Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 7 July 2024

68 ವರ್ಷ ಜ್ಯೋತಿ ದರ್ಶನ‌ಪಡೆದ, ಗುರು ಸ್ವಾಮಿಗಳಿಗೆ ಗುರು ಸ್ವಾಮಿ‌ ಮೈನಳ್ಳಿಯ ದಾಮೋದರ ಪದ್ಮನಾಭನ್ , ವರದಿ : ಜಗದೀಶ ನಾಯಕ

ವರದಿ : ಜಗದೀಶ ನಾಯಕ

ಯಲ್ಲಾಪುರ : ಶಬರಿಮಲೆ ತೆರಳುವ ಮಾಲಾಧಾರಿ ಅಯ್ಯಪ್ಪ ಭಕ್ತರಿಗೆ, ಯಾವುದೇ ಜಾತಿ ವೃತ್ತಿ ಏನೇ ಇದ್ದರೂ ಕೂಡ ಎಷ್ಟು ದಿನ ಮಾಲಾದಾರಿಗಳಾಗಿರುತ್ತಾರೆ, ಅಷ್ಟು ದಿನ ಅವರನ್ನು ದೇವರಂತೆ ಗೌರವಿಸುವ ಪದ್ಧತಿ, ಬಹುತೇಕ ಭಾರತದ ಎಲ್ಲಾ ಕಡೆಯೂ ಇದೆ. ಅದರಲ್ಲಿಯೂ ಅತಿ ಹಿರಿಯ ಗುರು ಸ್ವಾಮಿಗಳನ್ನು ಮಾಲಾಧಾರಿ ಆಗದೆ ಇದ್ದಾಗಲೂ ಕೂಡ ದೈವಿ ಸ್ವರೂಪವಾಗಿ ಕಾಣಲಾಗುತ್ತದೆ.
   ನಾವೀಗ ಹೇಳಲು ಹೊರಟಿರುವುದು, ಭವಿಷ್ಯ ಉತ್ತರ ಕನ್ನಡದಲ್ಲಿ ಅತ್ಯಂತ ಹಿರಿಯ ಗುರುಸ್ವಾಮಿ 91 ವರ್ಷದ ಮುಂಡಗೋಡ ಯಲ್ಲಾಪುರ ರಸ್ತೆಯ ಮಧ್ಯ ಸೀಗುವ ಗ್ರಾಮ ಮೈನಳ್ಳಿಯ ಧಾಮೋದರ ಪದ್ಮನಾಭನ್ ಅವರು‌.
   1955 ರಿಂದ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಿರುವ ದಾಮೋದರ್ ಪದ್ಮನಾಭನ್ ಅಂದಾಜು ಅರವತ್ತೆಂಟು ವರ್ಷಗಳಷ್ಟು ಕಾಲ ಶಬರಿಮಲೆಗೆ ತೆರಳಿ ಜ್ಯೋತಿಯ ದರ್ಶನ ಪಡೆದಿದ್ದಾರೆ. ಉತ್ತರ ಕನ್ನಡ, ಹಾವೇರಿ, ಧಾರವಾಡ ಮುಂತಾದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯನ್ನು ಸ್ಥಾಪಿಸಿ, ಅಲ್ಲಿ ಹಲವಾರು ಶಿಷ್ಯಂದಿರನ್ನು ಗುರುಸ್ವಾಮಿಯನ್ನಾಗಿ, ಅಯ್ಯಪ್ಪ ಸ್ವಾಮಿಯ ಭಕ್ತರನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. 
   ಉತ್ತರ ಕನ್ನಡದ ಬಹುತೇಕ ಬದುಕಿರುವ ಹಾಗೂ ಈಗಲೂ ಕಾರ್ಯ ಪ್ರವರ್ತರಾಗಿರುವ ಹಿರಿಯ ಗುರು ಸ್ವಾಮಿಗಳು ದಾಮೋದರ್ ಪದ್ಮನಾಭನ್ ಅವರ ಶಿಶ್ಯಂದಿರಾಗಿದ್ದಾರೆ. 1972ರಲ್ಲಿ ಕೆಲಸ ಅರಿಸುತ್ತಾ ಅಂಬಿಕಾನಗರ ಕೆಪಿಸಿ ಕೆಲಸಕ್ಕೆ ಆಗಮಿಸಿದ ದಾಮೋದರ್ ಪದ್ಮನಾಭನ್, ಅಲ್ಲಿಂದ ಪ್ರಾರಂಭಿಸಿ ಅಯ್ಯಪ್ಪ ಸ್ವಾಮಿ ಸನ್ನಿಧಿಯನ್ನು ಸ್ಥಾಪಿಸುತ್ತಾರೆ, ಅಯ್ಯಪ್ಪ ಸ್ವಾಮಿಯ ಪ್ರಭಾವ, ಭಕ್ತಿ ಹಾಗೂ ಜಾತ್ಯಾತೀತ ನಿಲವುಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗ ಪ್ರಚಾರಕ್ಕೆ ಬಂದು ಎಲ್ಲ ವರ್ಗದ ಜನ ಅದರಲ್ಲೂ ಹಿಂದುಳಿದ ದಲಿತ ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟ ಜನ ಅಯ್ಯಪ್ಪ ಸ್ವಾಮಿಯ ಭಕ್ತರಾಗುತ್ತಾರೆ. ಗುರು ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾಲೆ ಧರಿಸಿ, ಕಪ್ಪು ವಸ್ತ್ರವನ್ನು ಧರಿಸಿ ಕಠಿಣ ವೃತ್ತಚಾರಣೆ ಮಾಡಿ ಸ್ವಾಮಿಗಳಾಗುತ್ತಾರೆ. ಜನವರಿ 14ರಂದು ಶಬರಿಮಲೆ ಜ್ಯೋತಿ ದರ್ಶನ ಪಡೆದು ಪುನೀತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ  ದೈವಿ ಶಕ್ತಿಯನ್ನು ಹೊಂದಿದವರಾಗಿ ಪರಿವರ್ತನೆಯಾಗುತ್ತಾರೆ. ಸಮಾಜ ಕೂಡ ಅವರನ್ನು ಗೌರವಿಸುವುದು ಇನ್ನೂ ಹೆಚ್ಚಾಗುತ್ತದೆ. ಇದೇ ರೀತಿ ಪ್ರಚಾರಗೊಳ್ಳುತ್ತಾ ಸಾಗುವ ಉತ್ತರ ಕನ್ನಡದಲ್ಲಿ ವಿವಿಧ ತಾಲೂಕುಗಳಲ್ಲಿ, ಸನ್ನಿಧಿಗಳ ಸ್ಥಾಪನೆಯಾಗುತ್ತಾ ಹೋಗುತ್ತದೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ. ಬಹುತೇಕ ಸನ್ನಿಧಿಗಳಲ್ಲಿ ದಾಮೋದರ್ ಪದ್ಮನಾಭನ್ ಗುರುಸ್ವಾಮಿಯಾಗಿ ಮೃತಾಚರಣೆ ಪಾಲನೆ ಬಗ್ಗೆ ಹೇಳಿಕೊಡುತ್ತಾ ಬರುತ್ತಾರೆ. 68 ವರ್ಷಕ್ಕೂ ಹೆಚ್ಚು ಕಾಲ ಜ್ಯೋತಿ ದರ್ಶನ ಹಾಗೂ ಶಬರಿಮಲೆ ದರ್ಶನ ಪಡೆದಿರುವ ದಾಮೋದರ್ ಪದ್ಮನಾಭನ್ , ಕಳೆದ ಕೆಲವು ವರ್ಷದಿಂದ ವಯಸ್ಸಿನ ಕಾರಣಕ್ಕಾಗಿ ಶಬರಿಮಲೆಗೆ ತೆರಳುವುದನ್ನು ನಿಲ್ಲಿಸಿದ್ದಾರೆ. ಇವರು ಅನುಸರಿಸುತ್ತಿರುವ ಕಠಿಣ ವೃತ್ತಾಚರಣೆ ಈಗಿನ ವ್ರತದಾರಿಗಳಿಗೆ ಆಗಿ ಬರುವುದಿಲ್ಲ ಎಂದು ಹಲವಾರು ಜನ ಅಭಿಪ್ರಾಯ ಪಡುತ್ತಾರೆ. ತೋರಿಕೆಗಾಗಿ ತಾವು ಏನನ್ನು ಮಾಡಿಲ್ಲ, ಕೇವಲ ಸ್ವಾಮಿಯ ಮೇಲೆ ಭಕ್ತಿ ಒಂದೆ ನಮ್ಮ ಗುರಿ ಎಂದು
ದಾಮೋದರ್ ಪದ್ಮನಾಭನ್ ಹೇಳುತ್ತಾರೆ.

 ಆ ದಿನಗಳಲ್ಲಿ ಶಬರಿಮಲೆ ಯಾತ್ರೆ ಹೇಗಿತ್ತು ?
   ದಾಮೋದರ ಪದ್ಮನಾಭನ್ ಹೇಳುವಂತೆ, 1955ರಲ್ಲಿ ಅಯ್ಯಪ್ಪ ಸ್ವಾಮಿಯ ಈ ಸಮಯದ ಆಚರಣೆಗಳಲ್ಲಿ ಮಾಲಧಾರಣ, ಮಂಡಲ ಪೂಜೆ, ಮತ್ತು ಮಕರಜ್ಯೋತಿ ಪ್ರಮುಖವಾಗಿದ್ದವು. ಯಾತ್ರಿಗಳು 41 ದಿನಗಳ ವ್ರತವನ್ನು ಖಡ್ಡಾಯವಾಗಿ ಅನುಸರಿಸುತ್ತಿದ್ದರು, ಈ ಸಮಯದಲ್ಲಿ ಮಾಲೆ ಧರಿಸಿ, ಶುದ್ಧ ಮತ್ತು ಸತ್ಪ್ರವೃತ್ತಿಯನ್ನು ಪಾಲಿಸುತ್ತಿದ್ದರು. ಮಂಡಲ ಪೂಜೆಯ ನಂತರ ಮಕರಸಂಕ್ರಾಂತಿ ಸಂದರ್ಭದಲ್ಲಿ ಮಕರವಿಳಕ್ಕು ಮತ್ತು ಮಕರಜ್ಯೋತಿ ದರ್ಶನ ಮುಖ್ಯ ಆಕರ್ಷಣೆಯಾಗಿತ್ತು.

ಗುರುಸ್ವಾಮಿ ಕೆಲಸ :

   ಶಬರಿಮಲೆ ಯಾತ್ರೆಯ ಪ್ರಾರಂಭಿಕ ದೆಶೆಯಲ್ಲಿ ಅನುಭವಿಗಳಾದ 'ಗುರುಸ್ವಾಮಿಗಳು' ಯಾತ್ರೆಗಾರರನ್ನು ಮುನ್ನಡೆಸುತ್ತಿದ್ದರು. ಗುರುಸ್ವಾಮಿಯು ಹೊಸಬರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಯಾತ್ರೆ ಸಂದರ್ಭದಲ್ಲಿ ಆಚಾರ-ವಿಚಾರಗಳನ್ನು ತಿಳಿಸುತ್ತಿದ್ದರು. ಗುರುಸ್ವಾಮಿಯು ಯಾತ್ರೆಗಾರರಿಗೆ 'ಇರುವುದಿನ' ಅಥವಾ 'ವೃತ್ತಿನಿಯಮ' ಕುರಿತು ತಿಳಿಸುತ್ತಿದ್ದರು, ಶಬರಿಮಲೆ ಯಾತ್ರೆಯನ್ನು ಪವಿತ್ರವಾಗಿ ಮುನ್ನಡೆಯಲು ಸಹಾಯ ಮಾಡುತ್ತಿದ್ದರು.
 1955ರಿಂದ 1972ರವರೆಗೆ ಶಬರಿಮಲೆ ಕ್ಷೇತ್ರದಲ್ಲಿ ಆಧುನಿಕ ಸೌಲಭ್ಯಗಳು ಇರಲಿಲ್ಲ. ಯಾತ್ರಿಗಳು ಪಾದಯಾತ್ರೆಯ ಮೂಲಕ ಪ್ರಾಯಾಣಿಸುತ್ತಿದ್ದರು, ಭಕ್ತರಿಗಾಗಿ ಮುನ್ನೋಟಿ ಕ್ಯಾಂಪ್, ದರ್ಶನದ ಸೌಲಭ್ಯಗಳು ನಿರ್ವಹಿಸಲ್ಪಟ್ಟಿದ್ದವು.1970ರ ದಶಕದ ಆರಂಭದಲ್ಲಿ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚಳವಾಗತೊಡಗಿದಂತೆ, ಹೊಸ ವ್ಯವಸ್ಥೆಗಳನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಯಿತು. ಈ ಕಾಲಾವಧಿಯಲ್ಲಿ ಅಯ್ಯಪ್ಪನ ಆರಾಧನೆ ಮತ್ತು ಶಬರಿಮಲೆ ಯಾತ್ರೆಯು ಹೆಚ್ಚಿನ ಭಕ್ತರ ಗಮನ ಸೆಳೆದಿತ್ತು, ಮತ್ತು ಗುರುಸ್ವಾಮಿಯ ಮಾರ್ಗದರ್ಶನವು ಭಕ್ತರ ಅನುಭವವನ್ನು ಪಾವಿತ್ರ್ಯಪೂರ್ಣಗೊಳಿಸುತ್ತಿತ್ತು ಎಂದು ಅವರು ಹೇಳುತ್ತಾರೆ.

   ಅಂದು ಶಬರಿಮಲೆಗೆ ಹೋಗಲು ಇರುವ ತೊಡಕುಗಳು :
   
 ಆ ಕಾಲದಲ್ಲಿ ಸಾರಿಗೆ ಸೌಲಭ್ಯಗಳು ಹೆಚ್ಚಿದಾಗಿ ಇರಲಿಲ್ಲ. ಕಾಡಿನ ಮಾರ್ಗಗಳಲ್ಲಿ ನಡೆದು ಹೋಗಬೇಕಾಗಿತ್ತು. ಶಬರಿಮಲೆ ಯಾತ್ರೆಗೆ ಹೆಚ್ಚಿನ ಮೂಲಸೌಕರ್ಯಗಳು ಇಲ್ಲ. ಊಟ, ಹಣ್ಣುಗಳು ಮತ್ತು ಸ್ಥಳೀಯ ಆಹಾರವನ್ನು ಯಾತ್ರಾರ್ಥಿಗಳು ಬಹುದೂರದಿಂದ ಹೊತ್ತೊಯ್ಯುತ್ತಿದ್ದರು. ತಾತ್ಕಾಲಿಕ ಟೆಂಟ್ ಗಳು ಮತ್ತು ಮಂದಿರಗಳ ಬಳಿಯಲ್ಲಿ ನಿದ್ರೆ ಮಾಡಬೇಕಾಗುತ್ತಿತ್ತು. ಕಾಡಿನಲ್ಲಿ ಸಿಗುವ ಆನೆಗಳು, ಹುಲಿ, ಕರಡಿ ಮುಂತಾದ ಪ್ರಾಣಿಗಳಿಂದ ಜಾಗೃತೆ ವಹಿಸಬೇಕಾಗಿತ್ತು. ಗುಂಪು ಗುಂಪಾಗಿ ಕಾಡಿನ‌ ಮಧ್ಯ ವಾಸ್ತವ್ಯ ಹಾಗೂ ಕಾವಲು ಕಾದುವನಿದ್ದೆ ಮಾಡಬೇಕಿತ್ತು. ದಾರಿಯಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವುದು ಬಹಳ ಕಷ್ಟಕರವಾಗಿತ್ತು. ಆ ಕಾಲದಲ್ಲಿ ಯಾತ್ರಾರ್ಥಿಗಳು ಬಹು ಶ್ರದ್ಧೆ ಮತ್ತು ಧೈರ್ಯದಿಂದ ಯಾತ್ರೆ ನಡೆಸುತ್ತಿದ್ದರು, ಇದೀಗ ಎಲ್ಲೆಡೆ ಸುಗಮವಾದ ಮಾರ್ಗಗಳು ಮತ್ತು ಮೂಲ ಸೌಕರ್ಯಗಳೊಂದಿಗೆ ಯಾತ್ರೆಯನ್ನು ನಡೆಸಲು ಸಾಧ್ಯವಾಗಿದೆ ಎಂದು ದಾಮೋದರ ಪದ್ಮನಾಭನ್ ಹೇಳುತ್ತಾರೆ.