ಯಲ್ಲಾಪುರ ; ಪಟ್ಟಣದ ಅರಣ್ಯ ಸಭಾಭವನದಲ್ಲಿ ನಿವೃತ್ತ ವಲಯ ಅರಣ್ಯಧಿಕಾರಿ ಎಲ್.ಎ. ಮಠ ಅವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಆಯೋಜಿಸಿತು. ಈ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ಸುದೀರ್ಘ ಸೇವೆಯಿಂದ ವಯೋನಿವೃತ್ತಿ ಹೊಂದಿದ ಯಲ್ಲಾಪುರ ಅರಣ್ಯ ವಿಭಾಗದ ವಲಯ ಅರಣ್ಯಧಿಕಾರಿ ಎಲ್.ಎ. ಮಠ ಅವರನ್ನು ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ವಲಯ ಅರಣ್ಯಧಿಕಾರಿ ಎಲ್.ಎ. ಮಠ, "ನನ್ನ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರ, ಸಹೋದ್ಯೋಗಿಗಳ ಬೆಂಬಲಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ನನ್ನ ಸೇವಾವಧಿಯಲ್ಲಿ ನನಗೆ ಸಹಕರಿಸಿದ ಸರ್ವರಿಗೂ ಕೃತಜ್ಞನಾಗಿದ್ದೇನೆ" ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಎಚ್. ಮಾತನಾಡಿ, "ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಒಂದು ಸೌಭಾಗ್ಯವಾಗಿದೆ. ಎಲ್.ಎ. ಮಠ ಅವರ ನಿವೃತ್ತಿ ನಂತರದ ಜೀವನ ಸುಖ ಸಂತೃಪ್ತಿಯಿಂದ ಕೂಡಿರಲಿ" ಎಂದರು.
ಈ ಸಮಾರಂಭದಲ್ಲಿ ವಲಯ ಅರಣ್ಯಧಿಕಾರಿ ದಿನೇಶ್ ಮಿರ್ಜಾನಕರ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಶೋಕ ಹಳ್ಳಿ, ಶ್ರೀನಿವಾಸ್ ನಾಯ್ಕ, ಅಲ್ತಾಪ್ ಚೌಕ್‌ಡಾಕ, ಸಂತೋಷ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಿಆರ್‌ಎಫ್‌ಓ ಸಂಜೀವಕುಮಾರ್ ನಿರ್ವಹಿಸಿದರು.
ಯಲ್ಲಾಪುರ: ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಮಾಕಾಂತ ನಾಯ್ಕ ವಿದ್ಯುತ್ ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುಬ್ಬಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ವ್ಯಾಪ್ತಿಯಲ್ಲಿ ಸಂಭವಿಸುವ ವಿದ್ಯುತ್ ಅಪಘಾತಗಳನ್ನು ತಪ್ಪಿಸಲು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಮುಖ್ಯ, "ವಿದ್ಯುತ್ ವಿತರಣಾ ಜಾಲ ವ್ಯವಸ್ಥೆಯನ್ನು ನಿರ್ದಿಷ್ಟ ಸುರಕ್ಷತೆ ಸುಸ್ಥಿತಿಯಲ್ಲಿ ಇಡಲು ನಾವು ಹಲವು ಕ್ರಮಗಳನ್ನು ಕೈಗೊಳ್ಳುತ್ತೇವೆ. ಮಳೆಗಾಲದಲ್ಲಿ ಗಿಡಮರಗಳು ವಿದ್ಯುತ್ ತಂತಿಗಳ ಮೇಲೆ ಬೀಳುವುದರಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತೇವೆ. ಇಲಾಖೇತರ ಮನುಷ್ಯರು, ಪ್ರಾಣಿಗಳು ಮತ್ತು ಇತರೆ ಆಸ್ತಿಪಾಸ್ತಿಗಳಿಗೆ ಹಾನಿ ಆಗದಂತೆ ಸದುಪಯೋಗ ಪಡಿಸಿಕೊಳ್ಳುವಂತೆ ಈ ಅಭಿಯಾನವು ಜಾಗೃತಿ ಮೂಡಿಸುತ್ತದೆ" ಎಂದರು.
ಈ ಸಂದರ್ಭದಲ್ಲಿ ಪವರ್ ಮ್ಯಾನಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಹಾಯಕ ತಾಂತ್ರಿಕ ಇಂಜಿನಿಯರ್ ಸಂತೋಷ್ ಬಾವಕರ್, ಕಿರಿಯ ಇಂಜಿನಿಯರ್‌ಗಳಾದ ಗ್ರಾಮೀಣ ಶಾಖೆಯ ಲಕ್ಷ್ಮಣ್ ಜೋಗಳೇಕರ್, ಮಂಚಿಕೇರಿ ಶಾಖೆಯ ನಾಗರಾಜ್ ಆಚಾರಿ, ಕಿರವತ್ತಿ ಶಾಖೆಯ ವಿಶಾಲ್ ಮತ್ತು ಸಿಬ್ಬಂದಿಗಳಾದ ಛಾಯಪ್ಪ ಮುರಡಿ, ರವಿ ಪಾಟೀಲ ಇತರರು ಉಪಸ್ಥಿತರಿದ್ದರು.