ಯಲ್ಲಾಪುರ : ವಾರಣಾಸಿಯಲ್ಲಿ ನಡೆದ ಕಿಸಾನ್ ಸಮ್ಮಾನ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಲ್ಲಾಪುರದ ಜಂಬೆಸಾಲ ಗ್ರಾಮದ ಕೃಷಿ ಸೇವಕಿ ಮತ್ತು ಕೃಷಿ ಸಖಿ ಶ್ರೀಲತಾ ಹೆಗಡೆ ಅವರನ್ನು ಸನ್ಮಾನಿಸಿದರು.
ಈ ಗೌರವವು ಇಡೀ ತಾಲ್ಲೂಕು ಮತ್ತು ಜಿಲ್ಲೆಗೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ. ಶ್ರೀಲತಾ ಅವರ ಈ ಸಾಧನೆಯು ಮಹಿಳಾ ಮೋರ್ಚಾ ಬಿಜೆಪಿ ಪಕ್ಷ ದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅನುಭವವನ್ನು ಶ್ರೀಲತಾ ಹೆಗಡೆ ಹಂಚಿಕೊಂಡಾಗ, ತಮ್ಮ ಸಾಧನೆಯು ರೈತರಿಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಮರ್ಪಿತವಾಗಿದೆ ಎಂದು ಹೇಳಿದರು.
ಬಿಜೆಪಿಮಹಿಳಾ ಮೋರ್ಚಾ ಸನ್ಮಾನ ಕಾರ್ಯಕ್ರಮದಲ್ಲಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಮಹಿಳಾ ಮೋರ್ಚಾ ಅಧ್ಯಕ್ಷ ಶ್ರುತಿ ಹೆಗಡೆ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್, ನಿಕಟಪೂರ್ವ ಅಧ್ಯಕ್ಷ ಜಿ ಎನ್ ಗಾಂವ್ಕರ,, ಎಸ್ ಸಿ ಮೋರ್ಚಾ ಅಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಮಂಡಳ ಉಪಾಧ್ಯಕ್ಷ ನಾಗರಾಜ ಕವಡಿಕೇರಿ, ಪ್ರಧಾನ ಕಾರ್ಯದರ್ಶಿಗಳಾದ ನಟರಾಜ ಗೌಡರ್ ಮತ್ತು ರವಿ ಕೈಟ್ಕರ,ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಾ ನಾಯ್ಕ, ಪಟ್ಟಣ ಪಂಚಾಯತಿ ಸದಸ್ಯೆ ಕಲ್ಪನಾ ನಾಯ್ಕ, ಪ್ರಮುಖರಾದ ಸುನೀತಾ ವೇರ್ಣೇಕರ್, ವೀಣಾ ಗಾಂವ್ಕರ, ಶಕ್ತಿಕೇಂದ್ರದ ಪ್ರಮುಖ ಅಪ್ಪು ಆಚಾರಿ, ಸುಬ್ಬಣ್ಣ ಉದ್ದಾಬೈಲ, ಬೂತ ಅಧ್ಯಕ್ಷ ಗೋಪಣ್ಣ ಮತ್ತು ಗಣಪತಿ ಹೆಗಡೆ ಉಪಸ್ಥಿತರಿದ್ದರು.