Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 23 July 2024

ಆರ್ತಿಬೈಲ್ ಘಟ್ಟದಲ್ಲಿ ಅಪಘಾತ ಸ್ಕೂಟಿ ಚಾಲಕ ಮೃತ್ಯು

 

IMG-20240723-200729 IMG-20240723-200715

ಬೈಕ್ ಸವಾರನ ಮೇಲೆ ಮರದ ಟೊಂಗೆ ಬಿದ್ದು ಬೈಕ್ ಸವಾರನಿಗೆ ಗಾಯ

ಯಲ್ಲಾಪುರ : ಕಲಘಟಗಿಯಿಂದ ಯಲ್ಲಾಪುರ ಕಡೆಗೆ ಬೈಕ್ ಓಡಿಸಿಕೊಂಡು ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮರದ ಟೊಂಗೆಯೊಂದು ಬೈಕ್ ಸವಾರನ ತಲೆಯ ಮೇಲೆ ಮೇಲೆ ಬಿದ್ದ ಪರಿಣಾಮ ಗಾಯಗೊಂಡ ಆತನನ್ನು ಯಲ್ಲಾಪುರ ತಾಲೂಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
  ಗಾಯಾಳುವನ್ನು ಹೊಸಳ್ಳಿಯ ದೊಡ್ಲಾ ಹಾಲಿನ ಡೇರಿಯಲ್ಲಿ ಕೆಲಸ ಮಾಡುತ್ತಿರುವ ಕಲಘಟಗಿ ನಿವಾಸಿ ಮಾರುತಿ ಲಕ್ಷ್ಮಣ ಬಾಂದೇಕರ ಪ್ರಾಯ(44) ಎಂದು ಗುರುತಿಸಲಾಗಿದ್ದು,
ರಾಷ್ಟ್ರೀಯ ಹೆದ್ದಾರಿಯ 63ರ ಅರ್ಲಿಕೊಪ್ಪ ಗ್ರಾಮದ ಸಮೀಪ ಬರುತ್ತಿದ್ದಂತೆ ಮರದ ಟೊಂಗೆ ಬೈಕ್ ಸವಾರನ ಮೇಲೆ ಕಿತ್ತು ಬಿದ್ದಿದೆ. ಸುದೈವವಶಾತಃ ಬೈಕ್ ಸವಾರ ಹೆಲ್ಮೆಟ್ ಧರಿಸಿರುವ ಕಾರಣಕ್ಕೆ ತಲೆಗೆ ಯಾವುದೇ ಮಾರಣಾಂತಿಕವಾದ ಪೆಟ್ಟು ಆಗಲಿಲ್ಲ ಭುಜಕ್ಕೆ ಗಾಯವಾಗಿದ್ದು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ಯಲ್ಲಾಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. 

ಯಲ್ಲಾಪುರ ನ್ಯೂಸ್ ಗ್ರೂಪಿಗೆ ಬಂದು ಖಾಲಿ ಕೈಯಲ್ಲಿ ಮರಳಿದ ನೈಜಿರಿಯನ್ ಹುಳುಗಳು

ಯಲ್ಲಾಪುರ : ಯಲ್ಲಾಪುರ ನ್ಯೂಸ್ ವಿವಿಧ ವಿಭಾಗಗಳಲ್ಲಿ ನೂರಕ್ಕೆ ಹೆಚ್ಚು ವಾಟ್ಸಪ್ ಗ್ರೂಪ್ ಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಕೆಲವು ಗ್ರೂಪ್ ಗಳ ಇನ್ವಿಟೇಶನ್ ಲಿಂಕ್ ಗಳನ್ನು ಭಹಿರಂಗವಾಗಿ ನೀಡಲಾಗಿತ್ತು.(ಗ್ರೂಪ್ ಗಳಲ್ಲಿ) ಎಲ್ಲಿಂದಲೂ ಈ ಗ್ರೂಪ್ ಗಳ ಇನ್ವಿಟೇಷನ್ ಲಿಂಕ್ ಪಡೆದ ನೈಜೀರಿಯನ್ ಐ ಎಸ್ ಡಿ ಸಂಖ್ಯೆ ಬಳಸಿ ಸೇರಿಕೊಂಡ ಹುಳುಗಳು, ನಾವು ಎಲ್ಲಾ ಸುರಕ್ಷಿತ ವಿಧಾನವನ್ನು ಅಳವಡಿಸಿಕೊಂಡಿರುವ ಕಾರಣಕ್ಕಾಗಿ ಯಾವುದೇ ಬೇಳೆ ಬೇಯಿಸಿಕೊಳ್ಳಲಾಗದೆ ಹಿಂದೆ ಮರಳಿದ್ದಾರೆ(ಫೋಟೊ ನೋಡಬಹುದು) ಅಂದರೆ ಲೆಫ್ಟ್ ಆಗಿದ್ದಾರೆ.
   ನಮ್ಮ ಓದುಗರ ಮಾಹಿತಿಗಾಗಿ +234xxxxxxxxxxxxx ಸಂಖ್ಯೆಯಿಂದ ಪ್ರಾರಂಭವಾಗುವ ಯಾವುದೇ ಸಂಖ್ಯೆಯ ಮೆಸೇಜ್ ಗಳನ್ನು ತೆರೆಯಬೇಡಿ. ಅವರು ನೀಡಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ ಓಪನ್ ಮಾಡಬೇಡಿ, ನಿಮ್ಮ ಫೋನ್ ಭದ್ರತಾ ವ್ಯವಸ್ಥೆ ಹೊಂದದೆ ಇದ್ದರೆ ಫೋನ್ ಹ್ಯಾಕ್ ಆಗುವ ಸಾಧ್ಯತೆಯಿದ್ದು, ಬ್ಯಾಂಕ್ ಖಾತೆ ಇನ್ನಿತರ ಡೇಟಾಗಳು ಹ್ಯಾಕರ್ ಕೈಸೆರಿ ನೀವು ವಂಚನೆಗೆ ಒಳಗಾಗಬಹುದಾಗಿದೆ. 
   ಯಾವುದೇ ರೀತಿಯ ಆಫರ್, ಗೇಮ್,  ಗೇಮ್ ಪ್ರೆಡಿಕ್ಷನ್, ಫ್ರೀ ಆ‌್ಯಪ್ ಡೌನಲೋಡ್ ಲಿಂಕ್, ಮೋಡ್ ಆ‌್ಯಪ್ ಸ್ಟೋರ್, ಕ್ರಿಕೇಟ್ ಬೆಟ್ಟಿಂಗ್ ಆ‌್ಯಪ್ ಲಿಂಕ್(ಪ್ಲೇಸ್ಟೋರ್ ಹೊರತುಪಡಿಸಿ) ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಡಿ. ಇದರಿಂದಾಗಿ ನಿಮ್ಮಬ್ಯಾಂಕ್ ಖಾತೆಯ ಹಣದೊಂದಿಗೆ, ಸೋಶಿಯಲ್ ಮೀಡಿಯಾ ಪಾಸ್ವರ್ಡ್ ಹ್ಯಾಕ್ ಆಗುವ ಸಾಧ್ಯತೆಯಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೀವು ಇತರರೊಂದಿಗೆ ಹೊಂದಿರುವ ಫ್ರೆಂಡ್‌ಶಿಪ್  ಸಂಬಂಧಗಳು ಹಾಳಾಗಬಹುದಾಗಿದೆ. ಯಾವುದೇ ರೀತಿಯ QR code ಸ್ಕ್ಯಾನ್ ಮಾಡುವ ಪೂರ್ವದಲ್ಲಿ, ಎಸ್ಎಂಎಸ್ ಮೂಲಕ ಬಂದ ಓಟಿಪಿ ಬರ್ತಿ ಮಾಡುವ ಪೂರ್ವದಲ್ಲಿ ಹತ್ತಾರು ಬಾರಿ ಯೋಚಿಸಿ, ಸೋಶಿಯಲ್ ಮಿಡಿಯಾದಲ್ಲಿ ಗುರುತು‌ಪರಿಚಯ ಇಲ್ಲದವರೊಂದಿಗೆ, ನಮ್ಮ ಸ್ಥಳೀಯ ಹೆಸರು ಫೋಟೊ ಬಳಸಿದವರೊಂದಿಗೆ ಸ್ನೇಹಿತರಾಗಬೇಡಿ, ಅವರು ಎಸೆದ ತುಣುಕಿನ ಗಾಳಕ್ಕೆ ಸಿಲುಕಿ ಬ್ಲಾಕ್ ಮೇಲ್ ಗೆ ಒಳಗಾಗಬೇಡಿ, ಎಲ್ಲಕ್ಕಿಂತ ಮುಖ್ಯವಾಗಿ ಆನಲೈನ್ ಲೋನ್ ಪಡೆದು ಎಷ್ಟೆ ಗಟ್ಟಿಗಾರಾದರೂ ಕೊನೆಯಲ್ಲಿ ಸೋಲುವಂತವರಾಗಬೇಡಿ.
    ಯಾವುದೇ ಭಾರತೀಯ ಜೀನಿಯನ್ ಕಂಪನಿಗೆ ಹೋಲಬಹುದಾದಂತಹ ವೆಬ್ ಸೈಟ್ ಗಳಂತೆ ಕಂಡುಬಂದರು ಅವುಗಳಿಂದ ಅಧಿಕೃತವಲ್ಲದ ಲಿಂಕ್ ಗಳಿದ್ದಾಗ ತೆರದು ನೋಡಲು ಕೂಡ ಹೋಗಬೇಡಿ. 
  ಯಲ್ಲಾಪುರ ನ್ಯೂಸ್ ಆಗಾಗ ಈ ಕುರಿತು ಎಚ್ಚರಿಕೆ ನೀಡುತ್ತಲೇ ಇದೆ ಜಾಗೃತರಾಗಿ ಸುರಕ್ಷಿತರಾಗಿ.
ಇನ್ನೂ ಮುಂದೆ ಆನಲೈನ್ ವಂಚನೆಯ ಬಗ್ಗೆ ಪ್ರತಿ ರವಿವಾರ ನಿಮ್ಮ ಯಲ್ಲಾಪುರ ನ್ಯೂಸ್ ನಲ್ಲಿ ಸತೀಶ ಮಾಗೋಡ ಅವರು ಬರೆಯುತ್ತಾರೆ. ತಪ್ಪದೇ ಓದಿ ಜಾಗೃತರಾಗಿ.

ವಜ್ರಳ್ಳಿಯಲ್ಲಿ ಪಶುಸಂಗೋಪನೆ ಕುರಿತು ಮಾಹಿತಿ ಕಾರ್ಯಾಗಾರ ಯಶಸ್ವಿ

ಯಲ್ಲಾಪುರ : ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಮತ್ತು ಗ್ರಾ.ಪಂ ವಜ್ರಳ್ಳಿ ವ್ಯಾಪ್ತಿಯ ಭಾಗ್ಯಶ್ರೀ ಸಂಜೀವಿನಿ ವಾರ್ಡ ಮಟ್ಟದ ಒಕ್ಕೂಟ ಆಶ್ರಯದಲ್ಲಿ ತೇಲಂಗಾರ ಗ್ರಾಮದಲ್ಲಿ ಪಶುಸಂಗೋಪನೆ ಕುರಿತು ಇತ್ತೀಚೆಗೆ ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
   ಕಾರ್ಯಕ್ರಮದಲ್ಲಿ ಪಶುವೈದ್ಯಾಧಿಕಾರಿ ಕೆ.ಜಿ.ಹೆಗಡೆ ಅವರು ಪಶುಸಂಗೋಪನೆ, ಪಶು ಆಹಾರ, ಜಾನುವಾರುಗಳ ತಳಿಗಳ ಕುರಿತು ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.
   ಗ್ರಾಮ ಪಂಚಾಯತಿ ವಜ್ರಳ್ಳಿ ಅಧ್ಯಕ್ಷರಾದ ಭಗೀರಥ ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
  ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ನಾರಾಯಣ ಭಟ್ಟ ಮತ್ತು ಉಪಾಧ್ಯಕ್ಷರಾದ ಅನ್ನಪೂರ್ಣ ಭಟ್ಟ ಉಪಸ್ಥಿತರಿದ್ದು ಮಾತನಾಡಿದರು. ವಾರ್ಡ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಯಮುನಾ ಭಟ್ಟರವರು ಸಭೆಯ ನೇತೃತ್ವ ವಹಿಸಿದ್ದರು. ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನರಸಿಂಹ ಗಾಂವ್ಕಾರ್ ಮತ್ತು ವಲಯ ಮೇಲ್ವಿಚಾರಕರು (ಕೌಶಲ್ಯ) ಶರೀಫಾಬಿ ಮುಲ್ಲಾ ಉಪಸ್ಥಿತರಿದ್ದರು.
   ಪಶು ಸಖಿ ಹೇಮಾ ಆಚಾರಿಯವರ ಪ್ರಾರ್ಥಿಸಿದರು.  ವಲಯ ಮೇಲ್ವಿಚಾರಕರಾದ ರಾಜಾರಾಮ ವೈದ್ಯ ಪ್ರಾಸ್ತಾವಿಕಗೈದರು. ಭಾಗೀರಥಿ ಭಟ್ಟ ಸ್ವಾಗತಿಸಿದರು ಮತ್ತು ಹೇಮಾ ಆಚಾರಿ ವಂದಿಸಿದರು. ಗ್ರಾಮ ಪಂಚಾಯತಿ ಸದಸ್ಯರಾದ ರತ್ನಾ ಬಾಂದೇಕರ ಕಾರ್ಯಕ್ರಮ ನಿರೂಪಿಸಿದರು.
   ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಮತ್ತು ಸಿಬ್ಬಂದಿಗಳು,ವಾರ್ಡ ಮಟ್ಟದ ಒಕ್ಕೂಟದ ಪದಾಧಿಕಾರಿಗಳು ಮತ್ತು ಸ್ವ ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
   ಜಾನುವಾರುಗಳ ಆರೋಗ್ಯ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಬಳಸಲು, 
ಈ ಕಾರ್ಯಾಗಾರದಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಪಶುಸಂಗೋಪನೆ ಕುರಿತು ಉಪಯುಕ್ತ ಮಾಹಿತಿ ದೊರೆಯಿತು.