿತ್ರಗಳನ್ನು ಸಹ ಅವರು ಯಲ್ಲಾಪುರ ನ್ಯೂಸ್ ಗೆ ಕಳುಹಿಸಿದ್ದಾರೆ.

ಅರಬೈಲ್ ಘಟ್ಟದಲ್ಲಿ ಮರ ಕಿತ್ತು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ

ಯಲ್ಲಾಪುರ : ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಅರಬೈಲ್ ಘಟ್ಟದಲ್ಲಿ ಶನಿವಾರವ ಮರ ಬುಡ ಸಮೇತ ಕಿತ್ತು ಬಿದ್ದು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ನಂತರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಮಾಣ ಘಟಕದವರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
 
   ಈ ವಾರದ ಆರಂಭದಲ್ಲಿ, ಬುಧವಾರ ಮತ್ತು ಗುರುವಾರ ದಾಖಲೆಯ ಮಳೆ ಸುರಿದ ನಂತರ ಶುಕ್ರವಾರ ಮತ್ತು ಶನಿವಾರ ಮಳೆ ಕಡಿಮೆಯಾಗಿತ್ತು. ಆದರೆ, ರವಿವಾರ ಬೆಳಿಗ್ಗೆಯಿಂದ ಮತ್ತೆ ನಿರಂತರ ಮಳೆ ಶುರುವಾಗಿದೆ. ಭಾರಿ ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಕೆಲವೆಡೆ ಭೂಕುಸಿತದಂತಹ ಸ್ಥಿತಿ ನಿರ್ಮಾಣವಾಗಿದೆ. ಅರಬೈಲ್ ಘಟ್ಟದ ಗುಡ್ಡದ ಮೇಲಿನ ಮಣ್ಣು ಸವೆತಕ್ಕೆ ಒಳಗಾಗಿ ಮರಗಳು ಬೀಳುವ ಸ್ಥಿತಿ ನಿರ್ಮಾಣವಾಗಿತ್ತು.
   ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಮಾಣ ಘಟಕ, ಸ್ಥಳೀಯ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ. ವಾಹನ ಸಂಚಾರ ಸುಗಮಗೊಳಿಸಲಾಗಿದೆ.
   ಭಾರಿ ಮಳೆಯಿಂದಾಗಿ ರಸ್ತೆಗಳು ಜಾರುವ ಸ್ಥಿತಿಯಲ್ಲಿವೆ. ವಾಹನ ಚಾಲಕರು ಜಾಗರೂಕರಾಗಿ ಚಾಲನೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಮಾಣ ಅರಬೈಲ್ ಉಸ್ತುವಾರಿ ಮುರುಗೇಶ ಶೆಟ್ಟಿ ಸೂಚನೆ ನೀಡಿದ್ದಾರೆ. 

ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಂಟೇನರ್ ಲಾರಿ: ಆರಬೈಲ್ ಘಟದಲ್ಲಿ ರಸ್ತೆ ಸಂಚಾರಕ್ಕೆ ವ್ಯತ್ಯಯ

ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿ 63 ರ ಆರ್ಭೈಲ್ ಘಟ್ಟದಲ್ಲಿ ಮಳೆಯ ಪ್ರಭಾವದಿಂದ ಕಂಟೇನರ್ ಲಾರಿ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಈ ಲಾರಿ ಯಲ್ಲಾಪುರ ತಾಲೂಕಿನಲ್ಲಿ ಸುರಿಯುತ್ತಿದ್ದ ಅತಿಯಾದ ಮಳೆಯಿಂದಾಗಿ ಜಾರುತ್ತಿದ್ದ ರಸ್ತೆಯ ಮೇಲೆ ನಿಯಂತ್ರಣ ಕಳೆದುಕೊಂಡು, ಚಾಲಕ ರಸ್ತೆಯ ಎಡಬಾಗದ ಚರಂಡಿಯಲ್ಲಿ ಲಾರಿಯನ್ನು ಉರುಳಿಸಿದ್ದಾನೆ.
 
 ಘಟನೆಯ ನಂತರ, ಜಿಸಿಬಿ ಹಾಗೂ ಟ್ರಾಲಿ ಬಳಸಿ ಲಾರಿಯನ್ನು ಎತ್ತುವ ಕಾರ್ಯದಲ್ಲಿ ಸುಮಾರು ಅರ್ಧ ತಾಸು ಕಾಲ ಸಂಚಾರಕ್ಕೆ ವ್ಯತ್ಯಯವಾಯಿತು. ಈ ಅವಧಿಯಲ್ಲಿ, ರಸ್ತೆಯ ಎರಡು ಬದಿಗಳಲ್ಲಿಯೂ ನೂರಾರು ವಾಹನಗಳು ನಿಂತುಕೊಂಡಿದ್ದವು.
 
 ಸ್ಥಳಕ್ಕೆ ತಕ್ಷಣ ಆಗಮಿಸಿದ ಯಲ್ಲಾಪುರ ಪೊಲೀಸರು, ತಕ್ಷಣವೇ ಕಾರ್ಯಚಟುವಟಿಕೆ ಕೈಗೊಂಡು, ರಸ್ತೆಯ ಸಂಚಾರವನ್ನು ಸುಗಮಗೊಳಿಸಿದರು. 

ಲಿಂಗನಕೊಪ್ಪ ಶಾಲೆಯ ಬಳಿ 10 ವರ್ಷದಷ್ಟು ಹಳೆಯ ಗಂಧದ ಮರ ಕಳ್ಳತನ

ಯಲ್ಲಾಪುರ ; ಪಟ್ಟಣ ವ್ಯಾಪ್ತಿಯಲ್ಲಿ ಲಿಂಗಾನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಸುಮಾರು 10 ರಿಂದ 12 ವರ್ಷದ ಬೆಳೆದ ಗಂಧದ ಮರವನ್ನು ಕಳ್ಳರು ಶನಿವಾರ ರಾತ್ರಿಯಿಂದ ರವಿವಾರ ಬೆಳಗ್ಗೆ ಮದ್ಯ ಕತ್ತರಿಸಿಕೊಂಡು ಹೋಗಿದ್ದಾರೆ. ಕಳ್ಳತನವಾದ ಗಂಧದ ಮರದ ಮೌಲ್ಯ ಅಂದಾಜು 2.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
   ಲಿಂಗನಕೊಪ್ಪ ಶಾಲೆಯ ಬಳಿಯ ನಿವಾಸಿ ಆಗಿರುವ ಸುರೇಶ್ ಯಲ್ಲಪ್ಪ ಪಾಟಣಕರ ಅವರ ಜಮೀನಿಗೆ ತಾಗಿ, ಮನೆಯಿಂದ ಸುಮಾರು 30 ಮೀಟರ್ ಅಂತರದಲ್ಲಿರುವ ಅರಣ್ಯ ವ್ಯಾಪ್ತಿಯ ಗಂಧದ ಮರ ಕಳ್ಳತನವಾಗಿದೆ. ಹರಿತವಾದ ಗರಗಸವನ್ನು ಬಳಸಿ ನೆಲದಿಂದ 6 ಇಂಚು ಎತ್ತರದಲ್ಲಿ ಮರವನ್ನು ಕತ್ತರಿಸಲಾಗಿದ್ದು, ಕಾಂಡದ ಅಳತೆಯೇ 8 ರಿಂದ 10 ಇಂಚು ಅಗಲವಾಗಿದೆ ಎಂದು ತಿಳಿದುಬಂದಿದೆ. ಕಳ್ಳರು ಗಂಧದ ಮರದ ಬೆಲೆ ಬಾಳುವ ತುಂಡುಗಳನ್ನು ಅಷ್ಟೇ ಕತ್ತರಿಸಿಕೊಂಡು ಹೋಹಿದ್ದಾರೆ, ಉಳಿದ ಭಾಗವನ್ನು ಅಲ್ಕಿಯೇ ಬಿಟ್ಟಿದ್ದಾರೆ. ಅತಿಯಾದ ಮಳೆ ಸುರಿಯುತ್ತಿರುವ ಕಾರಣಕ್ಕಾಗಿ ಸುರೇಶ್ ಪಾಟಣಕರ್ ಅವರ ಮನೆ ನಾಯಿಗಳು ಮನೆ ಹಿಂಬದಿಯ ನೀರು ಕಾಯಿಸುವ ಒಲೆಯ ಬಳಿ ಮಲಗಿದ್ದವು ಎನ್ನಲಾಗಿದೆ. ಇಲ್ಲದೆ ಇದ್ದರೆ. ಕಳ್ಳರು ಬಂದು ಸುಳಿವು ನಾಯಿಯಿಂದ ತಿಳಿದು ಬರುತ್ತಿತ್ತು. 
    ಗಂಧದ ಮರ‌ ಕಡಿದ ಘಟನಾ ಸ್ಥಳಕ್ಕೆ ಆರ್‌ಎಫ್‌ಓ ಎನ್ ಎಲ್ ನದಾಫ್, ಡಿ ಆರ್‌ಎಫ್‌ಓ ಅಲ್ತಾಫ್ ಚೌಕಡಾಕ, ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಇನ್ನುಳಿದ ಮರದ ತುಂಡುಗಳನ್ನು ಇಲಾಖೆಯ ವಶಕ್ಕೆ ಪಡೆದಿದ್ದಾರೆ. ಸಂಜೆಯ ವೇಳೆಗೆ ನೆಲದಲ್ಲಿದರು ಕಾಂಡ ಹಾಗೂ ಬೇರುಗಳನ್ನು ಜೆಸಿಬಿ ಬಳಸಿ ಇಲಾಖೆಯ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ. ಗಂಧದ ಮರವನ್ನು ಕಳ್ಳತನ ಮಾಡಿದ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ವ್ಯಾಪಕ ಜಾಲ ಬೀಸಿದೆ. 

68 ವರ್ಷ ಜ್ಯೋತಿ ದರ್ಶನ‌ಪಡೆದ, ಗುರು ಸ್ವಾಮಿಗಳಿಗೆ ಗುರು ಸ್ವಾಮಿ‌ ಮೈನಳ್ಳಿಯ ದಾಮೋದರ ಪದ್ಮನಾಭನ್ , ವರದಿ : ಜಗದೀಶ ನಾಯಕ

ವರದಿ : ಜಗದೀಶ ನಾಯಕ

ಯಲ್ಲಾಪುರ : ಶಬರಿಮಲೆ ತೆರಳುವ ಮಾಲಾಧಾರಿ ಅಯ್ಯಪ್ಪ ಭಕ್ತರಿಗೆ, ಯಾವುದೇ ಜಾತಿ ವೃತ್ತಿ ಏನೇ ಇದ್ದರೂ ಕೂಡ ಎಷ್ಟು ದಿನ ಮಾಲಾದಾರಿಗಳಾಗಿರುತ್ತಾರೆ, ಅಷ್ಟು ದಿನ ಅವರನ್ನು ದೇವರಂತೆ ಗೌರವಿಸುವ ಪದ್ಧತಿ, ಬಹುತೇಕ ಭಾರತದ ಎಲ್ಲಾ ಕಡೆಯೂ ಇದೆ. ಅದರಲ್ಲಿಯೂ ಅತಿ ಹಿರಿಯ ಗುರು ಸ್ವಾಮಿಗಳನ್ನು ಮಾಲಾಧಾರಿ ಆಗದೆ ಇದ್ದಾಗಲೂ ಕೂಡ ದೈವಿ ಸ್ವರೂಪವಾಗಿ ಕಾಣಲಾಗುತ್ತದೆ.
   ನಾವೀಗ ಹೇಳಲು ಹೊರಟಿರುವುದು, ಭವಿಷ್ಯ ಉತ್ತರ ಕನ್ನಡದಲ್ಲಿ ಅತ್ಯಂತ ಹಿರಿಯ ಗುರುಸ್ವಾಮಿ 91 ವರ್ಷದ ಮುಂಡಗೋಡ ಯಲ್ಲಾಪುರ ರಸ್ತೆಯ ಮಧ್ಯ ಸೀಗುವ ಗ್ರಾಮ ಮೈನಳ್ಳಿಯ ಧಾಮೋದರ ಪದ್ಮನಾಭನ್ ಅವರು‌.
   1955 ರಿಂದ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಿರುವ ದಾಮೋದರ್ ಪದ್ಮನಾಭನ್ ಅಂದಾಜು ಅರವತ್ತೆಂಟು ವರ್ಷಗಳಷ್ಟು ಕಾಲ ಶಬರಿಮಲೆಗೆ ತೆರಳಿ ಜ್ಯೋತಿಯ ದರ್ಶನ ಪಡೆದಿದ್ದಾರೆ. ಉತ್ತರ ಕನ್ನಡ, ಹಾವೇರಿ, ಧಾರವಾಡ ಮುಂತಾದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯನ್ನು ಸ್ಥಾಪಿಸಿ, ಅಲ್ಲಿ ಹಲವಾರು ಶಿಷ್ಯಂದಿರನ್ನು ಗುರುಸ್ವಾಮಿಯನ್ನಾಗಿ, ಅಯ್ಯಪ್ಪ ಸ್ವಾಮಿಯ ಭಕ್ತರನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. 
   ಉತ್ತರ ಕನ್ನಡದ ಬಹುತೇಕ ಬದುಕಿರುವ ಹಾಗೂ ಈಗಲೂ ಕಾರ್ಯ ಪ್ರವರ್ತರಾಗಿರುವ ಹಿರಿಯ ಗುರು ಸ್ವಾಮಿಗಳು ದಾಮೋದರ್ ಪದ್ಮನಾಭನ್ ಅವರ ಶಿಶ್ಯಂದಿರಾಗಿದ್ದಾರೆ. 1972ರಲ್ಲಿ ಕೆಲಸ ಅರಿಸುತ್ತಾ ಅಂಬಿಕಾನಗರ ಕೆಪಿಸಿ ಕೆಲಸಕ್ಕೆ ಆಗಮಿಸಿದ ದಾಮೋದರ್ ಪದ್ಮನಾಭನ್, ಅಲ್ಲಿಂದ ಪ್ರಾರಂಭಿಸಿ ಅಯ್ಯಪ್ಪ ಸ್ವಾಮಿ ಸನ್ನಿಧಿಯನ್ನು ಸ್ಥಾಪಿಸುತ್ತಾರೆ, ಅಯ್ಯಪ್ಪ ಸ್ವಾಮಿಯ ಪ್ರಭಾವ, ಭಕ್ತಿ ಹಾಗೂ ಜಾತ್ಯಾತೀತ ನಿಲವುಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗ ಪ್ರಚಾರಕ್ಕೆ ಬಂದು ಎಲ್ಲ ವರ್ಗದ ಜನ ಅದರಲ್ಲೂ ಹಿಂದುಳಿದ ದಲಿತ ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟ ಜನ ಅಯ್ಯಪ್ಪ ಸ್ವಾಮಿಯ ಭಕ್ತರಾಗುತ್ತಾರೆ. ಗುರು ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾಲೆ ಧರಿಸಿ, ಕಪ್ಪು ವಸ್ತ್ರವನ್ನು ಧರಿಸಿ ಕಠಿಣ ವೃತ್ತಚಾರಣೆ ಮಾಡಿ ಸ್ವಾಮಿಗಳಾಗುತ್ತಾರೆ. ಜನವರಿ 14ರಂದು ಶಬರಿಮಲೆ ಜ್ಯೋತಿ ದರ್ಶನ ಪಡೆದು ಪುನೀತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ  ದೈವಿ ಶಕ್ತಿಯನ್ನು ಹೊಂದಿದವರಾಗಿ ಪರಿವರ್ತನೆಯಾಗುತ್ತಾರೆ. ಸಮಾಜ ಕೂಡ ಅವರನ್ನು ಗೌರವಿಸುವುದು ಇನ್ನೂ ಹೆಚ್ಚಾಗುತ್ತದೆ. ಇದೇ ರೀತಿ ಪ್ರಚಾರಗೊಳ್ಳುತ್ತಾ ಸಾಗುವ ಉತ್ತರ ಕನ್ನಡದಲ್ಲಿ ವಿವಿಧ ತಾಲೂಕುಗಳಲ್ಲಿ, ಸನ್ನಿಧಿಗಳ ಸ್ಥಾಪನೆಯಾಗುತ್ತಾ ಹೋಗುತ್ತದೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ. ಬಹುತೇಕ ಸನ್ನಿಧಿಗಳಲ್ಲಿ ದಾಮೋದರ್ ಪದ್ಮನಾಭನ್ ಗುರುಸ್ವಾಮಿಯಾಗಿ ಮೃತಾಚರಣೆ ಪಾಲನೆ ಬಗ್ಗೆ ಹೇಳಿಕೊಡುತ್ತಾ ಬರುತ್ತಾರೆ. 68 ವರ್ಷಕ್ಕೂ ಹೆಚ್ಚು ಕಾಲ ಜ್ಯೋತಿ ದರ್ಶನ ಹಾಗೂ ಶಬರಿಮಲೆ ದರ್ಶನ ಪಡೆದಿರುವ ದಾಮೋದರ್ ಪದ್ಮನಾಭನ್ , ಕಳೆದ ಕೆಲವು ವರ್ಷದಿಂದ ವಯಸ್ಸಿನ ಕಾರಣಕ್ಕಾಗಿ ಶಬರಿಮಲೆಗೆ ತೆರಳುವುದನ್ನು ನಿಲ್ಲಿಸಿದ್ದಾರೆ. ಇವರು ಅನುಸರಿಸುತ್ತಿರುವ ಕಠಿಣ ವೃತ್ತಾಚರಣೆ ಈಗಿನ ವ್ರತದಾರಿಗಳಿಗೆ ಆಗಿ ಬರುವುದಿಲ್ಲ ಎಂದು ಹಲವಾರು ಜನ ಅಭಿಪ್ರಾಯ ಪಡುತ್ತಾರೆ. ತೋರಿಕೆಗಾಗಿ ತಾವು ಏನನ್ನು ಮಾಡಿಲ್ಲ, ಕೇವಲ ಸ್ವಾಮಿಯ ಮೇಲೆ ಭಕ್ತಿ ಒಂದೆ ನಮ್ಮ ಗುರಿ ಎಂದು
ದಾಮೋದರ್ ಪದ್ಮನಾಭನ್ ಹೇಳುತ್ತಾರೆ.

 ಆ ದಿನಗಳಲ್ಲಿ ಶಬರಿಮಲೆ ಯಾತ್ರೆ ಹೇಗಿತ್ತು ?
   ದಾಮೋದರ ಪದ್ಮನಾಭನ್ ಹೇಳುವಂತೆ, 1955ರಲ್ಲಿ ಅಯ್ಯಪ್ಪ ಸ್ವಾಮಿಯ ಈ ಸಮಯದ ಆಚರಣೆಗಳಲ್ಲಿ ಮಾಲಧಾರಣ, ಮಂಡಲ ಪೂಜೆ, ಮತ್ತು ಮಕರಜ್ಯೋತಿ ಪ್ರಮುಖವಾಗಿದ್ದವು. ಯಾತ್ರಿಗಳು 41 ದಿನಗಳ ವ್ರತವನ್ನು ಖಡ್ಡಾಯವಾಗಿ ಅನುಸರಿಸುತ್ತಿದ್ದರು, ಈ ಸಮಯದಲ್ಲಿ ಮಾಲೆ ಧರಿಸಿ, ಶುದ್ಧ ಮತ್ತು ಸತ್ಪ್ರವೃತ್ತಿಯನ್ನು ಪಾಲಿಸುತ್ತಿದ್ದರು. ಮಂಡಲ ಪೂಜೆಯ ನಂತರ ಮಕರಸಂಕ್ರಾಂತಿ ಸಂದರ್ಭದಲ್ಲಿ ಮಕರವಿಳಕ್ಕು ಮತ್ತು ಮಕರಜ್ಯೋತಿ ದರ್ಶನ ಮುಖ್ಯ ಆಕರ್ಷಣೆಯಾಗಿತ್ತು.

ಗುರುಸ್ವಾಮಿ ಕೆಲಸ :

   ಶಬರಿಮಲೆ ಯಾತ್ರೆಯ ಪ್ರಾರಂಭಿಕ ದೆಶೆಯಲ್ಲಿ ಅನುಭವಿಗಳಾದ 'ಗುರುಸ್ವಾಮಿಗಳು' ಯಾತ್ರೆಗಾರರನ್ನು ಮುನ್ನಡೆಸುತ್ತಿದ್ದರು. ಗುರುಸ್ವಾಮಿಯು ಹೊಸಬರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಯಾತ್ರೆ ಸಂದರ್ಭದಲ್ಲಿ ಆಚಾರ-ವಿಚಾರಗಳನ್ನು ತಿಳಿಸುತ್ತಿದ್ದರು. ಗುರುಸ್ವಾಮಿಯು ಯಾತ್ರೆಗಾರರಿಗೆ 'ಇರುವುದಿನ' ಅಥವಾ 'ವೃತ್ತಿನಿಯಮ' ಕುರಿತು ತಿಳಿಸುತ್ತಿದ್ದರು, ಶಬರಿಮಲೆ ಯಾತ್ರೆಯನ್ನು ಪವಿತ್ರವಾಗಿ ಮುನ್ನಡೆಯಲು ಸಹಾಯ ಮಾಡುತ್ತಿದ್ದರು.
 1955ರಿಂದ 1972ರವರೆಗೆ ಶಬರಿಮಲೆ ಕ್ಷೇತ್ರದಲ್ಲಿ ಆಧುನಿಕ ಸೌಲಭ್ಯಗಳು ಇರಲಿಲ್ಲ. ಯಾತ್ರಿಗಳು ಪಾದಯಾತ್ರೆಯ ಮೂಲಕ ಪ್ರಾಯಾಣಿಸುತ್ತಿದ್ದರು, ಭಕ್ತರಿಗಾಗಿ ಮುನ್ನೋಟಿ ಕ್ಯಾಂಪ್, ದರ್ಶನದ ಸೌಲಭ್ಯಗಳು ನಿರ್ವಹಿಸಲ್ಪಟ್ಟಿದ್ದವು.1970ರ ದಶಕದ ಆರಂಭದಲ್ಲಿ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚಳವಾಗತೊಡಗಿದಂತೆ, ಹೊಸ ವ್ಯವಸ್ಥೆಗಳನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಯಿತು. ಈ ಕಾಲಾವಧಿಯಲ್ಲಿ ಅಯ್ಯಪ್ಪನ ಆರಾಧನೆ ಮತ್ತು ಶಬರಿಮಲೆ ಯಾತ್ರೆಯು ಹೆಚ್ಚಿನ ಭಕ್ತರ ಗಮನ ಸೆಳೆದಿತ್ತು, ಮತ್ತು ಗುರುಸ್ವಾಮಿಯ ಮಾರ್ಗದರ್ಶನವು ಭಕ್ತರ ಅನುಭವವನ್ನು ಪಾವಿತ್ರ್ಯಪೂರ್ಣಗೊಳಿಸುತ್ತಿತ್ತು ಎಂದು ಅವರು ಹೇಳುತ್ತಾರೆ.

   ಅಂದು ಶಬರಿಮಲೆಗೆ ಹೋಗಲು ಇರುವ ತೊಡಕುಗಳು :
   
 ಆ ಕಾಲದಲ್ಲಿ ಸಾರಿಗೆ ಸೌಲಭ್ಯಗಳು ಹೆಚ್ಚಿದಾಗಿ ಇರಲಿಲ್ಲ. ಕಾಡಿನ ಮಾರ್ಗಗಳಲ್ಲಿ ನಡೆದು ಹೋಗಬೇಕಾಗಿತ್ತು. ಶಬರಿಮಲೆ ಯಾತ್ರೆಗೆ ಹೆಚ್ಚಿನ ಮೂಲಸೌಕರ್ಯಗಳು ಇಲ್ಲ. ಊಟ, ಹಣ್ಣುಗಳು ಮತ್ತು ಸ್ಥಳೀಯ ಆಹಾರವನ್ನು ಯಾತ್ರಾರ್ಥಿಗಳು ಬಹುದೂರದಿಂದ ಹೊತ್ತೊಯ್ಯುತ್ತಿದ್ದರು. ತಾತ್ಕಾಲಿಕ ಟೆಂಟ್ ಗಳು ಮತ್ತು ಮಂದಿರಗಳ ಬಳಿಯಲ್ಲಿ ನಿದ್ರೆ ಮಾಡಬೇಕಾಗುತ್ತಿತ್ತು. ಕಾಡಿನಲ್ಲಿ ಸಿಗುವ ಆನೆಗಳು, ಹುಲಿ, ಕರಡಿ ಮುಂತಾದ ಪ್ರಾಣಿಗಳಿಂದ ಜಾಗೃತೆ ವಹಿಸಬೇಕಾಗಿತ್ತು. ಗುಂಪು ಗುಂಪಾಗಿ ಕಾಡಿನ‌ ಮಧ್ಯ ವಾಸ್ತವ್ಯ ಹಾಗೂ ಕಾವಲು ಕಾದುವನಿದ್ದೆ ಮಾಡಬೇಕಿತ್ತು. ದಾರಿಯಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವುದು ಬಹಳ ಕಷ್ಟಕರವಾಗಿತ್ತು. ಆ ಕಾಲದಲ್ಲಿ ಯಾತ್ರಾರ್ಥಿಗಳು ಬಹು ಶ್ರದ್ಧೆ ಮತ್ತು ಧೈರ್ಯದಿಂದ ಯಾತ್ರೆ ನಡೆಸುತ್ತಿದ್ದರು, ಇದೀಗ ಎಲ್ಲೆಡೆ ಸುಗಮವಾದ ಮಾರ್ಗಗಳು ಮತ್ತು ಮೂಲ ಸೌಕರ್ಯಗಳೊಂದಿಗೆ ಯಾತ್ರೆಯನ್ನು ನಡೆಸಲು ಸಾಧ್ಯವಾಗಿದೆ ಎಂದು ದಾಮೋದರ ಪದ್ಮನಾಭನ್ ಹೇಳುತ್ತಾರೆ.

ಉತ್ತರಕನ್ನಡ ಜಿಲ್ಲೆ, ಯಲ್ಲಾಪುರದಲ್ಲಿ ಇಳಿದ ಮಳೆ, ಜನಜೀವನ ಸಹಜ ಸ್ಥಿತಿಯತ್ತ

ಯಲ್ಲಾಪುರ : ಉತ್ತರ ಕನ್ನಡದಲ್ಲಿ ಮಳೆ ಆರ್ಭಟ ಕಡಿಮೆಯಾಗಿದೆ. ಹಾಗೆಯೇ ಯಲ್ಲಾಪುರದಲ್ಲಿಯೂ ಮಳೆ ನೀರು ಇಳಿದಿದೆ. 3-4 ದಿನಗಳ ಕಾಲ ಬಿಟ್ಟೂ ಬಿಡದೆ ಕಾಡಿದ್ದ ಮಳೆ ಸಾಕಷ್ಟು ಅವಾಂತರಕ್ಕೆ ಕಾರಣವಾಗಿತ್ತು. ಭಟ್ಕಳ ಹೊರತುಪಡಿಸಿ ಶನಿವಾರ ಮಳೆಯ ಪ್ರಮಾಣ ಎಲ್ಲೆಡೆ ಕಡಿಮೆಯಾಗಿದೆ. ಎಲ್ಲಾ ರಸ್ತೆಗಳೂ ಸಂಚಾರಕ್ಕೆ ಮುಕ್ತವಾಗಿವೆ. ಜಲಾವೃತಗೊಂಡ ಮನೆಗಳಲ್ಲಿನ ಜನತೆ ನಿರಾಳರಾಗಿದ್ದಾರೆ. ಹಳ್ಳ ಕೊಳ್ಳಗಳಲ್ಲಿನ ನೀರಿನ ಪ್ರಮಾಣವೂ ಇಳಿದಿದೆ. ಜನಸಂಚಾರ ಮಾಮೂಲಿಯಾಗುತ್ತಿದೆ.
ಮಳೆಯ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ಜನಜೀವನ ಸಹಜ ಸ್ಥಿತಿಯತ್ತ ;
   ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬಹುತೇಕರು ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಪ್ರಸ್ತುತ 8 ಕಾಳಜಿ ಕೇಂದ್ರಗಳಲ್ಲಿ 26 ಜನರು ಆಶ್ರಯ ಪಡೆದಿದ್ದು, ಅವರಿಗೆ ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದ್ದಾರೆ. 
  ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ಹೊನ್ನಾವರದಲ್ಲಿ 7 ಮತ್ತು ಕುಮಟಾದಲ್ಲಿ 1 ಸೇರಿದಂತೆ ಒಟ್ಟೂ ಕಾಳಜಿ ಕೇಂದ್ರ ಮುಂದುವರಿದಿವೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ.
ಕಾಳಜಿ ಕೇಂದ್ರಗಳಲ್ಲಿ ವ್ಯವಸ್ಥೆ ;
    ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ವೈದ್ಯರ ತಂಡದಿಂದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ವಿವರಿಸಲಾಗಿದೆ.
ಮಾನವ ಜೀವ ಹಾನಿ ತಡೆಗೆ ಮುನ್ನೆಚ್ಚರಿಕೆ  ;
   ಶನಿವಾರ ಕಾಳಿ ನದಿ ವ್ಯಾಪ್ತಿಯ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಅಣೆಕಟ್ಟಿನಲ್ಲಿ ನೀರಿನ ಪ್ರಮಾಣವು ಜಿಲ್ಲಾಡಳಿತ ನಿಗದಿಪಡಿಸಿದ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 
  ಬೆಂಗಳೂರುದಿಂದ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣೆಯ 2 ತಂಡಗಳು ಮಂಕಿಯ ಪ್ರಾಕೃತಿಕ ವಿಕೋಪ ಕೇಂದ್ರದಲ್ಲಿ ತಂಗಿದ್ದು, ಯಾವುದೇ ತುರ್ತು ಕಾರ್ಯಾಚರಣೆಗೆ ಸಕಲ ರೀತಿಯ ಸನ್ನದ್ಧತೆಯನ್ನು ತೋರಿಸುತ್ತಿವೆ. 
ಶಿರಸಿ ರಸ್ತೆಯಲ್ಲಿ ಬಿದ್ದ ಮರ ;
ಯಲ್ಲಾಪುರದಲ್ಲಿ ಮರ ಬಿದ್ದು ಹಾನಿಯಾಗಿದೆ. ಪಟ್ಟಣದ ಶಿರಸಿ ರಸ್ತೆಯಲ್ಲಿ ಶನಿವಾರ ರಾತ್ರಿ ಗಾಳಿಗೆ ಜಂಬೆ ಮರ ಬುಡ ಸಮೇತ ಉರುಳಿ ಬಿದ್ದಿದೆ.

ಬಾಳಗಿಮನೆ ಅಪಘಾತ ಪ್ರಕರಣದಲ್ಲಿ ಟ್ಯಾಕರ್ ಚಾಲಕನ ವಿರುದ್ಧ ದೂರು

ಯಲ್ಲಾಪುರ : ಪಟ್ಟಣದ ಬಾಳಗಿಮನೆ ಬಳಿ ರಾಹೆ 63 ರ ಮೇಲೆ ಸಂಭವಿಸಿದ ಭಾರೀ ಅಪಘಾತದಲ್ಲಿ ಟ್ಯಾಂಕರ ಚಾಲಕ ಮಹಾಂತೇಶ ನಾರಾಯಣ ಗೌಂಡರ್(37) ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
    ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಂದಕೇರಿ ನಿವಾಸಿಯಾದ ಮಹಾಂತೇಶ, ತನ್ನ ಕೆ.ಎ-22/ಎಎ-4143 ನಂಬರ್‌ ಹೊಂದಿರುವ ಟ್ಯಾಂಕರನ್ನು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿ ಕೊಂಡು ಬಂದು, ಬಾಳಗಿಮನೆ ಶಾಲೆ ಹತ್ತಿರ, ರಾಷ್ಟ್ರೀಯ ಹೆದ್ದಾರಿ 63 ರಲ್ಲಿ, ಟ್ಯಾಂಕರ ಚಾಲಕ ತನ್ನ ಮುಂದೆ ಹೋಗುತ್ತಿದ್ದ ಒಂದು ವಾಹನಕ್ಕೆ ಓವರ್‌ಟೇಕ್ ಮಾಡಲು ಯತ್ನಿಸಿ, ಕಾರವಾರ ಕಡೆಗೆ ಹೋಗುತ್ತಿದ್ದ ಮಹೇಶ ಗಜಾನನ ಮಡಿವಾಳ(49) ಎಂಬುವವರ ಕೆ.ಎ-47/ಎಮ್-2789 ನಂಬರ್‌ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದಾನೆ.
   ಅಪಘಾತದಿಂದಾಗಿ ಟ್ಯಾಂಕರ ಚಾಲಕ ಮಹಾಂತೇಶ, ಅದೇ ವೇಗದಲ್ಲಿ ಮುಂದೆ ಹೋಗಿ, ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಮೋಟಾರ ಸೈಕಲ್ (ನಂಬರ್: ಕೆ.ಎ-65/ಜೆ-7183) ಮೇಲೆ ಟ್ಯಾಂಕರ ಹತ್ತಿಸಿ ಮೋಟಾರ ಸೈಕಲ್ ಜಕಂ ಮಾಡಿದ್ದಾನೆ.
   ಈ ಅಪಘಾತದ ಕುರಿತು ಮಹೇಶ ಮಡಿವಾಳ ಅವರು ಟ್ಯಾಂಕರ ಚಾಲಕ ಮಹಾಂತೇಶ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್ಐ ಸಿದ್ದಪ್ಪ ಗುಡಿಸಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.