Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Saturday 13 July 2024

ಯಲ್ಲಾಪುರ ಅರಣ್ಯ ಇಲಾಖೆಯ ಐವರು ಅಧಿಕಾರಿಗಳಿಗೆ ಬೀಳ್ಕೊಡುಗೆ

ಯಲ್ಲಾಪುರ : ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ ಸುದೀರ್ಘಾವಧಿ ಸೇವೆ ಸಲ್ಲಿಸಿದ ಐವರು ಅಧಿಕಾರಿಗಳಿಗೆ ಜುಲೈ 11 ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಅಮಿತ್ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.
   ವರ್ಗಾವಣೆಯಾದ ಅಧಿಕಾರಿಗಳಾದ ಉಪ ವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರು, ಉಪ ವಲಯಾರಣ್ಯಾಧಿಕಾರಿ ವಿನಯಕುಮಾರ ಶಿವಣಗಿ, ಗಸ್ತು ಅರಣ್ಯ ಪಾಲಕ ವಿಷ್ಣು ಪೂಜಾರಿ, ಗಸ್ತು ಅರಣ್ಯ ಪಾಲಕ ಸತ್ಯಪ್ಪ ಉಪ್ಪಾರ ಮತ್ತು ಗಸ್ತು ಅರಣ್ಯ ಪಾಲಕ ಪ್ರಶಾಂತ ಅಜರೆಡ್ಡಿ ಅವರ ಸೇವೆಗಳನ್ನು ಸ್ಮರಿಸಿ ಗೌರವಿಸಲಾಯಿತು.
   ಬೀಳ್ಕೊಡುಗೆ ನೀಡಿದ ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
  ಈ ಸಂದರ್ಭದಲ್ಲಿ ಮಂಚೀಕೇರಿ ವಲಯಕ್ಕೆ ಹೊಸದಾಗಿ ವರ್ಗಾವಣೆಗೊಂಡ ಡಿ.ಆರ್.ಎಫ್.ಓ. ಅಕ್ಷತಾ ಕೆ.ವಿ. ಅವರನ್ನು ಸ್ವಾಗತಿಸಲಾಯಿತು.

ಅನುದಾನದ ಕೊರತೆಯ ಮಧ್ಯ ಅಭಿವೃದ್ಧಿ ಕಾರ್ಯಕ್ರಮ : ಕುಪ್ಪಯ್ಯ ಪೂಜಾರಿ

ಯಲ್ಲಾಪುರ : ಅನುದಾನದ ಕೊರತೆಯ ನಡುವೆಯೂ ಗ್ರಾಮಪಂಚಾಯಿತಿ ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಡೆಂಗ್ಯೂ ಪ್ರಯುಕ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಚತೆ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಹೇಳಿದರು.
     ಅವರು , ಜು.12 ರಂದು ತಾಲೂಕಿನ ಉಮ್ಮಚಗಿಯ ಶ್ರೀ ವಿದ್ಯಾಗಣಪತಿ ದೇವಸ್ಥಾನ ಸಮೀಪದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡುತ್ತಿದ್ದರು. 
    ಅಡಿಕೆ ಮಿಳೆ ಉದುರುವಿಕೆ, ಪೊಟ್ಯಾಷ್ ಕೊರತೆ, ಬೆಳೆ ವಿಮೆ, ಪರ್ಯಾಯ ಬೆಳೆಗಳ ಕುರಿತು ಚರ್ಚೆ ನಡೆಯಿತು. ಸ್ಥಳೀಯ ಪ್ರೌಢಶಾಲೆಗೆ ಜವಾನ ಹುದ್ದೆ ಭರ್ತಿ, ಶಿಕ್ಷಕರ ಕೊರತೆ ಪೂರೈಸುವುದು ಚರ್ಚೆಯಾಯಿತು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರ ನೇಮಕಾತಿಗೆ ಒತ್ತಾಯಿಸಲಾಯಿತು. ಹುಣಸೇಮನೆಯಲ್ಲಿ ಪ್ರತ್ಯೇಕ ಪರಿವರ್ತಕ, ಶೀಗೇಮನೆಯಲ್ಲಿ ವಿದ್ಯುತ್ ಮಾರ್ಗ ದುರಸ್ತಿ, ಉಮ್ಮಚಗಿಯಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಪರಿಹಾರ, ರಸ್ತೆಗಳ ದುರಸ್ತಿ, ರಸ್ತೆ ಬದಿಯ ಚರಂಡಿಯ ದುರಸ್ತಿ, ಉಮ್ಮಚಗಿಯಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣದ ವಿಳಂಬ, ರಸ್ತೆಗಳಲ್ಲಿ ಸುರಕ್ಷತೆ ಕ್ರಮಗಳ ಕುರಿತು ಚರ್ಚೆ. ಈ ಪ್ರದೇಶದ ಶಾಲೆ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ನಿಲ್ಲಿಸುವಂತೆ ಪೊಲೀಸರಿಗೆ ಒತ್ತಾಯಿಸಲಾಯಿತು. ಸರ್ಕಾರದಿಂದ ಅಂಗವಿಕಲರಿಗೆ ದೊರೆಯುವ ಸವಲತ್ತುಗಳ ಕುರಿತು ಮಾಹಿತಿ ನೀಡಲಾಯಿತು.
   ಉಸ್ತುವಾರಿ ಅಧಿಕಾರಿ ಜಿ.ಪಂ. ಸ.ಕಾ.ನಿ. ಅಭಿಯಂತರ ಅಶೊಕ ಬಂಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಸುಭಾಷ ಹೆಗಡೆ, ಕೃಷಿ ಇಲಾಖೆಯ ಅಧಿಕಾರಿ ನಾಗರಾಜ ನಾಯ್ಕ, ಶಿಕ್ಷಣ ಇಲಾಖೆಯ ಸಿ.ಆರ್.ಪಿ ವಿಷ್ಣು ಭಟ್ಟ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಶರಣು ತುಂಬಗಿ, ಹಿರಿಯ ಆರೋಗ್ಯ ನಿರೀಕ್ಷಕ ವಿರೂಪಾಕ್ಷಪ್ಪ ಶಿರೂರು, ಹೆಸ್ಕಾಂ ಶಾಖಾಧಿಕಾರಿ ನಾಗರಾಜ, ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ, ರವಿ, ಪಿ.ಎಸ್.ಐ ಶ್ಯಾಮ ಪಾವಸ್ಕರ, ಎಎಸ್‌ಐ ದೀಪಕ್ ನಾಯ್ಕ, ಜಿ.ಪಂ.ಅಭಿಯಂತರ ಮೀನಾಕ್ಷಿ, 
 ಇನ್ನಿತರರು ಭಾಗವಹಿಸಿ, ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದರ. 
  ಉಪಾಧ್ಯಕ್ಷೆ ಗಂಗಾ ಹೆಗಡೆ ಮತ್ತಿತರ ಸದಸ್ಯರು, ಪಿ.ಡಿ.ಓ. ನಸ್ರೀನಾ ಯಕ್ಕುಂಡಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೋಹನ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. Ad

ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ : ನ್ಯಾಕ್‌ಮಾನ್ಯತೆಗಾಗಿ ಹೆಬ್ಬಾರ್ ಕರೆ

ಯಲ್ಲಾಪುರ ; ಮನುಷ್ಯನ ಆರೋಗ್ಯಕ್ಕೆ ಏನು  ಅವಶ್ಯಕತೆಯಿದೆ‌ ಹಾಗೆ‌ಯೇ ಒಂದು‌ ಕಾಲೇಜಿಗೆ ನ್ಯಾಕ್‌ಮಾನ್ಯತೆ ಅವಶ್ಯಕವಾಗಿದೆ. 21 ನೇ ಶತಮಾನದಲ್ಲಿಯೂ ನಾವು ನ್ಯಾಕ್‌ ಮಾನ್ಯತೆ ಪಡೆಯಲಾಗಲಿಲ್ಲ‌ ಎನ್ನುವುದಕ್ಕೆ ಏನೋ‌ ಕೊರತೆಯಾಗಿದೆ, ನ್ಯಾಕ್‌ಮಾನ್ಯತೆ ಸಿಕ್ಕರೆ ಕಾಲೇಜಿಗೆ ಅನುಕೂಲವಾಗಲಿದೆ. ಈ ಮನ್ಯತೆ ಪಡೆಯಲು ಎಲ್ಲರು ಸೇರಿ ಪ್ರಯತ್ನಿಸುವ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಶಿವರಾಮ‌ ಹೆಬ್ಬಾರ್ ಹೇಳಿದರು. 
  ಅವರು, ಶನಿವಾರ ಬೆಳಿಗ್ಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ 'ಕಾಲೇಜು ವಾರ್ಷಿಕೋತ್ಸವದ' ಕಾರ್ಯಕ್ರಮ(ವ್ಯಾಲಿಡೆಕ್ಟರಿ) ಕಾರ್ಯಕ್ರಮ ಉದ್ಘಾಟಿಸಿ, ಪ್ರಾಂಶುಪಾಲರ ಕೊಠಡಿ ಸ್ಟಾಪ್‌ ರೂಮ್ ಉದ್ಘಾಟಿಸಿ ಮಾತನಾಡಿದರು. ಮುಂಡಗೋಡ ಪದವಿ ಕಾಲೇಜಿಗೆ ನ್ಯಾಕ್‌ ಮಾನ್ಯತೆ ಸಿಕ್ಕು ನಾಲ್ಕು ವರ್ಷವಾಯಿತು. ನಮ್ಮ ಈ ಕಾಲೇಜಿಗೆ ಯಾಕೇ ಸಿಕ್ಕಿಲ್ಲ ಎನ್ನುವುದನ್ನು ಗಮನ ಹರಿಸಬೇಕಾಗಿದೆ. ಹಿಂದೆ ಏನಾಯಿತು ಆಯಿತು. ಮುಂದೆ ಎನಾಗಬೇಕು ಅದು ಆಗಬೇಕು ಎಂದು ಹೇಳಿದರು.
   ವಿದ್ಯಾರ್ಥಿಗಳು ತಾತ್ಕಾಲಿಕ ಆಮೀಶಕ್ಕೆ‌ ಬಲಿಯಾಗಬಾರದು. ಮುಂದಿನ ಭವಿಷ್ಯಕ್ಕಾಗಿ  ಸಿದ್ದವಾಗಬೇಕಾದ ವಯಸ್ಸು ನಿಮ್ಮದು. ಈ ದೇಶದ ಸರ್ಕಾರ ರಚನೆ ಮಾಡುವ ಅಧಿಕಾರ ಹೊಂದದವರು‌ ನೀವು. ಈ ದೇಶಕ್ಕೆ ಯುವ ಜನತೆಯೇ ಸಂಪತ್ತು. ಈ ಕಾಲೇಜಿನ‌ ವಿದ್ಯಾರ್ಥಿಗಳು ಉತ್ತಮ‌ ನಡುವಳಿಕೆ ಉಳ್ಳವರು ಎನ್ನುವ ಸಂದೇಶವನ್ನು ಸಮಾಜಕ್ಕೆ‌ ಕಳಿಸುವ ವಿದ್ಯಾರ್ಥಿಗಳಾಗಿ, ಉತ್ತಮ ವಿದ್ಯಾರ್ಥಿಗಳನ್ನು ಸಿದ್ದಪಡಿಸುವ ಜವಾಬ್ದಾರಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮೇಲಿದೆ. ವಿಶ್ವದ ಯಾವುದೇ ಭಾಗದಲ್ಲಿಯೂ ನಿಮ್ಮ ನಡತೆ ಸರಿಯಿದ್ದರೇ ನೀವು ಗೆಲ್ಲುತ್ತಿರಿ‌. ನಮ್ಮ ಕಾಲೇಜಿನಲ್ಲಿ ಓದಿ ಒಳ್ಳೆಯ ಸ್ಥಾನಮಾನವನ್ನು ಹೊಂದುವಂತವರಾಗಿ. ಸೋಲಿಗೆ ಹತಾಶರಾಗದೇ, ಸೋಲನ್ನು ಆತ್ಮವಿಶ್ವಾಸದಿಂದ ಗೆಲ್ಲುವಂತಾರಾಗಿ ಎಂದು ಶಿವರಾಮ‌ ಹೆಬ್ಬಾರ್ ಹಾರೈಸಿದರು.
   ಸಂಗೀತ ಕಲಾವಿದ ಪ್ರಸನ್ನ ವೈದ್ಯ ಹೆಗ್ಗಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಿಕ್ಷಣ ಎಂದರೆ ನಮ್ಮ ಗುಣಮತ್ತೆ ಎಂದು ಹಿರಿಯರು ಹೇಳಿದ್ದಾರೆ. ಯಾವುದೇ ಐಚ್ಚಿಕ ಆಸಕ್ತಿಯನ್ನು ಬೆಳೆಸಲು ಶಿಕ್ಷಣ ಬಹಳ ಮಹತ್ತರ ಪಾತ್ರವಹಿಸುತ್ತದೆ. ಶಾಲಾ ಕಾಲೇಜಿನ‌ ಓದುವ ಅವಧಿಯಲ್ಲಿಯಷ್ಟೆ ಅಲ್ಲದೇ ಇತರೇ ದಿನಗಳಲ್ಲಿಯೂ ಶಿಕ್ಷಕ ಹಾಗೂ ಶಿಶ್ಯನ‌ ಮಧ್ಯ ಸಂಬಂಧಗಳು‌ ಮುಂದುವರೆಯಬೇಕು ಎಂದು ಹೇಳಿದ ಅವರು, ಶಿಕ್ಷಣಕ್ಕೆ‌ ಸಂಬಂಧಿದಂತೆ ಒಂದು ಹಾಡನ್ನು ಹಾಡಿದರು. 
   ಪ್ರಾಂಶುಪಾಲರಾದ ಡಾ. ಆರ್ ಡಿ ಜನಾರ್ಧನ್ ಅಧ್ಯಕ್ಷತೆವಹಿಸಿ, ಪ್ರಾಸ್ತಾವಿಕ ಮಾತನಾಡಿ, ಎಲ್ಲರಲ್ಲೂ ಒಂದೆ ರೀತಿಯ ಪ್ರತಿಭೆ ಇರುವುದಿಲ್ಲ. ಯಾವ ವಿದ್ಯಾರ್ಥಿಗೆ ಯಾವುದರಲ್ಲಿ ಪರಿಣಿತಿ ಇದೆ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಈ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಕೌಶಲ್ಯಕ್ಕೆ ತಕ್ಕಂತೆ ವೇದಿಕೆ ಕಲ್ಪಿಸಬೇಕು. ನಮ್ಮ ಹಾಗೇ ನಮ್ಮ ವಿದ್ಯಾರ್ಥಿಗಳು ಇರಬೇಕು ಎನ್ನುವುದು ಸರಿಯಾದುದಲ್ಲ. ಮನುಷ್ಯ ಮೌಲ್ಯಗಳನ್ನು ಮೊದಲು‌ ಕಲಿತುಕೊಳ್ಅಲುಮ್ನಿ
  ನಮ್ಮ ಕಾಲೇಜಿನಲ್ಲಿ ಸ್ಟಾಪ್ ರೂಮ್‌ ಹಾಗೂ ಪ್ರಾಂಶುಪಾಲರ ಕೊಠಡಿಯನ್ನು ಪ್ರತ್ಯೇಕಿಸಲಾಗಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಉಪನ್ಯಾಸಕರ‌ ಜೊತೆ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ. ನಮ್ಮ ಕಾಲೇಜಿಗೆ ತಾತ್ಕಾಲಿಕ ಅಫಿಲೇಷನ್ ಸಿಕ್ಕಿದೆ, ಖಾಯಂ ಅಫಿಲೇಷನ್ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೆವೆ. ನ್ಯಾಕ್ ಮಾನ್ಯತೆ ಕೊಡಿಸುವ ಪ್ರಯತ್ನ‌ ಮಾಡುತ್ತೆವೆ ಎಂದು ಹೇಳಿದರು.
  ಕಳೆದ ವರ್ಷದ ಪ್ಲೇಸಮೆಂಟ್ ನಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳು ಉದ್ಯೋಗ ಕಂಡುಕೊಂಡಿದ್ದಾರೆ. ಪದವಿಯೊಂದಿಗೆ ಪೂರಕ ಕೋರ್ಸ್ ಗಳನ್ನು ಮುಂದಿನ‌ ದಿನಗಳಲ್ಲಿ ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತದೆ. ಅಲುಮ್ನಿ ಅಸೋಸಿಯೇಷನ್(ಹಳೆಯ ವಿದ್ಯಾರ್ಥಿಗಳು) ಇದುವರೆಗೆ ಸ್ತಾಪಿಸಲಾಗಿಲ್ಲ. ಇನ್ನೂ‌ ಮುಂದೆ ಅಲುಮ್ನಿ ಅಸೋಸಿಯೇಷನ್ ನೋಂದಣಿ ಮಾಡಬೇಕಾಗಿದೆ. ತನ್ಮೂಲಕ ಕಾಲೇಜನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಚಿಂತನೆ ನಡೆದಿದೆ ಎಂದರು. 
     ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಉಲ್ಲಾಸ ಶಾನಭಾಗ, ಪ್ರೇಮಾನಂದ ನಾಯ್ಕ, ಗೋಪಾಲ ನೇತ್ರೇಕರ ವೇದಿಕೆಯಲ್ಲಿದ್ದರು.
    ಉಪನ್ಯಾಸಕರುಗಳಾದ ಸವೀತಾ ನಾಯ್ಕ ಸ್ವಾಗತಿಸಿದರು, ಸುರೇಖಾ ತಡವಲ್ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ದಿನೇಶ ಗೌಡ ಪ್ರಸನ್ನ ವೈದ್ಯ ಪರಿಚಯಿಸಿದರು. ವಿದ್ಯಾರ್ಥಿನಿ ಅಂಕೀತಾ ಭಟ್ ಪ್ರಾರ್ಥಿಸಿದರು. ಉಪನ್ಯಾಸಕಿ ಉಮಾ ಗೌಡ ವಂದಿಸಿದರು.

ಯಲ್ಲಾಪುರದ ಕಳಚೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಆರೋಗ್ಯ ಸಹಾಯಕಿಯರ ವಸತಿ ಗೃಹ: ಗ್ರಾಮಸ್ಥರ ಆಕ್ರೋಶ


ಯಲ್ಲಾಪುರ: ತಾಲೂಕಿನ ಕಳಚೆ ಗ್ರಾಮದಲ್ಲಿರುವ ಆರೋಗ್ಯ ಸಹಾಯಕಿಯರ ವಸತಿ ಗೃಹ ಸುಮಾರು 25 ವರ್ಷ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಮೇಲ್ಚಾವಣಿಯ ಸಿಮೆಂಟ್ ಶೀಟ್‌ಗಳು ಉದುರಿ ಬೀಳುತ್ತಿವೆ, ಗೋಡೆಗಳು ಕುಸಿಯುವ ಹಂತದಲ್ಲಿದೆ. ಈ ಕಟ್ಟಡದ ಪಕ್ಕದಲ್ಲೇ ಅಂಗನವಾಡಿ ಕಟ್ಟಡ ಇರುವುದರಿಂದ, ಮಕ್ಕಳು, ಪಾಲಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

      ಕಟ್ಟಡ 25 ವರ್ಷ ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮೇಲ್ಚಾವಣಿಯ ಸಿಮೆಂಟ್ ಶೀಟ್‌ಗಳು ಉದುರಿ ಬೀಳುತ್ತಿವೆ, ಗೋಡೆಗಳು ಕುಸಿಯುವ ಹಂತದಲ್ಲಿರುವುದರಿಂದ  ಅಂಗನವಾಡಿಯೂ ಅಪಾಯಕ್ಕೆ ಸಿಲುಕಿದೆ. ಕಟ್ಟಡ ಕುಸಿದರೆ ಅಥವಾ ಬೀಳುವ ಶೀಟ್ ಗಳು ಮಕ್ಕಳಿಗೆ ಅಪಾಯ ಉಂಟಾಗಬಹುದಾದ ಸಾಧ್ಯತೆಯಿದೆ.  ಕಟ್ಟಡದ ಸುತ್ತಮುತ್ತ ಕಸದ ನೀರಿನ ತೊಟ್ಟಿಗಳಿದ್ದು, ಮಳೆ ನೀರು ನಿಂತು ಸೊಳ್ಳೆಗಳು ವಾಸಸ್ಥಾನವಾಗಿದೆ. ಇದರಿಂದ ಡೆಂಗ್ಯೂ, ಮಲೇರಿಯಾ ಭಯ ಪಾಲಕರನ್ನು ಜನರನ್ನು ಕಾಡುತ್ತಿದೆ.


    ಕಳಚೆಯ 600ಕ್ಕೂ ಹೆಚ್ಚು ಜನಸಂಖ್ಯೆಗೆ ಆರೋಗ್ಯದ ಸಲಹೆ ಮತ್ತು ಸೂಚನೆಗಳನ್ನು ನೀಡಲು ಈ ಕಟ್ಟಡದ ದುರಸ್ತಿ ಅಗತ್ಯವಿದೆ. ಕಳಚೆಯ ಎಎನ್ಎಂ (ಆರೋಗ್ಯ ಸಹಾಯಕಿಯರು) ಇವರು ಕಟ್ಟಡದ ದುಸ್ಥಿತಿಯ ಕಾರಣದಿಂದ ವಾಸ್ತವ್ಯ ಮಾಡುತ್ತಿಲ್ಲ. ಹೀಗಾಗಿ ಕಳಚೆ ಗ್ರಾಮಸ್ಥರು ಮಳವಳ್ಳಿ ಅಥವಾ ವಜ್ರಳ್ಳಿ ಭಾಗವನ್ನೇ ಆರೋಗ್ಯಕ್ಕಾಗಿ ಆಶ್ರಯಿಸಬೇಕಾಗಿದೆ. ಸಂಪೂರ್ಣ ಕಟ್ಟಡವನ್ನು ದುರಸ್ತಿ ಮಾಡಿ, ಆರೋಗ್ಯ ಸಹಾಯಕಿಯರು ಇಲ್ಲಿಯೇ ಉಳಿಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ವಜ್ರಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಜಾನನ ಭಟ್‌ ಅವರು ಹೇಳಿದ್ದಾರೆ.

   ಹಿಂದೆ ಭೂಕುಸಿತವಾದ ಪ್ರದೇಶದಲ್ಲಿ ಕಳಚೆಯ ಆಸ್ಪತ್ರೆ ಸಣ್ಣ ಕಟ್ಟಡದಲ್ಲಿ ನಡೆಯುತ್ತಿತ್ತು. ಭೂಕುಸಿತಾದ ನಂತರ ಆಸ್ಪತ್ರೆಯೇ ಇಲ್ಲದಂತಾಗಿದೆ. ಕಟ್ಟಡವನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ಇನ್ನಷ್ಟು ವರ್ಷಗಳ ಕಾಲ ಈ ಕಟ್ಟಡವನ್ನು ಆರೋಗ್ಯ ಸಹಾಯಕರಿಗೆ ಬಳಸಬಹುದಾಗಿದೆ ಎಂಬುದು ಸ್ಥಳೀಯ ಜನರ ಅಭಿಪ್ರಾಯವಾಗಿದೆ. 

    ಕಟ್ಟಡ ಶಿಥಿಲವಾಗಿರುವುದರಿಂದ ಆರೋಗ್ಯ ಸಹಾಯಕಿಯರು ಇಲ್ಲಿ ವಾಸಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಕಳಚೆ ಸೇರಿ ಅಕ್ಕಪಕ್ಕದ 300 ಮನೆಗಳ 600ರಿಂದ 700 ಜನರಿಗೆ ಆರೋಗ್ಯ ಸೇವೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಆರೋಗ್ಯ ಸಹಾಯಕಿಯರು ಇಲ್ಲಿ ವಾಸಿಸಲು ಅನುಕೂಲಕರ ವಾತಾವರಣವನ್ನು ಒದಗಿಸಬೇಕು. ಕಟ್ಟಡವನ್ನು ಭವಿಷ್ಯದಲ್ಲಿ ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ನಿರಂತರ ನಿರ್ವಹಣೆ ಮಾಡಬೇಕು.  ಈ ಸಮಸ್ಯೆಯನ್ನು ಸಂಬಂಧಿತ ಇಲಾಖೆಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

(ವರದಿ ; ಜಗದೀಶ ನಾಯಕ/ದತ್ತಾತ್ರೇಯ ಕಣ್ಣಿಪಾಲ ವಜ್ರಳ್ಳಿ)

.




ಯಲ್ಲಾಪುರ ರಾಷ್ಟ್ರೀಯ ಲೋಕ್ ಅದಾಲತ್, 205 ಪ್ರಕರಣ ಇತ್ಯರ್ಥ,13,541,730 ರೂ ಭರಣ


ಯಲ್ಲಾಪುರ ; ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ. ಒಟ್ಟು 205 ಪ್ರಕರಣ ಇತ್ಯರ್ಥಗೊಂಡು,13,541,730 ರೂ ಭರಣವಾಯಿತು.

   ಹಿರಿಯ ಸಿವಿಲ್ ನ್ಯಾಯಾಧೀಶರಾದ ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿರವರ ನೇತ್ರತ್ವದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 135 ಪ್ರಕರಣ ದಾಖಲಾಗಿದ್ದು, 27 ಪ್ರಕರಣ ಇತ್ಯರ್ಥಗೊಂಡಿವೆ. ಹಾಗೂ 1,24,54,177 ಭರಣವಾಗಿದೆ. 

   ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್

ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್‌ರವರ ನೇತ್ರತ್ವದಲ್ಲಿ ದಾಖಲಾಗಿದ್ದು 474 ಪ್ರಕರಣಗಳಲ್ಲಿ 188 ಪ್ರಕರಣ ಇತ್ಯರ್ಥಗೊಂಡು 10,87,553 ರೂ. ಭರಣವಾಯಿತು.

   ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಂದಾನಕಾರರಾಗಿ ವಕೀಲರಾದ ರವಿ ಶಿವನಗೌಡ ಪಾಟೀಲ್ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಸಂದಾನಕಾರರಾಗಿ ವಕೀಲರಾದ ತೇಜಶ್ವಿ ವೆಂಕಟರಮಣ ಹೆಗಡೆ ಕಾರ್ಯನಿರ್ವಹಿಸಿದರು.

  ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಸರಸ್ವತಿ ಜಿ ಭಟ್, ಅಪರ ಸರಕಾರಿ ವಕೀಲರಾದ ಎನ್ ಟಿ ಗಾಂವ್ಕರ್, ಸಹಾಯಕ ಸರಕಾರಿ ಅಭಿಯೋಜಕರಾದ ಝೀನತ್ ಬಾನು ಶೇಖ, ಎಲ್ಲಾ ವಕೀಲರು , ನ್ಯಾಯಾಲಯದ ಸಿಬ್ಬಂದಿಗಳು, ಆರಕ್ಷಕರು, ಬ್ಯಾಂಕಿನ ಹಾಗೂ ಸೊಸೈಟಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಯಲ್ಲಾಪುರದ ಈಶ್ವರ ದೇವಸ್ಥಾನದಲ್ಲಿ ಜು.15ರಂದು ವಿಶೇಷ ಪೂಜೆ ಮತ್ತು ಅಘೋರಾಸ್ತ್ರ ಕಾರ್ಯಕ್ರಮ.


ಯಲ್ಲಾಪುರ : ಪಟ್ಟಣದ ಗೋಪಾಲಕೃಷ್ಣ ಗಲ್ಲಿಯಲ್ಲಿರುವ ಅತ್ಯಂತ ಪುರಾತನ ಈಶ್ವರ ದೇವಸ್ಥಾನದಲ್ಲಿ ಜುಲೈ 15ರಂದು ಸೋಮವಾರ ರಾತ್ರಿ 8 ಗಂಟೆಗೆ ವಿಶೇಷ ಪೂಜೆ ಕಾರ್ಯಕ್ರಮಗಳು ಆರಂಭವಾಗಲಿವೆ. 

    ಈ ಸಂದರ್ಭದಲ್ಲಿ ಅಘೋರಾಸ್ತ್ರ, ಮಂತ್ರ ಜಪ, ಹೋಮ, ನಾಮಸ್ಮರಣೆ ಪ್ರಾರ್ಥನೆ, ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಹ, ಕಲಶ ಪ್ರತಿಷ್ಠಾಪನೆ, ಜಪ, ಹೋಮ, ಪೂರ್ಣಹುತಿ ಹಾಗೂ ಮಹಾ ಮಂಗಳಾರತಿ ಹಾಗೂ ದಿಗ್ಗಲಿ ಕ್ಷೇತ್ರಪಾಲ ಬಲಿಯಂತಹ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ ಎಂದು ಈಶ್ವರ ದೇವಸ್ಥಾನ ಆಡಳಿತ ಕಮಿಟಿ ತಿಳಿಸಿದೆ.

 

 ದೇವಾಲಯದಲ್ಲಿ ಪ್ರತಿದಿನವೂ ಪೂಜಿಸಲ್ಪಡುವ ವಿಗ್ರಹಗಳು ಜೀರ್ಣಾವಸ್ಥೆಯಲ್ಲಿರುವುದರಿಂದ, ಶುಭ ಮುಹೂರ್ತದಲ್ಲಿ ಆಗಮ ಶಾಸ್ತ್ರದ ವಿಧಿ-ವಿಧಾನಗಳ ಪ್ರಕಾರ ನೂತನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವ ನಿರ್ಧಾರವನ್ನು ಭಕ್ತರು ಹಾಗೂ ಆಡಳಿತ ಮಂಡಳಿ ತೆಗೆದುಕೊಂಡಿದೆ. ಈ ಮಹತ್ವದ ಪ್ರತಿಷ್ಠಾನ ಕಾರ್ಯಕ್ರಮ ಪೂರ್ವಭಾವಿಯಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ, ರಾತ್ರಿ 9 ಗಂಟೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ.

   ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ದೇವಸ್ಥಾನ ಆಡಳಿತ ಕಮಿಟಿ ಮನವಿ ಮಾಡಿದೆ. ಶ್ರೇಷ್ಠ ಇತಿಹಾಸವಿರುವ ಈಶ್ವರ ದೇವಾಲಯದಲ್ಲಿ ದೇವರ ಪೂಜಾ ವಿಗ್ರಹಗಳಾದ ಈಶ್ವರ, ನಂದಿ, ನಾಗ ದೇವರ ನೂತನ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಕಾರ್ಯಕ್ಕೆ, ಸಾರ್ವಜನಿಕ ಸದ್ಭಕ್ತರು ತನು, ಮನ, ಧನದ ಸಹಾಯ ನೀಡಿ ಪುನೀತರಾಗಬೇಕಾಗಿ ಕಮಿಟಿಯವರು ಮನವಿ ಮಾಡಿದ್ದಾರೆ.

ಜುಲೈ 16ರಂದು ಯಲ್ಲಾಪುರದ ಮದರ್ ತೆರೇಸಾ ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ, ಪ್ರದರ್ಶನ

 ಯಲ್ಲಾಪುರ: ಜುಲೈ 16ರಂದು ಮಂಗಳವಾರ, ಯಲ್ಲಾಪುರದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವಿಜ್ಞಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.

   ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೇ. ಡಾ. ವೆಲೇರಿಯನ್ ಶಿಕ್ವೇರಾ ಭಾಗವಹಿಸಲಿದ್ದಾರೆ, ಮತ್ತು ಗೌರವ ಅತಿಥಿಗಳಾಗಿ ರೇ.ಫಾ. ಪೀಟರ್ ಕಾರನೇರೋ ಉಪಸ್ಥಿತರಿರಲಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಾದ ರೇ.ಫಾ. ರಾಯಸ್ಟನ್ ಗೊನ್ಸಾಲ್ವಿಸ್ ಎಲ್ಲಾ ಪಾಲಕರು ಮತ್ತು ಸಾರ್ವಜನಿಕರನ್ನು ಈ ವಿಶೇಷ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನಿಸಿದ್ದಾರೆ. 

 ಈ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಮತ್ತು ಜ್ಞಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿವಿಧ ಪ್ರಯೋಗಗಳು, ಪ್ರದರ್ಶನಗಳು ಮತ್ತು ಸ್ಪರ್ಧೆಗಳ ಮೂಲಕ, ವಿದ್ಯಾರ್ಥಿಗಳು ವಿಜ್ಞಾನದ ರೋಮಾಂಚಕ ಪ್ರಪಂಚವನ್ನು ಅನ್ವೇಷಿಸುವ ಅವಕಾಶವನ್ನು ಪಡೆಯಲಿದ್ದಾರೆ.

ಯಲ್ಲಾಪುರದಲ್ಲಿ ನಿಮ್ಮ ಹಳೆಯ ಬಂಗಾರವನ್ನು ಯೋಗ್ಯ ಬೆಲೆಗೆ ಖರೀದಿಸುವ ಧನೀಷ್ ಎಂಟರಪ್ರೈಸಸ್

ಯಲ್ಲಾಪುರ: ಪಟ್ಟಣದ ಡಿಟಿ ರಸ್ತೆಯ ಬಾಳಗಿ ಕಾಂಪ್ಲೆಕ್ಸ್ ನಲ್ಲಿ ಜುಲೈ 1ರಿಂದ ಪ್ರಾರಂಭವಾಗಿರುವ ಧನೀಷ್ ಎಂಟರಪ್ರೈಸಸ್ (ಬಂಗಾರದ ಖರೀದಿದಾರರು) ಗ್ರಾಹಕರು ಮಾರಲು ಇಚ್ಚಿಸುವ ಬಂಗಾರದ ಆಭರಣಗಳಿಗೆ ಉತ್ತಮವಾದ ಬೆಲೆಯನ್ನು ನೀಡಿ ಕೊಂಡು ಕೊಳ್ಳುತ್ತಾರೆ.
   ನಾಲ್ಕು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಧನೀಷ್ ಎಂಟರಪ್ರೈಸಸ್ ಸಂಸ್ಥೆ, ಯಲ್ಲಾಪುರದಲ್ಲಿ ಡಿಟಿ ರಸ್ತೆಯ ಪೊಲೀಸ್ ಸ್ಟೇಷನ್ ಹಿಂಬದಿಯಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಿದ್ದಾರೆ. ಕಡಿಮೆ ಕಾಗದ ಪತ್ರಗಳ ವ್ಯವಹಾರ ಮತ್ತು ಸಂಪೂರ್ಣ ನಿಯಮಬದ್ದವಾಗಿ(ಕಳ್ಳತನ ಕಾನೂನು ಬಾಹೀರವಲ್ಲದ) ಬಂಗಾರವನ್ನು ಖರೀದಿಸುವ ಮೂಲಕ, ಗ್ರಾಹಕರ ವಿಶ್ವಾಸಾರ್ಹತೆ ಪಡೆದುಕೊಂಡು ಉಳಿಸಿಕೊಂಡಿದ್ದಾರೆ. 
ಆನ್ಲೈನ್ ದರದಲ್ಲಿ ನಿಮ್ಮ ಚಿನ್ನವನ್ನು ಖರೀದಿಸುತ್ತಾರೆ:
ಧನೀಷ್ ಎಂಟರಪ್ರೈಸಸ್, ಆನ್ಲೈನ್ ದರವನ್ನು ಅನುಸರಿಸಿ ನಿಮ್ಮ ಚಿನ್ನಕ್ಕೆ ಯೋಗ್ಯ ಬೆಲೆಯನ್ನು ನೀಡುತ್ತದೆ. ಇದು ಗ್ರಾಹಕರಿಗೆ ಬಹಳ ಪ್ರಯೋಜನಕಾರಿಯಾಗುತ್ತದೆ.

ನಿಮ್ಮ ಚಿನ್ನಕ್ಕೆ ಉತ್ತಮ ಬೆಲೆಯನ್ನು ನೀಡುತ್ತಾರೆ:
 ಗ್ರಾಹಕರು ತಮ್ಮ ಹಳೆಯ ಬಂಗಾರದ ಆಭರಣಗಳನ್ನು ಮಾರಲು ಬಂದಾಗ, ಧನೀಷ್ ಎಂಟರಪ್ರೈಸಸ್ ಅತ್ಯುತ್ತಮ ಬೆಲೆಯನ್ನು ನೀಡುತ್ತದೆ, ಇದು ಬಂಗಾರದ ಮೌಲ್ಯವನ್ನು ಸಮರ್ಪಕವಾಗಿ ಗುರುತಿಸುವುದಕ್ಕೆ ಸಹಾಯ ಮಾಡುತ್ತದೆ.

ಅಡವಿಟ್ಟ ಚಿನ್ನವನ್ನು ಬಿಡಿಸಿ ಉಳಿದ ಹಣವನ್ನು ನೀಡುತ್ತಾರೆ:
ನೀವು ಅಡವಿಟ್ಟಿರುವ ಚಿನ್ನವನ್ನು ಬಿಡುಗಡೆ ಮಾಡಿಸುವ ಸೇವೆಯನ್ನು ಕೂಡ ಧನೀಷ್ ಎಂಟರಪ್ರೈಸಸ್ ಒದಗಿಸುತ್ತದೆ. ಈ ಮೂಲಕ, ನಿಮಗೆ ಉಳಿದ ಹಣವನ್ನು ಕೂಡ ಪಡೆಯಬಹುದು.

ಯಾವುದೇ ಸರ್ವಿಸ್ ಚಾರ್ಜ್ ತೆಗೆದುಕೊಳ್ಳುವುದಿಲ್ಲ:
ಧನೀಷ್ ಎಂಟರಪ್ರೈಸಸ್ ಯಾವುದೇ ಸರ್ವಿಸ್ ಚಾರ್ಜ್ ಅನ್ನು ಗ್ರಾಹಕರಿಂದ ವಸೂಲು ಮಾಡುವುದಿಲ್ಲ ಎಂದು ಮಾಲಿಕರಾದ ಕಿರಣ ಭೋವಿ ತಿಳಿಸಿದ್ದಾರೆ. 

ಧನೀಷ್ ಎಂಟರಪ್ರೈಸಸ್ ನಲ್ಲಿ ವಿಶ್ವಾಸಾರ್ಹ ಮತ್ತು ಸಮರ್ಪಿತ ಸೇವೆಯನ್ನು ನೀವು ನಿರೀಕ್ಷಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಯಲ್ಲಾಪುರ ಧನೀಷ್ ಎಂಟರಪ್ರೈಸಸ್ ಮಾಲಿಕರಾದ ಕಿರಣ ಭೋವಿ ಅವರನ್ನು ಸಂಪರ್ಕಿಸಿ. ಮೊಬೈಲ್ : 
+91 9711047983
dhanish-july-24pyd dhanish-july24pyd1

ಮಚ್ಚಿಗಲ್ಲಿ ಶಾಲೆಯ ಹಿಂದೆ ಗಾಂಜಾ ಸೇವಿಸುತಿದ್ದ ಯುವಕನ ಬಂಧನ

ಯಲ್ಲಾಪುರ : ಪಟ್ಟಣದ ಮಚ್ಚಿಗಲ್ಲಿಯ ಶಾಲೆಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ 20 ವರ್ಷದ ಯುವಕನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
 
 ಪಿಎಸ್ಐ ನಿರಂಜನ ಹೆಗಡೆ ಅವರು ಯುವಕನ ವಿರುದ್ಧ ಜುಲೈ  12 ರಂದು ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ, ಆರೋಪಿ ಕಾರ್ತಿಕ ಚಂದ್ರು ಸಿದ್ದಿ(20) ಯುವಕ ಜುಲೈ 12ರಂದು 11:30 ಗಂಟೆಯ ಸುಮಾರಿಗೆ ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಕೆಜಿಎಸ್ ಶಾಲೆಯ ಹಿಂಬದಿಯ ಕಟ್ಟಡದ ಹಿಂದೆ ಗಾಂಜಾ ಸೇವನೆ ಮಾಡುತ್ತಿದ್ದಾಗ ಪತ್ತೆಹಚ್ಚಲಾಗಿದೆ.
   ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದಕ್ಕೆ ಖಚಿತವಾಗಿದೆ. ಹೀಗಾಗಿ, ಆರೋಪಿ ಕಾರ್ತಿಕ ಚಂದ್ರು ಸಿದ್ದಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(ಬಿ) ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣವನ್ನು ತನಿಖಾಧಿಕಾರಿ ಹೆಡ್ ಕಾನ್ಸ್ಟೇಬಲ್ ದೀಪಾ ಪೈ ಅವರು ದಾಖಲಿಸಿಕೊಂಡಿದ್ದಾರೆ.