ಯಲ್ಲಾಪುರ : ಪ್ರತಿದಿನ 9,000 ಹೆಚ್ಚು ವಾಹನಗಳನ್ನು ಸಹಿಸಿಕೊಳ್ಳುತ್ತಿರುವ ಅರೆಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಕೆಟ್ಟು ನಿಂತ ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾಗಿ ಇನ್ನಿತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಗುರುವಾರ ಬೆಳಿಗ್ಗೆ ಕೂಡ ಇಂತಹ ಘಟನೆ ನಡೆದಿದ್ದು ಸುಮಾರು 30 ನಿಮಿಷ ವಾಹನಗಳು ಸಂಚಾರಕ್ಕೆ ವಿಳಂಬವಾಗಿ ನಲಸಂಚರಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಮತ್ತು ಘಟ್ಟದ ಕೆಳಗಿನ ಪ್ರದೇಶವನ್ನು ಬೆಸೆಯುವ ಆರು ಮೈಲಿ ಉದ್ದದ ಅರಬೈಲ್ ಘಟ್ಟ ಭಾರಿ ವಾಹನಗಳ ಚಾಲಕರು ಹರಸಾಹಸ ಪಟ್ಟು ದಾಟಬೇಕಾಗಿದೆ. ಪರಿಣಿತ ಚಾಲಕರು ಮಾತ್ರ ಈ ರಸ್ತೆಯನ್ನು ಯಶಸ್ವಿಯಾಗಿ ದಾಟಿಸುತ್ತಾರೆ. ಅರಬೈಲ ಘಟ್ಟಕ್ಕೆ ಹೊಸದಾಗಿ ಬಂದ ಚಾಲಕರು ತಮ್ಮ ವಾಹನಗಳನ್ನು ರಸ್ತೆ ಪಕ್ಕ ಉರಳಿಸಿಕೊಳ್ಳುತ್ತಿದ್ದಾರೆ, ಇಲ್ಲವೇ ಅಪಘಾತಕ್ಕೆ ಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತದೆ. ಅತಿ ಹೆಚ್ಚಿನ 'ಯು' ಆಕಾರದ ತಿರುವುಗಳಲ್ಲಿ ನಿಯಂತ್ರಣ ಕಳೆದುಕೊಂಡ ಚಾಲಕರು ಅಪಘಾತಕ್ಕೆ ಇಡಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ಅತಿ ಭಾರದ ವಾಹನಗಳ ಎಂಜಿನ್, ಟೈಯರ್ ಘಟ್ಟದ ಮೇಲೆ ಸಾಮಗ್ರಿಗಳನ್ನು ಸಾಗಿಸುತ್ತಿರುವಾಗ ಸಾಮರ್ಥ್ಯ ಕಳೆದುಕೊಂಡು ಕೆಟ್ಟು ನಿಲ್ಲುತ್ತವೆ. ಎಲ್ಲಂದರಲ್ಲಿ ಕೆಟ್ಟು ನಿಲ್ಲುವ ವಾಹನಗಳಿಂದಾಗಿ ಹಿಂದೆ ಹಾಗೂ ಮುಂದಿನಿಂದ ಬರುವ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ರಸ್ತೆಯಲ್ಲಿ ಕೆಟ್ಟು ನಿಂತ ವಾಹನದ ಪರಿಣಾಮವಾಗಿ ಅರಬೈಲ್ ಘಟ್ಟದಲ್ಲಿ ಗುರುವಾರ ಮುಂಜಾನೆ 8-45 ರಿಂದ ಅರ್ಧ ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು, ನೂರಾರು ವಾಹನಗಳು ಹೆದ್ದಾರಿಯ ಎರಡು ಬದಿಯಲ್ಲಿ, ಶಿರಲೆ ಕ್ರಾಸ್ ನಿಂದ ಆರಂಭವಾದ ಸುಮಾರು ನಾಲ್ಕು ಕಿ .ಮಿ ಅರಬೈಲ್ ಮಾರುತಿ ದೇವಸ್ಥಾನದವರೆಗೂ ತಲುಪಿತ್ತು.
ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹೆದ್ದಾರಿ ನಡುವಿನ ಲಾರಿ ತೆರವುಗೊಳಿಸಬೇಕಿದೆ. ಇಲ್ಲದಿದ್ದರೆ ಮಧ್ಯಾಹ್ನದವರೆಗೂ ಇದೇ ಸಮಸ್ಯೆ ಮುಂದುವರೆಯಲಿದೆ ಎಂದು, ಸ್ಥಳೀಯ ವಾಹನ ಚಾಲಕರು ಹಾಗೂ ಪ್ರಯಾಣಿಕರು ಹೇಳುತ್ತಾರೆ.
.
(ವರದಿ : ದತ್ತಾತ್ರೇಯ ಕಣ್ಣಿಪಾಲ, ವಜ್ರಳ್ಳಿ )
.