Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Friday 12 July 2024

ಜೀವ ಜಗತ್ತಿನ ಅದ್ಭುತಗಳು ಪರಿಸರದಲ್ಲಿ ಅಡಗಿವೆ: ವಜ್ರಳ್ಳಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಆರ್‌ಎಫ್‌ಓ ಶಿಲ್ಪಾ ನಾಯ್ಕ

ಯಲ್ಲಾಪುರ: ಪರಿಸರ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು, "ಮನುಷ್ಯನ ಜೀವಿತಾವಧಿಯಲ್ಲಿ ಏನಾದರೂ ಉತ್ತಮ ಕೊಡುಗೆ ನೀಡಬೇಕೆಂದಾದರೆ ಅದು ಪರಿಸರ ಸಂರಕ್ಷಣೆಯ ಮೂಲಕವೇ ಸಾಧ್ಯ" ಎಂದು ಇಡಗುಂದಿ ವಲಯದ ಅರಣ್ಯಾಧಿಕಾರಿ ಶಿಲ್ಪಾ ಎಸ್ ನಾಯ್ಕ ಅಭಿಪ್ರಾಯಪಟ್ಟರು.
    ವಜ್ರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು. ಮಕ್ಕಳಿಗೆ ಪರಿಸರವು ಕುತೂಹಲ ಮತ್ತು ಆಶ್ಚರ್ಯಗಳಿಂದ ತುಂಬಿದ ಜಗತ್ತಾಗಿದೆ,
ವಿಜ್ಞಾನದ ಅದ್ಭುತಗಳನ್ನು ನಿರಂತರವಾಗಿ ಬಿಚ್ಚಿಡುವ ಪರಿಸರವು ಸಮೃದ್ಧವಾಗಿದ್ದರೆ ಮಾತ್ರ ನಾವು ನಿಜವಾಗಿಯೂ ಸುಖಕರ ಜೀವನ ನಡೆಸಬಹುದು. ಮಕ್ಕಳಿಗೆ ಜೀವ ಜಗತ್ತಿನ ಅದ್ಭುತಗಳನ್ನು ಹಂತಹಂತವಾಗಿ ಪರಿಚಯಿಸುವುದು ಅಗತ್ಯ ಎಂದರು. ಪರಿಸರ ಪ್ರೀತಿಯ ಬೀಜವು ಎಳೆಯ ಮನಸ್ಸುಗಳಲ್ಲಿ ಬೇರೂರಿದ್ದರೆ, ಅದು ಅವರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಿಕೆ ವ್ಯಕ್ತಪಡಿಸಿದರು.
   ಇದೇ ಸಂದರ್ಭದಲ್ಲಿ, ಇಡುಗುಂದಿ ವಲಯವು ವನಮಹೋತ್ಸವ ಮತ್ತು ವನ್ಯಜೀವಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿತು.
  ಎಸ್ ಡಿ ಎಂ ಸಿ ಅಧ್ಯಕ್ಷ ಕಾಮೇಶ್ವರ ಭಟ್ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದರು, ವಜ್ರಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಪಿಡಿಒ ಸಂತೋಷಿ ಬಂಟ್, ಉಪ ವಲಯ ಅರಣ್ಯಾಧಿಕಾರಿ ಲೋಕೇಶ್ ನಾಯ್ಕ, ಮುಖ್ಯಾಧ್ಯಾಪಕಿ ರಾಧಾ ಭಟ್, ಗಸ್ತು ವನಪಾಲಕರು ಕೆಂಚಪ್ಪ ಹಂಚಿನಾಳ್, ಗೌಡಪ್ಪ ಗೌಡ ಸುಳ್ಳದ್ ಮತ್ತು ದತ್ತಾತ್ರೇಯ ತಳವಾರ ಮುಂತಾದವರು ಇದ್ದರು.
‌‌    ಕಾರ್ಯಕ್ರಮವು ಯುವ ಪೀಳಿಗೆಯಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರಿಗೆ ತಿಳಿಸುವಲ್ಲಿ ಯಶಸ್ವಿಯಾಯಿತು. 
(ವರದಿ : ದತ್ತಾತ್ರೇಯ ಕಣ್ಣಿಪಾಲ, ವಜ್ರಳ್ಳಿ)
‌‌

ಯಲ್ಲಾಪುರ ಸರ್ಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿ ಮತ್ತು ಶಾಸಕರಿಗೆ ಮನವಿ

ಯಲ್ಲಾಪುರ : ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕವು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಸಂಜೆ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಮತ್ತು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿತು.
  7ನೇ ವೇತನ ಆಯೋಗದ ವರದಿಯ ಅನುಷ್ಠಾನ, ರಾಜ್ಯ ಸರ್ಕಾರಿ ನೌಕರರು 2022ರ ಜುಲೈ 1ರಿಂದ 7ನೇ ವೇತನ ಆಯೋಗದ ವರದಿಯ ಶಿಫಾರಸುಗಳ ಅನುಷ್ಠಾನವನ್ನು ಒತ್ತಾಯಿಸುತ್ತಿದ್ದಾರೆ. ಈ ವಿಳಂಬದಿಂದಾಗಿ ನೌಕರರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
   ಹಳೆ ಪಿಂಚಣಿ ಯೋಜನೆಯ ಪುನರ್ಜೀವನ, ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ನೌಕರರು ಒತ್ತಾಯಿಸಿದ್ದಾರೆ. ಎನ್‌ಪಿಎಸ್‌ ಯೋಜನೆಯು ನೌಕರರಿಗೆ ದುರ್ಬಲ ಆರ್ಥಿಕ ಭದ್ರತೆಯನ್ನು ಒದಗಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
   ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ, ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
   7ನೇ ವೇತನ ಆಯೋಗದ ಶಿಫಾರಸುಗಳಂತೆ ಫಿಟ್‌ಮೆಂಟ್‌ ಭತ್ಯೆಯನ್ನು ಕನಿಷ್ಠ ಶೇ. 27.50 ಕ್ಕೆ ಹೆಚ್ಚಿಸಿ ವೇತನ ನಿಗಧಿಪಡಿಸಬೇಕೆಂದು ಮತ್ತು 2022ರ ಜುಲೈ 1ರಿಂದ ಆರ್ಥಿಕ ಪ್ರಯೋಜನಗಳನ್ನು ಜಾರಿಗೆ ತರಬೇಕೆಂದು ನೌಕರರು ಒತ್ತಾಯಿಸುತ್ತಾರೆ.
    ರಾಜ್ಯದಲ್ಲಿ 2.60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ, ಇದು ಉಳಿದ ನೌಕರರ ಮೇಲೆ ಹೆಚ್ಚಿನ ಹೊರೆ ಹಾಕಿ ಅವರ‌ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಲಾಗಿದೆ. 
   ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ್ ಅಶೋಕ್ ಭಟ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ರವಾನಿಸುವ ಭರವಸೆ ನೀಡಿದರು. ತಮ್ಮ ಖಾಸಗಿ ಕಚೇರಿಯಲ್ಲಿ ಮನವಿ ಸ್ವೀಕರಿಸಿದ ಶಾಸಕ ಶಿವರಾಮ ಹೆಬ್ಬಾರ್ ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
   ಮನವಿ ನೀಡುವ ಸಂದರ್ಭದಲ್ಲಿ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಗುಜನೂರು, ಖಜಾಂಚಿ ಎಸ್ ಆರ್ ನಾಯಕ, ರಾಜ್ಯ ಪರಿಷತ್ ಸದಸ್ಯ ಸಂಜೀವ್ ಕುಮಾರ್ ಹೊಸ್ಕೇರಿ, ಶಿರಸಿ ಶೈಕ್ಷಣಿಕ ಜಿಲ್ಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ತಾಲೂಕಾ ಸಂಘದ ಲೆಕ್ಕಪರಿಶೋಧಕ ಗಂಗಾಧರ ಪಟಗಾರ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಆರ್ ಭಟ್, ಅರಣ್ಯ ಇಲಾಖೆಯ ಪ್ರತಿನಿಧಿ ಶ್ರೀನಿವಾಸ್ ನಾಯ್ಕ ಹಾಗೂ ಸಂತೋಷ್ ಜಿ, ತಾಲೂಕ ಪಂಚಾಯತಿ ಪ್ರತಿನಿಧಿ ನಾರಾಯಣ ಗೌಡ, ಮಂಜುನಾಥ್ ಆಗೇರ್, ಕಂದಾಯ ಇಲಾಖೆಯ ಪ್ರತಿನಿಧಿ ಜ್ಯೋತಿ ನಾಯ್ಕ ಆರೋಗ್ಯ ಇಲಾಖೆಯ ಪ್ರತಿನಿಧಿ ಎಸ್ ಟಿ ಭಟ್, ಹಿಂದುಳಿದ ವರ್ಗಗಳ ಇಲಾಖೆಯ ಪ್ರತಿನಿಧಿ ದಾಕ್ಷಾಯಿಣಿ ನಾಯ್ಕ ಸೇರಿದಂತೆ ನೂರಾರುವಸರ್ಕಾರಿ ನೌಕರರು ಮನವಿ ನೀಡುವ ಸಂದರ್ಭದಲ್ಲಿ ಇದ್ದರು.

ಜುಲೈ 17 ರಂದು ಮಾಗೋಡದಲ್ಲಿ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ ತಾಳಮದ್ದಲೆ

ಯಲ್ಲಾಪುರ : ತಾಲೂಕಿನ ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಆಷಾಢ ಏಕಾದಶಿಯಂದು ಎರಡನೇ ವರ್ಷದ ಪ್ರಸಂಗ ಪಂಚಕ ಕಾರ್ಯಕ್ರಮ ಸಂಘಟನೆಗೆ ಸಜ್ಜುಗೊಂಡಿದೆ. ಈ ಬಾರಿ ಜುಲೈ 17 ರಂದು ಸಂಜೆ 6 ರಿಂದ ಜುಲೈ 18ರ ಬೆಳಗ್ಗೆ 6 ರವರೆಗೆ ನಿರಂತರವಾಗಿ ತಾಳಮದ್ದಲೆಯ ಮೂಲಕ ಆಷಾಢ ಏಕಾದಶಿಯ ಪರ್ವಕಾಲದಲ್ಲಿ ಕಲಾರಾಧನೆ ನಡೆಯಲಿದೆ.
     ಕಳೆದ ವರ್ಷ ಆಷಾಢ ಏಕಾದಶಿಯಂದು ಹೊಸ ಕಲ್ಪನೆಯೊಂದಿಗೆ ಆರಂಭವಾದ ಪ್ರಸಂಗ ಪಂಚಕ ಕಾರ್ಯಕ್ರಮ ಅಪಾರ ಮೆಚ್ಚುಗೆ ಗಳಿಸಿತ್ತು. ಮಾಗೋಡ ಸುತ್ತಮುತ್ತಲಿನ 40 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ನಿರಂತರ 12 ತಾಸುಗಳ ತಾಳಮದ್ದಲೆಯನ್ನು ಯಶಸ್ವಿಗೊಳಿಸಿದ್ದರು. ಕಲಾವಿದರೊಂದಿಗೆ ಕಲಾಭಿಮಾನಿಗಳಿಗೂ ನಿರಂತರ ಲಘು ಉಪಾಹಾರ, ಪಾನೀಯ ವ್ಯವಸ್ಥೆ, ಸೊಳ್ಳೆಗಳ ಕಾಟಕ್ಕೆ ಅಡಿಕೆ ಸಿಪ್ಪೆಯ ಹೊಗೆ ವ್ಯವಸ್ಥೆ ಇತ್ಯಾದಿ ವಿಶೇಷತೆಗಳಿಂದ ಕಾರ್ಯಕ್ರಮ ಗಮನ ಸೆಳೆದಿತ್ತು. 
  ಎಲ್ಲದಕ್ಕಿಂತ ಮುಖ್ಯವಾಗಿ ಸಮಯ ಪಾಲನೆ ಪ್ರಸಂಗ ಪಂಚಕದ ವೈಶಿಷ್ಟ್ಯ. ನಿಗದಿತ ಸಮಯಕ್ಕೆ ಆರಂಭವಾಗಿ, ನಿಗದಿತ ಸಮಯಕ್ಕೆ ಕಾರ್ಯಕ್ರಮ ಮುಕ್ತಾಯವಾಗುವುದು. ಪ್ರತಿ ಪ್ರಸಂಗಕ್ಕೂ ನಿರ್ದಿಷ್ಟ ಸಮಯ, ಅದೇ ಸಮಯಕ್ಕೆ ಸರಿಯಾಗಿ ಪ್ರಸಂಗ ಪೂರ್ಣಗೊಳಿಸುವುದು, ಅದಕ್ಕೆ ಅಗತ್ಯ ಸಿದ್ಧತೆಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸುವ ಈ ಸಂಘಟನೆ ಇತರರಿಗೆ ಮಾದರಿಯಾಗಿದೆ. 
    ಮೊದಲ ವರ್ಷದ ಯಶಸ್ಸಿನ ನಂತರ ಎರಡನೇ ಹೆಜ್ಜೆ ಇಡಲು ಮುಂದಾಗಿರುವ ಕೂಟ, ಈ ಬಾರಿಯೂ ಯಶಸ್ವಿ ಸಂಘಟನೆಗೆ ಮುಂದಾಗಿದೆ. ಕಚ-ದೇವಯಾನಿ, ಪಾದುಕಾ ಪ್ರದಾನ, ರುಕ್ಮಿಣಿ ಕಲ್ಯಾಣ, ಬಬ್ರುವಾಹನ ಹಾಗೂ ಮೀನಾಕ್ಷಿ ಕಲ್ಯಾಣ ತಾಳಮದ್ದಲೆಗಳು ನಡೆಯಲಿವೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ 50 ಕ್ಕೂ ಹೆಚ್ಚು ಹಿರಿ-ಕಿರಿಯ ಕಲಾವಿದರು ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳಿಗೆ ನಿರಂತರವಾಗಿ ಲಘು ಉಪಾಹಾರ, ಪಾನೀಯ ವ್ಯವಸ್ಥೆ ಇರಲಿದೆ. ಆಷಾಢ ಏಕಾದಶಿಯ ಪರ್ವಕಾಲದಲ್ಲಿ, ದೇವರ ಸನ್ನಿಧಿಯಲ್ಲಿ ಆತಿಥ್ಯ, ಆತ್ಮೀಯತೆಯೊಂದಿಗೆ ಕಲಾರಾಧನೆ ನಡೆಸುವುದು ಕೂಟದ ಉದ್ದೇಶವಾಗಿದೆ. 
   ಕೂಟದ ಅಧ್ಯಕ್ಷ ನಾರಾಯಣ ಭಟ್ಟ ಮೊಟ್ಟೆಪಾಲ, ಸಂಚಾಲಕ ನರಸಿಂಹ ಭಟ್ಟ ಕುಂಕಿಮನೆ, ಭಾಗವತ ಮಹಾಬಲೇಶ್ವರ ಭಟ್ಟ ಬೆಳಶೇರ ಅವರ ನೇತೃತ್ವದಲ್ಲಿ ಕೂಟದ ಕಲಾವಿದರು ಸಂಘಟನೆಯಲ್ಲಿ ನಿರತರಾಗಿದ್ದಾರೆ. 
ಕೂಟದ ವಿಶೇಷತೆ:
ಸ್ಥಳೀಯ ಹವ್ಯಾಸಿ ಕಲಾವಿದರೇ ಸೇರಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಮೂಲಕ ಕಲಾ ಸೇವೆ ಮಾಡುತ್ತಿದ್ದಾರೆ. ಪ್ರತಿ ಏಕಾದಶಿಯಂದು ಮಾಗೋಡಿನ ವೀರಮಾರುತಿಯ ಸನ್ನಿಧಿಯಲ್ಲಿ ತಾಳಮದ್ದಲೆ ಮಾಡುತ್ತ ಬಂದಿದ್ದಾರೆ. ತಾಲೂಕಿನ ವಿವಿಧೆಡೆ ತಾಳಮದ್ದಲೆ ನಡೆಸಿಕೊಟ್ಟಿದ್ದಾರೆ. ಕಳೆದ ವರ್ಷದಿಂದ ಆಷಾಢ ಏಕಾದಶಿಯ ದಿನ ಪ್ರಸಂಗ ಪಂಚಕ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಾದರಿಯಾಗಿದೆ.

News: ✒️✒️ ** ಲೋಕೋಪಯೋಗಿ ಇಲಾಖೆಯಿಂದ ಮಾವಿನಮನೆ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ತಾತ್ಕಾಲಿಕ ದುರಸ್ತಿNews: ✒️✒️ ** ಜುಲೈ 16ರಂದು ಇಡಗುಂದಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರNews: ✒️✒️ ** ಶನಿವಾರ ಹಾಸಣಗಿ, ಕಂಪ್ಲಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಲೋಕೋಪಯೋಗಿ ಇಲಾಖೆಯಿಂದ ಮಾವಿನಮನೆ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ತಾತ್ಕಾಲಿಕ ದುರಸ್ತಿ
ಯಲ್ಲಾಪುರ : ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಡ ಬಿದ್ದ ಬಾಸಲ್ ಗ್ರಾಮದ ಹುಟ್ಟುರ್ತಿ, ಬಾಸಲ್ ಗ್ರಾಮ ಹಾಗೂ ತಳಕೆಬೈಲ್ ಲೋಕೋಪಯೋಗಿ ರಸ್ತೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ  ಉಪಸ್ಥಿತಿಯಲ್ಲಿ ಉಪಸ್ಥಿತಿಯಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಾಗೂ ಕಾರ್ಮಿಕರು ರಸ್ತೆಯನ್ನು ತಾತ್ಕಾಲಿಕವಾಗಿ ಕಡಿ ತುಂಬಿ ದುರಸ್ತಿ ಮಾಡಿದರು.
    ಇತ್ತೀಚೆಗೆ ಮಳವಳ್ಳಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅನುಪಸ್ಥಿತಿಯಲ್ಲಿ ಸಾರ್ವಜನಿಕರು ರಸ್ತೆ ಹಾಳಾಗಿದ್ದರು ಕುರಿತು ಮನವಿ‌ ನೀಡಿ, ಅಧಿಕಾರಿಗಳ ಅನುಪಸ್ಥಿತಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ತಳಕೆಬೈಲ್, ಬಾಸಲ್ ಹುಟ್ಟೂರ್ತಿ ಗ್ರಾಮಗಳಿಗೆ ಕೆಎಸ್ಆರ್ಟಿಸಿ ಬಸ್ ಗಳು ಚಾಲಕರು ತೆರಳಲು ಅನುಮಾನ ವ್ಯಕ್ತಪಡಿಸಿ ಅರ್ಧದಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಂದಾಗಿ ರೋಸಿ ಹೋಗಿದ್ದ ಸಾರ್ವಜನಿಕರು ಗ್ರಾಮ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
   ಈ ಕಾರಣಕ್ಕಾಗಿ ಶುಕ್ರವಾರ ರಸ್ತೆ ಕಾರ್ಮಿಕರೊಂದಿಗೆ ಸ್ಥಳಕ್ಕೆ ಆಗಮಿಸಿದ ರಸ್ತೆಯಲ್ಲಿಯ ಹೊಂಡ ಮುಚ್ಚಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮಳೆಗಾಲ ಮುಗಿದ ನಂತರ ಶಾಸಕರನ್ನು ಸಂಪರ್ಕಿಸಿ ಮಾವಿನಮನೆ ವ್ಯಾಪ್ತಿಯ ಕೊಂಡ ಬಿದ್ದ ರಸ್ತೆಗಳನ್ನು ಶಾಶ್ವತವಾಗಿ ದುರಸ್ತಿ ಮಾಡಲಾಗುವುದು ಎಂದು ಸುಬ್ಬಣ್ಣ ಕುಂಟೆಗಾಳಿ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚೇತನ ಇದ್ದರು.

ಜುಲೈ 16ರಂದು ಇಡಗುಂದಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ
ಯಲ್ಲಾಪುರ ; ಹುಬ್ಬಳ್ಳಿಯ ಉಎಸ್‌ಜಿ‌ಎಮ್ ಆಯ್(ಕಣ್ಣಿನ) ಬ್ಯಾಂಕ್ ಮತ್ತು ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಯಲ್ಲಪುರದ ದ್ರಷ್ಟಿ ಕೇಂದ್ರ ಹಾಗೂ‌ ಇಡಗುಂದಿ ಗ್ರಾಮ ಪಂಚಾಯತಿಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಇಡಗುಂದಿಯ ಸಮಾಜದ ಮಂದಿರದಲ್ಲಿ ಜುಲೈ 16ರಂದು ಬೆಳಿಗ್ಗೆ 10.30 ಗಂಟೆಗೆ ಆಯೋಜಿಸಲಾಗಿದೆ,
   ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಗ್ರಾಮ ಪಂಚಾಯತ ಇಡಗುಂದಿ ವಿನಂತಿಸಿದೆ.  ಶಿಬಿರಕ್ಕೆ ಬರುವಾಗ ಆಧಾರ ಕಾರ್ಡ್, ರೇಷನ್ ಕಾರ್ಡ್, ಯಶಸ್ವಿನಿ, ಅರೋಗ್ಯ ರಕ್ಷಾ, ಇಎಸ್‌ಐ ಹೆಲ್ತ್ ಇನ್ಶೂರೆನ್ಸ್ ಇದ್ದಲ್ಲಿ ತೆಗೆದುಕೊಂಡು ಬರಬೇಕು. ಅಗತ್ಯ ಇದ್ದವರಿಗೆ ರಿಯಾಯಿತಿ ಯಲ್ಲಿ ಆಪರೇಷನ್ ಮಾಡಲಾಗುವುದು ಅಂತಾಎಂದು ತಿಳಿಸಿದ್ದಾರೆ.

ಶನಿವಾರ ಹಾಸಣಗಿ, ಕಂಪ್ಲಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಯಲ್ಲಾಪುರ : ಜುಲೈ 13 ಶನಿವಾರ, 11 ಕೆವಿ ಬಿಳಕಿ ಮಾರ್ಗದ ನಿರ್ವಹಣೆ ಕಾಮಗಾರಿ ನಡೆಯುವ ಕಾರಣ, ಹಾಸಣಗಿ ಮತ್ತು ಕಂಪ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
  ಸಾರ್ವಜನಿಕರು ಸಹಕರಿಸಬೇಕೆಂದು ಯಲ್ಲಾಪುರ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮನವಿ ಮಾಡಿದ್ದಾರೆ.

** ಸರ್ಕಾರಿ ಪದವಿ ಕಾಲೇಜು ವಿಧ್ಯಾರ್ಥಿಗಳಿಂದ ಡೆಂಗ್ಯೂ ಜಾಗೃತಿ** ಕನ್ನಿಕಾ ಕಾಮತ್ ಸಿ.ಎ.‌ಉತ್ತೀರ್ಣ

ಯಲ್ಲಾಪುರ: ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕವು ಶುಕ್ರವಾರ ಲಾರ್ವಾ ಸಂತಾನೋತ್ಪತ್ತಿ ವಿರೋಧಿ ಚಟುವಟಿಕೆಗೆ ಚಾಲನೆ ನೀಡಿತು. ತಹಶೀಲ್ದಾರ ಅಶೋಕ್ ಭಟ್ ಹಸಿರು ಬಾವುಟ ತೋರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
  ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಆರ್.ಡಿ.ಜನಾರ್ದನ್, ಎನ್ಎಸ್ಎಸ್ ಅಧಿಕಾರಿ ಸುರೇಖಾ ತಡವಾಲ್, ಉಪನ್ಯಾಸಕಿ ಸವಿತಾ ನಾಯಕ್, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್, ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್ ತಾಳಿಕೋಟಿ, ಯು.ಜೋಸೆಫ್, ಎನ್.ಎಲ್.ಕಳಸದ್, ಪಪಂ ಆರೋಗ್ಯ ನಿರೀಕ್ಷಕ ಗುರು ಗಡಗಿ, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
   ಎನ್‌ಎಸ್‌ಎಸ್ ತಂಡವು ಕಾಳಮ್ಮನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಿ, ಲಾರ್ವಾ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸಿತು ಮತ್ತು ಆರೋಗ್ಯ ಶಿಕ್ಷಣವನ್ನು ನೀಡಿತು. ಲಾರ್ವಾ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವ ಮೂಲಕ ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳು ಹರಡುವುದನ್ನು ತಡೆಗಟ್ಟುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ನರ್ಮದಾ ನಾಯಕ್ ಉಪಸ್ಥಿತರಿದ್ದರು. 
  ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮತ್ತು ರೋಗಗಳು ಹರಡುವುದನ್ನು ತಡೆಯಲು ಎನ್ಎಸ್ಎಸ್ ಘಟಕವು ಉತ್ತಮವಾದ ಕ್ರಮ ಕೈಗೊಂಡಿದೆ.

ದೆಹಳ್ಳಿಯಲ್ಲಿ ಜಾಗೃತಿ ;
   ಶುಕ್ರವಾರ ದೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಾರ್ವ ಸಮೀಕ್ಷೆ ಹಾಗೂ ಡೆಂಗ್ಯೂ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಶಿಕ್ಷಣ ನೀಡಲಾಯಿತು.
  ಮನೆ ಬೇಟೆಯ ಸಂದರ್ಭದಲ್ಲಿ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಪತಿ ಮುದ್ದೇಪಾಲ್ ರವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಯಲ್ಲಾಪುರ/ಕುಮಟಾ : ತಾಲೂಕಿನ ತದಡಿಯ ಕನ್ನಿಕಾ ಕಾಮತ್ ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ತದಡಿಯ ವಿಠ್ಠಲ ಕಾಮತ‌ ಮತ್ತು ವಿದ್ಯಾ ಕಾಮತ ಇವರ‌  ಪುತ್ರಿಯಾದ ಈಕೆ‌, ಸಧ್ಯ ಬೆಂಗಳೂರಿನ ಅಂತರಾಷ್ಟ್ರೀಯ ಸಂಸ್ಥೆಯೊಂದರಲ್ಲಿ‌ ಕಾರ್ಯ ನಿರ್ವಹಿಸುತ್ತಿದ್ದಾಳೆ.

ಆಧಾರ್ ಕಾರ್ಡ್ ನವೀಕರಣ: ಯಲ್ಲಾಪುರ ತಾಲ್ಲೂಕಿನ ನಾಗರಿಕರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ !ವರದಿ : ಜಗದೀಶ ನಾಯಕ

ಯಲ್ಲಾಪುರ : ಭಾರತೀಯ ನಾಗರಿಕರಿಗೆ ನಿರ್ಣಾಯಕ ಗುರುತಿನ ದಾಖಲೆಯಾದ ಆಧಾರ್ ಕಾರ್ಡ್ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಯಲ್ಲಾಪುರ ತಾಲ್ಲೂಕಿನಲ್ಲಿ ನವೀಕರಣ ಸಮಸ್ಯೆಗಳನ್ನು ಎದುರಿಸುತ್ತಿದೆ. ತಾಂತ್ರಿಕ ದೋಷಗಳಿಂದ ಹಿಡಿದು ಅಸಮರ್ಪಕ ಮೂಲಸೌಕರ್ಯಗಳವರೆಗೆ ಸಮಸ್ಯೆಗಳು ನಾಗರಿಕರನ್ನು ನಿರಾಶೆಗೊಳಿಸುತ್ತವೆ ಮತ್ತು ಅಗತ್ಯ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಹೆಣಗಾಡುತ್ತಿದ್ದಾರೆ.
   ಎಸ್ ಎಸ್ ಎಲ್ ಸಿ ಪರೀಕ್ಷೆಯ ಹಾಗೂ ದಾಖಲಾತಿಗೆ ಆಧಾರ್ ಕಾರ್ಡ್ ಬಹಳ ಪ್ರಾಮುಖ್ಯತೆ ವಹಿಸಿದೆ. ಆಧಾರ್ ಕಾರ್ಡಿನಲ್ಲಿ ಇರುವಂತೆ ಎಲ್ಲ ದಾಖಲಾತಿಗಳನ್ನು ತುಂಬಬೇಕಾಗಿದೆ. ಅಂದು ಆಪರೇಟರ್ ಗಳ ಮಾಡಿರುವ ತಪ್ಪಿನಿಂದಾಗಿ ಅಥವಾ ಪಾಲಕರು ನೀಡಿರುವ ತಪ್ಪು ಮಾಹಿತಿಯಿಂದಾಗಿ ಆಧಾರ್ ಕಾರ್ಡ್‌ಗಳಲ್ಲಿ ವ್ಯಕ್ತಿಯ ವಿದ್ಯಾರ್ಥಿಯ ತಪ್ಪು ಹೆಸರು ಹುಟ್ಟಿದ ದಿನಾಂಕ ಮೊಬೈಲ್ ಸಂಖ್ಯೆ ವಿಳಾಸ ಅಡ್ಡ ಹೆಸರು ಹೀಗೆ ಹಲವಾರು ದೋಷಗಳಿಂದ ಕೂಡಿರುತ್ತದೆ. ಇದನ್ನು ಎಸ್‍ಎಸ್‍ಎಲ್‍ಸಿಯಲ್ಲಿಯೇ ಸರಿ ಮಾಡಿದರೆ ಮಾತ್ರ, ಮುಂದಿನ ವಿದ್ಯಾಭ್ಯಾಸಕ್ಕೆ ಆ ವಿದ್ಯಾರ್ಥಿಗೆ ಅನುಕೂಲವಾಗುತ್ತದೆ ಇಲ್ಲದೆ ಇದ್ದರೆ ಅನಾವಶ್ಯಕವಾಗಿ ಇಲಾಖೆಯಿಂದ ಇಲಾಖೆಗೆ ಅಲೆಯುವ ದುಸ್ಥಿತಿ ಬರುತ್ತದೆ. 
   ಯಲ್ಲಾಪುರದ ಪೋಸ್ಟ್ ಆಫೀಸ್‌ನಲ್ಲಿ ಸರ್ಕಾರದ ವತಿಯಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂ ನವೀಕರಣ ಮಾಡುವ ವ್ಯವಸ್ತೆ ಕೆಲವು ದಿನಗಳ ಹಿಂದಿನವರೆಗೆ ಇತ್ತು ಆದರೆ ಇದೀಗ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಸಬೂಬು ನೀಡಿ ಅದನ್ನು ಸ್ಥಗಿತಗೊಳಿಸಲಾಗಿದೆ. ಹಳೆಯ ತಹಶೀಲ್ದಾರ್ ಕಚೇರಿಯಲ್ಲಿಯೂ ಕೂಡ ಆಧಾರ್ ಕಾರ್ಡ್ ನವೀಕರಣ ಮತ್ತು ಹೊಸ ಆಧಾರ್ ಕಾರ್ಡ್ ನೊಂದಣಿ ಮಾಡಿಕೊಳ್ಳುವ ವ್ಯವಸ್ಥೆ ಇದ್ದಿದ್ದು ಅದು ಈಗ ನಿಂತು ಹೋಗಿದೆ. ಸ್ವತಃ ಆಧಾರ್ ಕಾರ್ಡ್ ನಿರ್ದಿಷ್ಟ ಪಡಿಸಿದ್ದ ಶುಲ್ಕ ತುಂಬಿ ಆನಲೈನ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು ಆದರೆ ಅದು ಕೂಡ ಈಗ ನಿಲ್ಲಿಸಲಾಗಿದೆ.  ಹೀಗಾಗಿ, ತಿದ್ದುಪಡಿ ಮಾಡಿಕೊಳ್ಳಬೇಕಾಗಿದ್ದ ಜನ ಬಹಳಷ್ಟು ತೊಂದರೆ ಅನುಭವಿಸಬೇಕಾಗಿದೆ.
    ಕೆಲವು ಜನ ಹುಬ್ಬಳ್ಳಿಯಲ್ಲಿ ಇನ್ನು ಕೆಲವು ಜನ ಮುಂಡಗೋಡದಲ್ಲಿ, ಶಿರಸಿಯಲ್ಲಿ ಆಗಾಗ ತಾಲೂಕಿನ ಮಂಚಿಕೇರಿಯಲ್ಲಿ ನವೀಕರಣ ಹಾಗೂ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ.
   ಯಲ್ಲಾಪುರ ತಾಲ್ಲೂಕಿನ ಅನೇಕ ನಾಗರಿಕರು ತಮ್ಮ ಆಧಾರ್ ಕಾರ್ಡ್ ಗಳನ್ನು ನವೀಕರಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ತಾಂತ್ರಿಕ ಸಮಸ್ಯೆಗಳಿಂದ ಈ ಪ್ರಕ್ರಿಯೆಯು ಹಾಳಾಗಿದೆ. ಆನ್ ಲೈನ್ ಪೋರ್ಟಲ್ ಆಗಾಗ್ಗೆ ಲೋಡ್ ಮಾಡಲು ವಿಫಲವಾಗುತ್ತದೆ, ಮತ್ತು ಅದು ಮಾಡಿದಾಗ, ಅದು ದೋಷಗಳನ್ನು ಪ್ರದರ್ಶಿಸುತ್ತದೆ, ಇದರಿಂದಾಗಿ ದಾಖಲೆಗಳನ್ನು ಅಪ್ ಲೋಡ್ ಮಾಡಲು ಅಥವಾ ನೇಮಕಾತಿಗಳನ್ನು ನಿಗದಿಪಡಿಸಲು ಅಸಾಧ್ಯವಾಗುತ್ತದೆ. ಸರ್ವರ್ ಸಮಸ್ಯೆಗಳು ಅಥವಾ ಸಿಬ್ಬಂದಿಯ ಅಲಭ್ಯತೆಯಿಂದಾಗಿ ನೇಮಕಾತಿಗಳನ್ನು ಕಾಯ್ದಿರಿಸುವಲ್ಲಿ ಯಶಸ್ವಿಯಾದವರನ್ನು ಆಗಾಗ್ಗೆ ಹಿಂದಕ್ಕೆ ಕಳುಹಿಸಲಾಗುತ್ತಿದೆ.
    ಹೊಸ ನೋಂದಣಿಗಳು ಸಹ ಇದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿವೆ. ಪ್ರಕ್ರಿಯೆಯು ನಿಧಾನವಾಗಿರುವುದರಿಂದ ಮತ್ತು ಸಣ್ಣ ತಪ್ಪುಗಳಿಂದಾಗಿ ಅಗತ್ಯ ದಾಖಲೆಗಳನ್ನು ತಿರಸ್ಕರಿಸುವುದರಿಂದ ನಾಗರಿಕರು ಆಧಾರ್ ಕಾರ್ಡ್ ಗಾಗಿ ನೋಂದಾಯಿಸುವುದು ಸವಾಲಾಗಿ ಪರಿಣಮಿಸಿದೆ. ಯಲ್ಲಾಪುರ ತಾಲ್ಲೂಕಿನಲ್ಲಿ ಮೀಸಲಾದ ಆಧಾರ್ ಕೇಂದ್ರದ ಕೊರತೆಯು ತೊಂದರೆಗಳನ್ನು ಹೆಚ್ಚಿಸುತ್ತದೆ, ನಾಗರಿಕರು ಹತ್ತಿರದ ಪಟ್ಟಣಗಳಿಂದ ದೂರದ ನಗರಗಳಿಗೆ ತೆರಳಿ  ಆಧಾರ ಮಾಡಿಸಿಕೊಳ್ಳಬೇಕಾಗಿದೆ. 
    ಶಾಲೆಗೆ ದಾಖಲಾತಿಗೆ, ಸರ್ಕಾರದ ವಿವಿಧ ಯೋಜನೆಗಳಿಗಾಗಿ,  ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ನವೀಕರಣ ಮತ್ತು ನೋಂದಣಿ ಸಮಸ್ಯೆಗಳು ಯಲ್ಲಾಪುರ ತಾಲ್ಲೂಕಿನ ನಾಗರಿಕರನ್ನು ಅಸಹಾಯಕರನ್ನಾಗಿ ಮಾಡಿದೆ. ಅವರು ಪ್ರಯೋಜನಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ,
   ಈ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಮೀಸಲಾದ ಆಧಾರ್ ಕೇಂದ್ರಗಳನ್ನು ಸ್ಥಾಪಿಸುವುದು, ಆನ್ ಲೈನ್ ಪೋರ್ಟಲ್ ನ ಮೂಲಸೌಕರ್ಯಗಳನ್ನು ಸುಧಾರಿಸುವುದು ಮತ್ತು ಸಿಬ್ಬಂದಿಯನ್ನು ಹೆಚ್ಚಿಸುವುದು ಯಲ್ಲಾಪುರ ತಾಲ್ಲೂಕಿನ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರ್ಣಾಯಕ ಗುರುತಿನ ದಾಖಲೆಯು ಯಾವುದೇ ಅಡೆತಡೆಗಳಿಲ್ಲದೆ ಎಲ್ಲರಿಗೂ ಪ್ರವೇಶಿಸುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕಾಗಿದೆ.
     ಯಲ್ಲಾಪುರ ತಾಲ್ಲೂಕಿನಲ್ಲಿ ಆಧಾರ್ ಕಾರ್ಡ್ ನವೀಕರಣ ಮತ್ತು ನೋಂದಣಿ ಸಮಸ್ಯೆಗಳ ಬಗ್ಗೆ ತುರ್ತು ಗಮನ ಹರಿಸಬೇಕಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಭಾರತೀಯ ನಾಗರಿಕತೆಯ ಸಂಖೇತವಾದ ಆಧಾರ್ ಕಾರ್ಡ್ ಹೊರಗಿಡುವ ಸಾಧನವಾಗದಂತೆ ನೋಡಿಕೊಳ್ಳಬೇಕು.

News: ✒️✒️ ಬೆಂಗಳೂರಿನಲ್ಲಿ ಸೈಬಿರಿಯನ್ ಡ್ರಗ್ಸ್ ದಂದೆಯ ತಲೆಬಿಸಿ, ನಿಮ್ಮ ಸಾಮಾಜಿಕ‌ ತಾಣದಲ್ಲಿ ಸೈಬಿರಿಯನ್ ಹೂಳುಗಳು ಪ್ರವೇಶ !News: ✒️✒️ ಸ್ಮಾರ್ಟ್ ಮೊಬೈಲ್ ಬಳಸುವವರು ಕೊನೆಯವರೆಗೂ ಓದಿNews by: ✒️✒️ ಜಗದೀಶ‌ ನಾಯಕ

ಯಲ್ಲಾಪುರ : ಬೆಂಗಳೂರಿನ ಪೊಲೀಸರಿಗೆ ತಲೆ ನೋವಾಗಿರುವ ಸೈಬೇರಿಯನ್ ವಿದ್ಯಾರ್ಥಿಗಳ ಡ್ರಗ್ಸ್ ದಂದೆಯಂತೆ, ನಿಮ್ಮ ಮೊಬೈಲ್ ನಲ್ಲಿ ಹುಳುಗಳಂತೆ ಹೊಕ್ಕಿ ನಿಮ್ಮ ಮೊಬೈಲ್ ಡಾಟಾ ಹಣಕಾಸಿನ ವ್ಯವಹಾರಗಳ ಟ್ರ್ಯಾಕ್ ಮಾಡುತ್ತಿರುವ ಸೈಬಿರಿಯನ್ ಹೂಳುಗಲಕು. ಯಲ್ಲಾಪುರ ನ್ಯೂಸ್ ನ ಹಲವು ಗ್ರೂಪ್ ಗಳಲ್ಲಿ ಹೊಕ್ಕಿದ್ದು ಸೈಬರಿಯನ್ ಐಎಸ್‌ಡಿ ನಂಬರ್ +234..... ಸಂಖ್ಯೆ ಹಲವಾರು ನಂಬರ್ ಗಳನ್ನು ತೆಗೆದು ಹಾಕಲಾಗಿದೆ.
  ಡ್ರಗ್ಸ್ ಸಾಗಾಣಿಕೆ, ತಯಾರಿಕೆ ಮುಂತಾದ ಅಂತರಾಷ್ಟ್ರೀಯ ಅಪರಾಧಿಕ ಚಟುವಟಿಕೆಗಳಲ್ಲಿ ಅತ್ಯಂತ ಮುಂದಿರುವ ಸೈಬೇರಿಯನ್ ಮಾಫಿಯಾಗಳು, ಇದೀಗ ಮೊಬೈಲ್ಗಳಲ್ಲಿ ಕೂಡ ಅನಗತ್ಯ ಲಿಂಕುಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.  ಸೈಬೀರಿಯಾದ ಸೈಬರ್ ಕ್ರೈಂ ದಂಧೆಯು ಇದೀಗ ಮೊಬೈಲ್ ಗ್ರೂಪ್ ಗೂ ಪಾದಾರ್ಪಣೆ ಮಾಡಿದೆ. ಸಾಮಾಜಿಕ ಜಾಲ ತಾಣಗಳಾದ ವಾಟ್ಸಪ್, ಮೆಸೆಂಜರ್ ಸೇರಿದಂತೆ ಹಲವು ಗ್ರೂಪ್‌ಗಳಲ್ಲಿ ಅಪಾಯಕಾರಿ ಲಿಂಕ್‌ಗಳನ್ನು ಹರಿಬಿಡುವ ಮೂಲಕ ಸೈಬರ್ ಕ್ರಿಮಿನಲ್ಸ್ ಹ್ಯಾಕಿಂಗ್ ಕೃತ್ಯಗಳಲ್ಲಿ ತೊಡಗಿದ್ದಾರೆ. ಈ ಮೂಲಕ, ಇವರು ಅನೇಕ ಫೋನ್ ನಂಬರಗಳನ್ನು ಕದಿಯುತ್ತಾರೆ, ನಿಮಗೆ ಅಪಾಯಕಾರಿ ‌ಲಿಂಕ್ ಕಳಿಸುವ‌ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡುತ್ತಾರೆ. ಯಲ್ಲಾಪುರ ನ್ಯೂಸ್ ವಾಟ್ಸಪ್ ಗ್ರೂಪ್ ನ ಬೇರೆ ಬೇರೆ ಗ್ರೂಪ್ ಗಳಲ್ಲಿ ಕಳ್ಳ ಮಾರ್ಗ ಮೂಲಕ‌ ನುಸೂಳಿದ್ದ ಐದು ಜನ ಹ್ಯಾಕರ್ ಗಳನ್ನು ಈಗಾಗಲೇ ರಿಮೋವ್ ಮಾಡಲಾಗಿದೆ. ಅದರಲ್ಲಿ ಎರಡು ನಂಬರ್ ಗಳು ಕಾಮನ್ ಆಗಿದ್ದವು.
   ನಿಮ್ಮ ವಾಟ್ಸಪ್ ಗುಂಪುಗಳಲ್ಲಿ ಕಂಡುಬರುವ ಫೋನ್ ಸಂಖ್ಯೆಗಳು +234 ರಿಂದ ಪ್ರಾರಂಭವಾಗುತ್ತವೆ. ಈ ಸಂಖ್ಯೆಗಳಿಂದ ಕರೆ ಅಥವಾ ಮೆಸೆಜ್ ಬಂದರೆ ಎಚ್ಚರಿಕೆ ವಹಿಸಬೇಕು. ಈ ಹ್ಯಾಕರ್‌ಗಳು ಗುಂಪಿನ ಸದಸ್ಯರು ಅಥವಾ ಹಿಂದೂ‌, ಮುಸ್ಲಿಂ ಕ್ರಿಶ್ಚಿಯನ್ ದೇವರ, ಅಥವಾ ಭಾರತ ಮಾತೆಯ ಪ್ರೊಫೈಲ್ ಚಿತ್ರಗಳನ್ನು ಬಳಸಿಕೊಂಡು ತಮ್ಮ ಪ್ರೊಫೈಲ್ ಚಿತ್ರಗಳನ್ನು ರಚಿಸುತ್ತಾರೆ. ಹಿಂದೂ ದೇವರುಗಳು ಅಥವಾ ಗುಂಪಿನಲ್ಲಿರುವ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರ ದೇವರ ಚಿತ್ರಗಳನ್ನು ಬಳಸುವುದರಿಂದ ಜನರು ಹೆಚ್ಚಾಗಿ ಸಂಶಯ ಪಡುವುದಿಲ್ಲ ಹೀಗಾಗಿ ಅವರ ಉದ್ದೇಶ ಈಡೇರುವ ಸಾಧ್ಯತೆಯಿದೆ.

ವಾಟ್ಸಪ್‌ ಅಥವಾ ಇನ್ನಿತರ ಗುಂಪು ನಿರ್ವಾಹಕರು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:
+234 ರಿಂದ ಪ್ರಾರಂಭವಾಗುವ ಯಾವುದೇ ಸಂಖ್ಯೆಯನ್ನು ಗುಂಪಿನಿಂದ ತಕ್ಷಣವೇ ಬ್ಲಾಕ್ ಮಾಡಿ ಮತ್ತು ತೆಗೆದುಹಾಕಿ. ಗುಂಪಿನ ಆಹ್ವಾನ ಲಿಂಕ್(ಇನ್ವೈಟ್ ಲಿಂಕ್) ಅನ್ನು ಆಗಾಗ್ಗೆ ಬದಲಾಯಿಸಿ ರಿಸೆಟ್ ಮಾಡಿ.
   ವಾಟ್ಸಪ್‌ ಸದಸ್ಯರು ಪರಿಚಯವಿಲ್ಲದ ಸಂಖ್ಯೆಗಳಿಗೆ ಉತ್ತರಿಸಬೇಡಿ. ಯಾವುದೇ ಅಪರಿಚಿತ, ಅಥವಾ ಅಂತರಾಷ್ಟ್ರೀಯ ಸಂಖ್ಯೆಯಿಂದ ಬಂದ ಯಾವುದೇ ಅನಗತ್ಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಆಫರ್, ಬಹುಮಾನ, ಹಣದ ಆಸೆಗೆ‌ ಬಿದ್ದು ನಿಮ್ಮನ್ನು ನೀವು ಹ್ಯಾಕರ್ ಗಳ‌ ಕೈವಶವಾಗಲು ಬಿಡಬೇಡಿ. ಒಂದೆ ರೀತಿಯಲ್ಲಿ ಕಾಣಿಸುವ (ಸಿಮಿಲರ್ ಆಗಿರುವ) ಉದಾಹರಣೆಗೆ ಸರಕಾರದ ವೆಬ್ ಸೈಟ್‌ಗಳು ಅದರನ್ನು‌ ಕರ್ನಾಟಕ ರಾಜ್ಯ ಸರ್ಕಾರದ ಹಲವು ಕಲ್ಯಾಣ ಯೋಜನೆಯ ವೆಬ್ ಸೈಟ್ ಲಿಂಕ್ ಗಳಂತೆ ಕಂಡು ಬರುವ ವೆಬ್ ಸೈಟ್ ಗಳಲ್ಲಿ ನಿಮ್ಮ ಎಲ್ಲ ವಿವರಗಳನ್ನು ಭರ್ತಿ ಮಾಡಬೇಡಿ. ಸರಿಯಾಗಿ ಇದು ಸರ್ಕಾರದ ವೆಬ್ಸೈಟ್ ಎಂದು ದೃಢಪಡಿಸಿಕೊಂಡು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಪಾಸ್ ಬುಕ್ ನಂಬರ್, ಇನ್ನಿತರ ಮಾಹಿತಿಯನ್ನು ತುಂಬಿ. ಅಮೇಜಾನ್, ಪ್ಲಿಪ್ ಕಾರ್ಟ್, ಜಿಯೋ‌ ಮಾರ್ಟ್ ಮುಂತಾದವುಗಳು ಮೂಲ ವೆಬ್ಸೈಟ್ ಗೆ ಹೋಲುವಂತಹ ರೀತಿಯಲ್ಲಿ ರಚಿಸಲಾಗಿದ್ದು ಇವುಗಳ ಬಗ್ಗೆ ಕೂಡ ಜಾಗೃತೆ ವಹಿಸಬೇಕು. ಲಿಂಕ್ ಮೂಲಕ ಬರುವ ಯಾವುದೇ ಅಪರಿಚಿತ ಅಪ್ಲಿಕೇಶನ್‌ಗಳನ್ನು ಮೊಬೈಲ್ ನಲ್ಲಿ ಸ್ಥಾಪಿಸಬೇಡಿ. ಸ್ಮಾರ್ಟ್ ಮೊಬೈಲ್ ಬಳಸುವವರು, ಈ ಕ್ರಮಗಳನ್ನು ಕೈಗೊಳ್ಳುವುದರ‌ ಮೂಲಕ ಸುರಕ್ಷತರಾಗಿರಬೇಕು. ಈ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಸೈಬರ್ ಅಪರಾಧಿಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ.
   ನಿಮ್ಮ ಯಲ್ಲಾಪುರ ನ್ಯೂಸ್ ವಾಟ್ಸಪ್ ಗ್ರೂಪ್ ಸುರಕ್ಷಿತವಾಗಿದೆ, ನಿಯಮಿತವಾಗಿ ನಾವು ನಮ್ಮ ವಾಟ್ಸಪ್ ಗ್ರೂಪ್ ಗಳನ್ನು ಪರಿಶೀಲಿಸುತ್ತಿರುತ್ತೇವೆ. ಸಂಶಯಾಸ್ಪದ ವ್ಯಕ್ತಿಗಳು, ಗ್ರೂಪ್ನಲ್ಲಿ ನಂಬರ್ ಗಳನ್ನು ಪತ್ತೆ ಹಚ್ಚಿ ಅವರನ್ನು ತೆಗೆದು ಹಾಕುತ್ತೆವೆ. ಕಿರುಕುಳ ನೀಡುವಂತಹ ಜನರನ್ನು ಗುರುತಿಸಿ ಅವರಿಗೆ ಕಾನೂನು ಕ್ರಮದ ಎಚ್ಚರಿಕೆ‌ ನೀಡಿದ್ದೆವೆ. ಮಹಿಳೆಯರಿಗಾಗಿ ಯಲ್ಲಾಪುರ ನ್ಯೂಸ್ ನಲ್ಲಿ ಪ್ರತ್ಯೇಕ ಗ್ರೂಪ್ ಗಳನ್ನು ಮಾಡಲಾಗಿದೆ. ಮಹಿಳೆಯರಿಗಷ್ಟೆ ಆ ಗ್ರೂಪ್ ನಲ್ಲಿ‌ ಪ್ರವೇಶವಿದ್ದು, ರಿಕ್ವೆಸ್ಟ್ ಬಂದ‌ ನಂಬರಗಳನ್ನು ಹಲವಾರು ರೀತಿಯಲ್ಲಿ ಪರಿಶೀಲಿಸಿ ನಂತರ ಸೇರಿಸುತ್ತೆವೆ. 
  ಅಷ್ಟಕ್ಕೂ ನಮ್ಮ ಓದುಗರಿಗೆ ತಮ್ಮ ಗ್ರೂಪ್ ಗಳಲ್ಲಿ ಸಂಶಯಾಸ್ಪದ ನಂಬರ್ ಗಳು ಕಂಡುಬಂದರೆ ನನಗೆ(ಎಡ್ಮಿನ್) ವಾಟ್ಸಪ್ ಮಾಡಿ ನಂಬರನ್ನು ತಿಳಿಸಿದರೇ, ಅಂತಹ ನಂಬರನ್ನು ಪರಿಶೀಲಿಸಿ ಆ ಗ್ರೂಪ್ ನಿಂದ ಅವರನ್ನು ತೆಗೆದು ಹಾಕಲಾಗುವುದು.