Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 16 July 2024

ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರವರೆಗೆ ಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ

ಯಲ್ಲಾಪುರ : ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನ ನಿತ್ಯಾನಂದ ನಗರ ಧರ್ಮಸ್ಥಳ ಇದರ ಪೀಠಾಧೀಶ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರ ಚಾತುರ್ಮಾಸ್ಯ ವೃತ ಕಾರ್ಯಕ್ರಮವು ಮೊದಲ ಬಾರಿಗೆ ಜಿಲ್ಲೆಯ ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರವರೆಗೆ ನಡೆಯಲಿದೆ ಎಂದು ಯಲ್ಲಾಪುರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹ ಏನ್. ನಾಯ್ಕ ಹೇಳಿದರು.
        ಅವರು ಮಂಗಳವಾರ ಚಾತುರ್ಮಾಸ್ಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. 41 ದಿನಗಳ ಚಾತುರ್ಮಾಸ್ಯ ವ್ರತ  ನಡೆಯಲಿದ್ದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಕರಿಕಲ್ ಶಾಖಾ ಮಠದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಶ್ರೀಗಳು ಚಾರ್ತುಮಾಸ್ಯ ವೃತ ಆಚರಿಸುತ್ತಿದ್ದಾರೆ. ನಿತ್ಯವೂ ಕರಿಕಲ್ ಮಂದಿರದಲ್ಲಿ ಗುರು ಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು. 
       ಆಗಸ್ಟ್ 27 ರಂದು ಯಲ್ಲಾಪುರ ತಾಲೂಕಿನಿಂದ ನಾಮಧಾರಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದೇವೆ. ಸರ್ವ ಸಮುದಾಯದ ಭಕ್ತರು ಚಾತುರ್ಮಾಸ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಕೋರಿದರು.
   ಈ ಸಂದರ್ಭದಲ್ಲಿ ತಾಲೂಕಾ ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ನವೀನ ನಾಯ್ಕ, ಸಮಾಜದ ಪ್ರಮುಖರಾದ ಮಂಜುನಾಥ ನಾಯ್ಕ, ವಿನೋದ ನಾಯ್ಕ ಮಂಚಿಕೇರಿ, ರವಿಚಂದ್ರ ನಾಯ್ಕ, ರಾಘು ನಾಯ್ಕ ಗುಳ್ಳಾಪುರ, ವಿದ್ಯಾಧರ ನಾಯ್ಕ ಅರಬೈಲ, ಚಂದನ ನಾಯ್ಕ, ನಾಗರಾಜ ನಾಯ್ಕ, ಯುವರಾಜ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಅಂಕೋಲಾ: ಹೆದ್ದಾರಿ ನಿರ್ಮಾಣ ಸಂಸ್ಥೆಯ ಅಚಾತುರ್ಯದಿಂದ ಭೂಕುಸಿತ, ಮಹೇಶ ನಾಯ್ಕ ಆರೋಪ

ಯಲ್ಲಾಪುರ : ಹೆದ್ದಾರಿ ನಿರ್ಮಾಣ ಸಂಸ್ಥೆಯ ಅಚಾತುರ್ಯದಿಂದ ಅಂಕೋಲಾದ ಶಿರೂರ ಬಳಿಯ ಎನ್‌ಎಚ್‌ 66 ರಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಹಲವು ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ರಸ್ತೆಯನ್ನು ಕಟ್ಟುವಾಗ ತಡೆಗೋಡೆ ಅಥವಾ ಎತ್ತರದ ಕಬ್ಬಿಣದ ತಂತಿ ಬೇಲಿ ನಿರ್ಮಾಣ ಮಾಡದೇ ಇರುವ ಕಾರಣ ಈ ಅನಾಹುತ ಸಂಭವಿಸಿದೆ. ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಹೆದ್ದಾರಿ ನಿರ್ಮಾಣ ಸಂಸ್ಥೆಗಳು 1 ಕೋಟಿ ರೂಗಳ ಪರಿಹಾರವನ್ನು ನೀಡಬೇಕು ಎಂದು ಉ.ಕ ಲಾರಿ ಮಾಲಿಕರ ಪರವಾಗಿ ಯಲ್ಲಾಪುರದ ಮಹೇಶ ನಾಯ್ಕ ಆಗ್ರಹಿಸಿದ್ದಾರೆ.
   ಉತ್ತರ ಭಾರತದ ಹಲವು ಭಾಗಗಳಲ್ಲಿ, ಗಾಳಿ, ಮಂಜು ಮತ್ತು ಪರ್ವತ ಕರಗುವ ಸಂದರ್ಭದಲ್ಲಿ ಜೀವಾಪಾಯ ತಪ್ಪಿಸಲು ಕಾಂಕ್ರೀಟ್ ಹಾಗೂ ಕಬ್ಬಿಣದ ತಡೆ ನಿರ್ಮಾಣವನ್ನು ಮಾಡಲಾಗುತ್ತದೆ. ಆದರೆ, ಅಧಿಕ ಮಳೆ ಸುರಿಯುವ ಅಂಕೋಲಾದಲ್ಲಿ ಯಾಕೆ ಈ ರೀತಿಯ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗಿಲ್ಲ ಎಂದವರು ಪ್ರಶ್ನಿಸಿದ್ದಾರೆ.
    ಈ ಭೂಕುಸಿತದಿಂದಾಗಿ ಉತ್ತರಕನ್ನಡ ಜಿಲ್ಲೆಯ ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಜನರು ಸಜೀವ ಸಮಾಧಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣದ ಕುರಿತು ಹಲವು ಸಂಘಟನೆಗಳ ಮುಖಂಡರು ಯಾಕೇ ಮಾತನಾಡುತ್ತಿಲ್ಲ‌, ಹೆದ್ದಾರಿ ನಿರ್ಮಾಣ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಯಾಕೆ ಒತ್ತಾಯಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. 
    ಮಳೆಗಾಲದಲ್ಲಿ ದಕ್ಷಿಣ ಭಾರತದ ಬಹುತೇಕ ರಸ್ತೆಗಳು ತೇವದಿಂದ ಬಿರುಕು ಬಿಡುವುದು ಹಾಗೂ ಜರಿಯುವುದು ಸಾಮಾನ್ಯ. ಈ ಹಿಂದೆ ಅರಬೈಲ್‌ಘಟ್ಟದಲ್ಲಿ ಸಂಭವಿಸಿದ ಅನಾಹುತವನ್ನು ಮರೆಯುವ ಮುಂಚೆ, ಅಂಕೋಲಾದಲ್ಲಿ ನಡೆದ ಈ ದುರ್ಘಟನೆ ಸಾರ್ವಜನಿಕರು ವಾಹನ ಚಾಲಕರಿಗೆ ಆತಂಕವನ್ನು ಉಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.

ವಿದ್ಯುತ್ ಸಮಸ್ಯೆಗಳ ದೂರಿಗೆ ಹೆಸ್ಕಾಂ 24x7 ಸಹಾಯವಾಣಿ

ಯಲ್ಲಾಪುರ / ಕಾರವಾರ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಅಲ್ಲಲ್ಲಿ ಹೆಸ್ಕಾಂ ವಿದ್ಯುತ್ ಮಾರ್ಗಗಳಲ್ಲಿ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಹೆಸ್ಕಾಂ ಶಿರಸಿ ವೃತ್ತದ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
   ಮಳೆಗಾಳಿಗಳಿಂದ ವಿದ್ಯುತ್ ಅಡೆತಡೆ ಉಂಟಾದಲ್ಲಿ, ವಿದ್ಯುತ್ ವಾಹಕ ತುಂಡಾಗಿ ಬಿದ್ದಿದ್ದಲ್ಲಿ, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಹೆಸ್ಕಾಂ ಹೆಲ್ಪ್‌ಲೈನ್: 1912 ಅಥವಾ ಈ ಕೆಳಕಂಡ 24x7 ಗ್ರಾಹಕರ ಸಹಾಯವಾಣಿಗಳಿಗೆ ಸಂಪರ್ಕಿಸಿ ದೂರುಗಳನ್ನ ನೀಡಬಹುದಾಗಿದೆ. 
   ಕಾರವಾರ ವಿಭಾಗ- 
ಕಾರವಾರ ಶಾಖೆ: 08382- 221336, 
ಸದಾಶಿವಗಡ ಶಾಖೆ: 08382- 265753, 
ಅಂಕೋಲಾ ಶಾಖೆ: 08382- 230730, 
ಹೊನ್ನಾವರ ವಿಭಾಗ- 
ಕುಮಟಾ ಶಾಖೆ: 08386- 222034, 
ಗೋಕರ್ಣ ಶಾಖೆ: 94808 81935, 
ಮರಾಕಲ್ ಶಾಖೆ: 94808 83732, 
ಹೊನ್ನಾವರ ಶಾಖೆ: 08387- 220 294, 
ಕಾಸರಕೋಡ್ ಶಾಖೆ: 94808 81943, 
ಗೇರುಸೊಪ್ಪ ಶಾಖೆ: 08387- 268 063, 
ಭಟ್ಕಳ ಶಾಖೆ: 08385- 226 426/ 94808 81958, ಮುರುಡೇಶ್ವರ ಶಾಖೆ: 08385- 268 555/ 94815 04867

ಶಿರಸಿ ವಿಭಾಗ- 
ಶಿರಸಿ ಶಾಖೆ: 08384- 226 350/ 94808 81805, ಸಿದ್ದಾಪುರ ಶಾಖೆ: 08389- 230 162/ 94808 81888, ಯಲ್ಲಾಪುರ ಶಾಖೆ: 08419- 261 170/ 94808 81851, ಮುಂಡಗೋಡ ಶಾಖೆ: 08301- 222 151, ದಾಂಡೇಲಿ ವಿಭಾಗ- ದಾಂಡೇಲಿ ಶಾಖೆ: 08284- 231239, ಹಳಿಯಾಳ ಶಾಖೆ: 08284- 220 138, ದಾಂಡೇಲಿ ನಗರ ಶಾಖಾಧಿಕಾರಿ: 94808 81764, ದಾಂಡೇಲಿ ಗ್ರಾಮೀಣ ಶಾಖಾಧಿಕಾರಿ: 94808 81778, ರಾಮನಗರ ಶಾಖಾಧಿಕಾರಿ: 87490 08440, ಜೊಯಿಡಾ ಶಾಖಾಧಿಕಾರಿ: 94808 81779, ಹಳಿಯಾಳ ನಗರ ಶಾಖಾಧಿಕಾರಿ: 94808 81780, ಹಳಿಯಾಳ ಗ್ರಾಮೀಣ ಶಾಖಾಧಿಕಾರಿ: 94808 81781

ಅಂಕೋಲಾ ಶಿರೂರು ಗುಡ್ಡ ಕುಸಿತ, ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ ಪರ್ಯಾಯ ಮಾರ್ಗ ಬಳಸುವಂತೆ ಎಸ್ ಪಿ ಸೂಚನೆ

ಯಲ್ಲಾಪುರ : ಅಂಕೋಲಾ ತಾಲೂಕಿನ ಶಿರೂರು ಭಾಗದಲ್ಲಿ ಸಂಭವಿಸಿದ ಈ ಗುಡ್ಡ ಕುಸಿತದಿಂದ ಗುಡ್ಡದಿಂದ ಮಣ್ಣು ರಸ್ತೆ ಮೇಲೆ ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಸ್ಥಳೀಯ ಅಧಿಕಾರಿಗಳು ನಿರಂತರವಾಗಿ ತೆರವು ಕಾರ್ಯ ನಡೆಸುತ್ತಿರುವುದರಿಂದ ಹತ್ತಿರದ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ ಮಂಗಳೂರು ಕಾರವಾರ ಯಲ್ಲಾಪುರ. ಶಿರಸಿ ರಸ್ತೆ‌ ಮಾರ್ಗದಲ್ಲಿ ತಾತ್ಕಾಲಿಕವಾಗಿ ಬದಲಾವಣೆ‌ ಮಾಡಲಾಗಿದೇ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಎಂ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
  ವಾಹನ‌ ಚಾಲಕರು,   ಯಲ್ಲಾಪುರದಿಂದ ಮಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ಬಾಳೆಗುಳಿ ಕ್ರಾಸಿಂದ ಹೊಸಕಂಬಿ, ಹಿಲ್ಲೂರು, ಮಾದನಗೇರಿ ಕ್ರಾಸ್, ಕುಮಟಾ ಮುಖಾಂತರ ಪ್ರಯಾಣಿಸಬಹುದು. ಭಟ್ಕಳದಿಂದ ಕಾರವಾರಕ್ಕೆ ಬರುವ ವಾಹನಗಳು ಕುಮಟಾ, ಮಾದನಗೇರಿ ಕ್ರಾಸ್ ಮೂಲಕ ಹಿಲ್ಲೂರು, ಹೊಸಕಂಬಿ, ಬಾಳೆಗುಳಿ ಮುಖಾಂತರ ಕಾರವಾರಕ್ಕೆ ಸಾಗಬಹುದು.
   ಶಿರಸಿ-ಕುಮಟಾ ರಸ್ತೆಯಲ್ಲಿ ದೇವಿಮನೆ ಮತ್ತು ರಾಗಿಹೋಸಳ್ಳಿ ಮಧ್ಯದಲ್ಲೂ ಗುಡ್ಡ ಕುಸಿತ ಸಂಭವಿಸಿರುವ ಕಾರಣ, ಈ ಮಾರ್ಗದಲ್ಲಿಯೂ ಸಂಚಾರ ಸ್ಥಗಿತವಾಗಿದೆ. ಮುಂದಿನ ಕೆಲವು ದಿನಗಳಲ್ಲಿಯೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಇದೆ. ಆದ್ದರಿಂದ, ಸಾರ್ವಜನಿಕರು ಈ ಸಮಯದಲ್ಲಿ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ. ಶಿರಸಿಯಿಂದ ಕುಮಟಾ, ಯಲ್ಲಾಪುರ ಹಾಗೂ ಭಟ್ಕಳ ಮಾರ್ಗವಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರಿಸಬಹುದು.
   ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಗುಡ್ಡ ಕುಸಿತವಾಗಿದೆ. ಈ ಅವಘಡದಿಂದ ಹಲವು ವಾಹನಗಳು ಹಾಗೂ ವಾಸ್ತವ್ಯದ ಮನೆಗಳು ನದಿಯ ಪಾಲಾಗಿವೆ. ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು, ಸ್ಥಳೀಯ ಪ್ರಾಧಿಕಾರಗಳು ತೆರವು ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ. ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಿದ್ದಾರೆ. 
  

ಜುಲೈ 17 ರಂದು ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಆಚರಣೆ

ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಷಾಢ ಏಕಾದಶಿಯ ಪ್ರಯುಕ್ತ ಜುಲೈ 17 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 9.30 ಕ್ಕೆ ಲಕ್ಷ ತುಳಸಿ ಅರ್ಚನೆ ನಡೆಯಲಿದ್ದು, ಮಧ್ಯಾಹ್ನ 2 ಕ್ಕೆ ಗೀತಾಜ್ಞಾನ ಯಜ್ಞ ಕಾರ್ಯಕ್ರಮವು ಆರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮಾತೆಯರು ಭಗವದ್ಗೀತೆಯ 18 ಅಧ್ಯಾಯಗಳ ಪಾರಾಯಣ ಮಾಡಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

ವಜ್ರಳ್ಳಿಯಲ್ಲಿ ವೀರ ಸಾವರಕರ ಪ್ರತಿಮೆ ಸ್ಥಾಪನೆಗೆ ವಿರೋಧ ; ರಾಮು ನಾಯ್ಕ ಆಕ್ರೋಶ

ಯಲ್ಲಾಪುರ: ವಜ್ರಳ್ಳಿಯಂತಹ ಸಾಂಸ್ಕೃತಿಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭೂಮಿಯಲ್ಲಿ ವೀರ ಸಾವರಕರ ಪ್ರತಿಮೆ ಸ್ಥಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ.ಪಂ ಮಾಜಿ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ರಾಮು ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
  ಅವರು ಈ‌ ಕುರಿತು‌ ಪತ್ರಿಕಾ ಹೇಳಿಕೆ‌ ನೀಡಿ, "ಸಾವರಕರ ವಿರೋಧಿಗಳು ಇನ್ನೂ ಪರಕೀಯರ ಗುಲಾಮತನ ಮಾನಸಿಕತೆಯಲ್ಲಿದ್ದಾರೆ" ಎಂದು ಆರೋಪಿಸಿದ್ದಾರೆ. "ಭಾರತಕ್ಕೆ ಸ್ವಾತಂತ್ರ್ಯ ಪಡೆದ 75 ವರ್ಷಗಳಾದರೂ ಈ ಮನೋಭಾವ ಇಂದಿಗೂ ಉಳಿದುಕೊಂಡಿದೆ.
ವೀರ ಸಾವರಕರ್ ಕ್ರಾಂತಿಕಾರಿಯಾದರೂ, ಬ್ರಿಟಿಷರಿಂದ ಅಂಡಮಾನ್ ಜೈಲಿನಲ್ಲಿ ಹತ್ತಾರು ವರ್ಷಗಳ ಶಿಕ್ಷೆ ಅನುಭವಿಸಿದರು. ಅವರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು" ಅಧಿಕಾರಕ್ಕಾಗಿ, ತಮ್ಮ ವಯಕ್ತಿಕ ಸ್ವಾರ್ಥಕ್ಕಾಗಿ, ಇನ್ಯಾರನ್ನೋ ಮೆಚ್ಚಿಸಲಿಕ್ಕಾಗಿ ಈ ದೇಶದ ಅಸ್ಮಿತೆಯನ್ನೇ ವಿರೋಧಿಸುತ್ತಾರೆಂದರೆ, ಅದು ನಮ್ಮದೇ ಸ್ವತಂತ್ರ ಭಾರತದಲ್ಲಿ!. ಅದನ್ನು ಊಹಿಸಲೂ, ಸಹಿಸಲೂ ಸಾಧ್ಯವಿಲ್ಲ. ಎಂದು ಅವರು ಹೇಳಿದ್ದಾರೆ.
 ವಿವಾದ ಉದ್ವಿಗ್ನತೆಗೆ ಹೋಗುವ ಮೊದಲು, ತಾಲೂಕಾ ಆಡಳಿತವು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಗ್ರಾಮಸ್ಥರ ಬಹುಮತದಂತೆ ವೀರ ಸಾವರಕರ ಪ್ರತಿಮೆಯನ್ನು ಸ್ಥಾಪಿಸಲು ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಯಲ್ಲಾಪುರ ನ್ಯೂಸ್ ವರದಿ ಎಫೇಕ್ಟ್ ಮತ್ತೆ ತೆರದ ಇಂದೀರಾ ಕ್ಯಾಂಟೀನ್

ಯಲ್ಲಾಪುರ ; ಸೋಮವಾರ ರಾತ್ರಿ "ಯಲ್ಲಾಪುರ ನ್ಯೂಸ್ "ನಲ್ಲಿ  ಯಲ್ಲಾಪುರದ ಬೆಲ್ ರಸ್ತೆಯಲ್ಲಿರುವ  ಇಂದಿರಾ ಕ್ಯಾಂಟೀನ್ ಕೆಲಸಗಾರರಿಗೆ ಸಂಬಳ ನೀಡದೆ ಇರುವ ಕಾರಣಕ್ಕೆ ಬಂದ್ ಮಾಡಲಾಗಿದೆ ಎಂದು ವರದಿ ಮಾಡಲಾಗಿತ್ತು, ವರದಿಗೆ ಸ್ಪಂದಿಸಿದ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳು ಹಾಗೂ ರಾಜಕೀಯ‌ ಪ್ರಮುಖರು ನೀಡಿದ ಭರವಸೆ ಕಾರಣಕ್ಕಾಗಿ ಕೆಲಸಗಾರರು ಹಾಗೂ ಗುತ್ತಿಗೆದಾರರಿಗೆ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ಕೂಡಲೇ ಇಂದಿರಾ ಕ್ಯಾಂಟೀನ್ ಅನ್ನು ತೆರೆಯುವಂತೆ ವ್ಯವಸ್ಥೆ ಮಾಡಿದ್ದಾರೆ.
   ಕಳೆದ 10 ತಿಂಗಳಿಂದ ಇಲ್ಲಿಯ ಕೆಲಸಗಾರರಾದ ನರೇಂದ್ರ ನಾಯ್ಕ, ಸುಮಂಗಲಾ ಕುರಬರ್, ಮಂಜುಳಾ , ಮಹಾತ್ಮಾ, ಗೀತಾ ಇವರಿಗೆ ಗುತ್ತಿಗೆ ಪಡೆದ ಸಂಸ್ಥೆಯವರು ಸಂಬಳ ನೀಡಿರಲಿಲ್ಲ. ಅಲ್ಲದೆ ಕಿರಾಣಿ ಅಂಗಡಿಯಲ್ಲಿ, ತರಕಾರಿ ಅಂಗಡಿಯಲ್ಲಿ ಗ್ಯಾಸ್ ವಿತರಕರಲ್ಲಿ ಹಣದ ಬಾಕಿಯನ್ನು ಇಟ್ಟುಕೊಂಡಿದ್ದರು. ಅವರು ಸಾಮಾಗ್ರಿಗಳನ್ನು ನಕೊಡುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಗುತ್ತಿಗೆ ಪಡೆದ ಸಂಸ್ಥೆಗೆ ಬರಬೇಕಾದ ಹಣದ ಮೊತ್ತ ಇದುವರೆಗೂ ಬಂದಿಲ್ಲ ಎನ್ನುವ ಕಾರಣಕ್ಕೆ ಸಂಸ್ಥೆಯವರು ಕೆಲಸಗಾರರಿಗೆ ಸಂಬಳ ನೀಡದೆ ಅವರಿಂದಲೇ ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು.
   ಬಹಳಷ್ಟು ಶ್ರಮಪಟ್ಟು ನಿರ್ವಹಣೆ ಮಾಡಿದ್ದ ಕೆಲಸಗಾರರು ಇದೀಗ ಆರ್ಥಿಕ ಸಂಕಷ್ಟದಿಂದಾಗಿ ಸೋಮವಾರ ಬೆಳಿಗ್ಗೆ ಇಂದಿರಾ ಕ್ಯಾಂಟೀನ್ ಕಂಪೌಂಡ್ ಹಾಗೂ ಇಂದಿರಾ ಕ್ಯಾಂಟೀನ್ ಗೆ ಚಾವಿ ಹಾಕಿ ಬಂದ್ ಮಾಡಿದ್ದರು. ಪ್ರತಿ ದಿನ ಬೆಳಿಗ್ಗೆ ನಾಲ್ವತ್ತು ಉಪಹಾರ ಹಾಗೂ ಚಹಾ ಹಗಲಿನಲ್ಲಿ ಮುವತೈದರಿಂದ ನಾಲ್ವತ್ತು ಊಟ, ರಾತ್ರಿ ಐದರಿಂದ ಹತ್ತರವರೆಗೆ ಊಟಕ್ಕೆ ಶ್ರಮಿಕರು ಬರುತ್ತಿದ್ದರು. ಬಹಳಷ್ಟು ಶ್ರಮಜೀವಿಗಳಿಗೆ ಇಂದಿರಾ ಕ್ಯಾಂಟೀನ್ ಆಶ್ರಯವಾಗಿತ್ತು. 
   ಯಲ್ಲಾಪುರ ನ್ಯೂಸ್  ಪ್ರಕಟಾದವಾದ ವರದಿಯ ಎಫೆಕ್ಟ್ ನಿಂದಾಗಿ  ಹಾಗೂ ಇದೀಗ ಗುತ್ತಿಗೆದಾರರ ಬಾಕಿ ಇರುವ ಹಣವನ್ನು ವಾರದೊಳಗೆ ಸಂದಾಯ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಕೆಲಸಗಾರರು ಮಂಗಳವಾರ ಬೆಳಿಗ್ಗೆ 9:00 ಘಂಟೆಯಿಂದ ಇಂದಿರಾ ಕ್ಯಾಂಟೀನ್ ಅನ್ನು ತೆರೆದು ಗ್ರಾಹಕರಿಗೆ ತಿಂಡಿ ಊಟವನ್ನು ನೀಡುತ್ತಿದ್ದಾರೆ.

ಗ್ಯಾಸ್ ಟ್ಯಾಂಕರ್ ಸೋರಿಕೆ ಭಯ, ಗಂಗಾವಳಿ ನದಿ ತಟದ ಜನರು ಸುರಕ್ಷಿತ ಸ್ಥಳಕ್ಕೆ ; ಡಿಸಿ‌ ಲಕ್ಷ್ಮೀಪ್ರೀಯ

ಯಲ್ಲಾಪುರ ; ಅಂಕೋಲಾ ತಾಲ್ಲೂಕಿನ ವಾಸರಕುದ್ರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದ ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಉರುಳಿ ಬಿದ್ದು ಗ್ಯಾಸ್ ಸೋರಿಕೆಯಾಗುವ ಸಂಭವ ಇರುವುದರಿಂದ ನದಿ ತಡದಲ್ಲಿರುವ ಕುಟುಂಬಸ್ಥರು ಮತ್ತು ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರಾದ ಲಕ್ಷ್ಮಿಪ್ರೀಯಾ ಸೂಚಿಸಿದ್ದಾರೆ.
  ಈ ಕುರಿತು ಪತ್ರಿಕಾ ಹೇಳಿಕೆ‌ ನೀಡಿರುವ ಅವರು, ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಮಳೆಯಿಂದ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾಮಪಂಚಾಯತ ಶಿರೂರು ಗ್ರಾಮದಲ್ಲಿ ಭೂಕುಸಿತ ಸಂಭವಿಸಿರುತ್ತದೆ. ಭೂಕುಸಿತದಲ್ಲಿ ಎರಡು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಉರುಳಿ ಬಿದ್ದಿದ್ದು. ಸದ್ರಿ ಗ್ಯಾಸ್ ಟ್ಯಾಂಕರ್ ಗಳು ಸೋರಿಕೆಯಾಗುವ ಸಾಧ್ಯತೆಯಿರುವುದರಿಂದ, ನದಿ ದಡದಲ್ಲಿರುವ ಮನೆಗಳಲ್ಲಿ ವಾಸವಿರುವ ಸಾರ್ವಜನಿಕರು,
ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಅತ್ಯವಶಕವಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರು, ಸಹಾಯಕ ಆಯುಕ್ತರು ಕೂಡಲೇ ಮುನ್ನೆಚರಿಕೆ ಕ್ರಮವಾಗಿ ನದಿ ದಡದಲ್ಲಿರುವ ಎಲ್ಲಾ ಮನೆಗಳಲ್ಲಿರುವ ಕುಟುಂಬದ ಸದಸ್ಯರನ್ನು ಸುರಕ್ಷಿತ ಸ್ಥಳಗಳಾದ ಕಾಳಜಿ ಕೇಂದ್ರದಲ್ಲಿ ಸ್ಥಳಾಂತರಿಸಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮತ್ತು ಕಟ್ಟುನಿಟ್ಟಿನ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲು ಅವರು ಆದೇಶಿಸಿದ್ದಾರೆ.

 

ಯಲ್ಲಾಪುರ, ಅರಣ್ಯದಲ್ಲಿ ಹೆಚ್ಚು ಕಾಣಸಿಗುವ ಮಲಬಾರ್ ಟ್ರೀ ಟೋಡ್ ಕಪ್ಪೆಗಳು

ಯಲ್ಲಾಪುರ : ಸಾಮಾನ್ಯವಾಗಿ ಕಪ್ಪೆಗಳಲ್ಲಿ ಕಪ್ಪೆ ಮತ್ತು ನೆಲಗಪ್ಪೆ ಎಂಬ ಎರಡು ಮುಖ್ಯ ವರ್ಗೀಕರಣವಿರುವಾಗ, ಮೇಲ್ನೋಟಕ್ಕೆ ಅವು ಒಂದೇ ರೀತಿಯಂತೆ ಕಾಣಬಹುದು. ಕಪ್ಪೆಗಳು ಮೃದು ಚರ್ಮ ಹೊಂದಿದ್ದು, ಆಕರ್ಷಕ ನೋಟವನ್ನು ಕೊಡುತ್ತವೆ. ನೆಲಗಪ್ಪೆ ಒಂದು ಒರಟಾದ ಚರ್ಮ ಹೊಂದಿದ್ದು, ನೆಲದ ಮೇಲೆ ಹೆಚ್ಚು ಕಾಣಸಿಗುತ್ತವೆ. 
   ಕಪ್ಪೆಗಳನ್ನು ಅವಾಸವನ್ನು  ಜಲವಾಸಿ, ಅರೆಜಲವಾಸಿ, ವೃಕ್ಷವಾಸಿ, ನೆಲವಾಸಿ, ಹುದುಗು ವಾಸಿ ಹೀಗೆ ಐದು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಈ ವಿಭಜನೆಗೆ ಅನುಗುಣವಾಗಿ, ಕಪ್ಪೆಗಳನ್ನು ಪೊದೆಕಪ್ಪೆ, ಮರಗಪ್ಪೆ, ತೇಲುವ ಕಪ್ಪೆ, ಕುಣಿಯುವ ಕಪ್ಪೆ, ಇರುಳು ಕಪ್ಪೆ, ಹುದುಗು ಕಪ್ಪೆ ಇತ್ಯಾದಿ ಹೆಸರಿನಿಂದ ಗುರುತಿಸಲಾಗುತ್ತದೆ.
   ಪರಿಸರ ಸ್ನೇಹಿ ಕಪ್ಪೆಗಳ ಬಗ್ಗೆ ತಿಳಿದುಕೊಂಡಿರುವ ಬಾರೆ ಗ್ರಾಮದ ಗೋಪಾಲಕೃಷ್ಣ ಹೆಗಡೆ ಯಲ್ಲಾಪುರ, ಅರಣ್ಯದಲ್ಲಿ ಹೆಚ್ಚು ಕಾಣಸಿಗುವ ಮಲಬಾರ್ ಟ್ರೀ ಟೋಡ್ ಕಪ್ಪೆಗಳಬಗ್ಗೆ ಕೆಲವೊಂದಿಷ್ಟು‌ ಮಾಹಿತಿ‌ ನೀಡಿದ್ದಾರೆ.
     ಮಲಬಾರ್ ಟ್ರೀ ಟೋಡ್ (Pedostibes tuberculosus) ಎಂಬ ಮರವಾಸಿ ಕಪ್ಪೆಯನ್ನು 1876ರಲ್ಲಿ ಪತ್ತೆಹಚ್ಚಲಾಯಿತು. 2004ರಲ್ಲಿ ಡಾ. ಕೆ ವಿ ಗುರುರಾಜ್ ಅವರು ಅದನ್ನು ಮತ್ತೊಮ್ಮೆ ಗುರುತಿಸಿದರು. ಅಂದಿನಿಂದ, ಗುರುರಾಜ್ ಅವರು "ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಪ್ಪೆಗಳ ಆವಾಸ ಸ್ಥಳಗಳ ಬಗ್ಗೆ ಅಧ್ಯಯನ ನಡೆಸಿದರು. ಈ ಅಧ್ಯಯನದಲ್ಲಿ, "ಫ್ರಾಗ್ ವಾಚ್" ಎಂಬ ಆಪ್‌ ಅನ್ನು ಬಿಡುಗಡೆ ಮಾಡಲಾಗಿದ್ದು, ಜನರು ಕಪ್ಪೆಗಳ ಫೋಟೋಗಳನ್ನು ಆ್ಯಪ್ನಲ್ಲಿ ಹಾಕಿ ಮಾಹಿತಿಯನ್ನು ಶೇರ್ ಮಾಡಬಹುದು. ಈ ಪ್ರಯತ್ನದ ಫಲವಾಗಿ, ಮಲಬಾರ್ ಟ್ರೀ ಟೋಡ್ ಕರ್ನಾಟಕ, ಮಹಾರಾಷ್ಟ್ರ, ಕೇರಳದ ವಿವಿಧ ಪ್ರದೇಶಗಳಲ್ಲಿ ಕಂಡುಬಂದಿತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಇಡಗುಂದಿ, ತೆಲಂಗಾರ್, ವಜ್ರಳ್ಳಿ, ಬಾಸಲ್ ಮುಂತಾದ ಸ್ಥಳಗಳಲ್ಲಿ ಈ ಕಪ್ಪೆಗಳು ಹೆಚ್ಚು ಕಾಣಸಿಗುತ್ತವೆ.
   ಜೂನ್ ತಿಂಗಳಿಂದ ಆಗಸ್ಟ್ ಅವಧಿಯಲ್ಲಿ ಈ ಮರವಾಸಿ ಕಪ್ಪೆಗಳು ತಮ್ಮ ವಂಶಾಭಿವೃದ್ಧಿಗಾಗಿ ಮರದಿಂದ ಕೆಳಕ್ಕೆ ಬರುತ್ತವೆ. ಮಳೆಗಾಲದ ಪ್ರಾರಂಭದ ಸಮಯದಲ್ಲಿ, ಸಣ್ಣ ತೊರೆಗಳಲ್ಲಿ ಮತ್ತು ಹಳ್ಳಗಳ ಅಂಚುಗಳಲ್ಲಿ ಇರುವ ವೃಕ್ಷಗಳಲ್ಲಿ ಇವುಗಳು ಕಂಡುಬರುತ್ತವೆ. ಕಪ್ಪೆಗಳ ಕೂಗಿನಿಂದ ಆವಾಸಸ್ಥಾನವನ್ನು ಗುರುತಿಸಲು ಸಾಧ್ಯ.
   ಇಂಡಿಯಾ ಬಯೋ ಡೈವರ್ಸಿಟಿ ಪೊರ್ಟಲ್  ಸೇರಿದಂತೆ ಹಲವಾರು "ನಾಗರೀಕ ವಿಜ್ಞಾನ ವೇದಿಕೆಗಳು" ಕಪ್ಪೆಗಳ ಸಂರಕ್ಷಣಾ ಕಾರ್ಯದಲ್ಲಿ ನಿರಂತರ ಶ್ರಮಿಸುತ್ತಿವೆ. ಈ ವೇದಿಕೆ, ಭಾರತೀಯ ಜೀವ ವೈವಿಧ್ಯದ ಮಾಹಿತಿಯನ್ನು ಸ್ಥಳೀಯ ಆಸಕ್ತರಿಂದ ಸಂಗ್ರಹಿಸಿ, ಪ್ರಾದೇಶಿಕವಾಗಿ ಸಂರಕ್ಷಣೆಗಾಗಿ ಉಪಯೋಗಿಸುತ್ತದೆ. 
    ಹೀಗೆ, ಹೆಚ್ಚು ಕಪ್ಪೆಗಳ ಅಧ್ಯಯನ ನಡೆಯಲಿ, ಜನಸಾಮಾನ್ಯರಿಗೂ ಕಪ್ಪೆಗಳ ಮಹತ್ವದ ಬಗ್ಗೆ ಅರಿವು ಮೂಡಲಿ ಎಂದು ಪರಮೇಶ್ವರ ಹೆಗಡೆ ಹೇಳುತ್ತಾರೆ.

ಸೋಮವಾರ ರಾತ್ರಿ ಯಲ್ಲಾಪುರದಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ

ಯಲ್ಲಾಪುರ : ಸೋಮವಾರ ರಾತ್ರಿ ಯಲ್ಲಾಪುರ ತಾಲೂಕಿನಾದ್ಯಂತ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕೆರೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ. ಗುಳ್ಳಾಪುರದಲ್ಲಿ ಮನೆಯ ಮೇಲೆ‌ಮರ ಬಿದ್ದು ಹಾನಿಯಾಗಿದೆ. 
    ಕಂದಾಯ ಇಲಾಖೆಯ ಪ್ರಕಾರ, ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆಯವರೆಗೆ 24 ಗಂಡೆಯಲ್ಲಿ 79.2 ಮಿ.ಮೀ ಮಳೆ ದಾಖಲಾಗಿದೆ. ತಾಲೂಕಿನಲ್ಲಿ ಈವರೆಗೆ 1108.8 ಮಿ.ಮೀ ಮಳೆಯಾಗಿದೆ. ಈ ಅಬ್ಬರದ ಮಳೆಯಿಂದಾಗಿ ಒಳ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಜನಸಂಚಾರಕ್ಕೆ ತೊಂದರೆ ಉಂಟಾಗಿದೆ.
   ಮಳೆಯ ತೀವ್ರತೆಯನ್ನು ಪರಿಗಣಿಸಿ, ಜಿಲ್ಲಾಧಿಕಾರಿಗಳು ಮಂಗಳವಾರಕ್ಕೆ ಯಲ್ಲಾಪುರ ತಾಲೂಕಿನ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
   ಸೋಮವಾರದ ಮಳೆಯಿಂದಾಗಿ ಉಂಟಾದ ಹಾನಿಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಅಂದಾಜು ಲಭ್ಯವಿಲ್ಲ. ಸ್ಥಳೀಯ ಅಧಿಕಾರಿಗಳು ಹಾನಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಸೋಮವಾರ ಮಳೆಯ ಪರಿಣಾಮ: ಗುಳ್ಳಾಪುರದಲ್ಲಿ ಮರ ಬಿದ್ದು ಮನೆಗೆ ಹಾನಿ/ಅಂಕೋಲಾ ಶಿರೂರ ಬಳಿ ಗುಡ್ಡ ಕುಸಿತ 9 ಜನ‌ ಕಾಣೆ, ಗಂಗಾವಳಿಯಲ್ಲಿ ಕೊಚ್ಚಿ ಹೋದ ಗ್ಯಾಸ್ ಟ್ಯಾಂಕರ್

ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗುಳ್ಳಾಪುರದಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ದೊಡ್ಡ ಮರ ಒಂದು ಮನೆಯ ಮೇಲೆ ಉರುಳಿ ಬಿದ್ದು ಮನೆಗೆ ಹಾನಿ ಸಂಭವಿಸಿದೆ.  ಈ ದುರ್ಘಟನೆಗೆ ಗಂಗಾ ರಾಮಚಂದ್ರ ಪೂಜಾರಿ ಎಂಬವರ ಮನೆ ಮೇಲೆ, ಮರ ಬಿದ್ದು ಮನೆಗೆ ದೊಡ್ಡ ಮಟ್ಟದ ಹಾನಿಯಾಗಿದೆ.
   ಮಳೆಯ ಪರಿಣಾಮ, ಪೂಜಾರಿ ಕುಟುಂಬದ ಸದಸ್ಯರು ಆತಂಕದಲ್ಲಿದ್ದಾರೆ. ಮಂಗಳವಾರ ದಿನವೂ ಮಳೆಯ ಸಂಭವನೆ ಇರುವ ಕಾರಣ, ಅವರ ಸಾಮಾನ್ಯ ಜೀವನಕ್ಕೆ ವ್ಯಾಪಕ ಪರಿಣಾಮ ಬೀರಿದೆ. ಮನೆಯ ಮೇಲಿನ ಕಂಬಗಳು, ಬೀಡಿಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ಅವರು ನಿರಂತರ ಸುರಕ್ಷಿತ ಸ್ಥಳದ ಹುಡುಕಾಟದಲ್ಲಿದ್ದಾರೆ.
ಯಲ್ಲಾಪುರ ; ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಗಂಗಾವಳಿ ನದಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡ ಕುಸಿದ ರಭಸಕ್ಕೆ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ಯಾಂಕ‌ರ್ ಗಂಗಾವಳಿ ನದಿಗೆ ಬಿದ್ದು ತೇಲಿಕೊಂಡು ಹೋಗಿದೆ. ಘಟನೆಯಲ್ಲಿ 9 ಜನ‌ ಕಾಣೆಯಾಗಿದ್ದಾರೆ ಎನ್ನಲಾಗಿದೆ. 
  ಸ್ಥಳೀಯ ನಿವಾಸಿಗಳಾದ ಲಕ್ಷಣ, ಶಾಂತಿ ,  ರೋಷನ್ , ಅವಂತಿಕಾ ಹಾಗೂ ಜಗನ್ನಾಥ ಕಾಣೆಯಾದವರಾಗಿದ್ದು,  ಮಣ್ಣಿನಲ್ಲಿ ಸಿಲುಕಿರುವ ಸಾಧ್ಯತೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
   ಅಲ್ಲದೇ ಟ್ಯಾಂಕರ್ ಚಾಲಕ ಟೀ ಅಂಗಡಿಯಾತ  ಟೀ ಕುಡಿಯಲು ಬಂದವರು‌ ಸೇರಿ ಒಟ್ಟು 9‌ಜನ ಕಾಣೆಯಾಗಿದ್ದಾರೆ ಎನ್ನಲಾಗಿದೆ. 
  ಪೊಲೀಸ್ ಅಗ್ನಿ ಶಾಮಕ,ಎನ್‌ಹೆಚ್ ಎಐ ಸುರಕ್ಷತಾ ಅಂಬುಲೆನ್ಸನ್ ಮತ್ತಿತರ ಸುರಕ್ಷತಾ ವಾಹನಗಳು ಸ್ಥಳದಲ್ಲಿ ಬಿಡು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿರುವ ಶಾಸಕ ಸತೀಶ್ ಸೈಲ್ ವಿಷಯ ತಿಳಿದು,ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ, ಸಂಬಂಧಿತ ಅಧಿಕಾರಿಗಳಿಗೆ ಫೋನ್ ಕರೆಯ ಮೂಲಕ ಮಾತನಾಡಿ ಎಲ್ಲ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.