

ಕಿರವತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತಾ ಕೋಕರೆ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಸಸ್ಯ ಸಂರಕ್ಷಣೆ ಹಾಗೂ ಅರಣ್ಯ ಉಳಿಸುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಬೇಕು. ಮಕ್ಕಳು ಹಾಗೂ ಜನರು ನಮ್ಮ ಪರಿಸರದ ಜಾಗೃತರಾಗಬೇಕು. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವ ಗುಣ ಬೆಳೆದು ಬರಬೇಕು ಎಂದು ಹೇಳಿದರು.
ಪದೋನ್ನತ ಮುಖ್ಯ ಶಿಕ್ಷಕ ಸುಧಾಕರ ನಾಯಕ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗಿಡಮರಗಳಿಗೆ ವಿಶೇಷ ಮನ್ನಣೆ ನೀಡಲಾಗುತ್ತದೆ. ಆಧುನಿಕರಣದ ಭರದಲ್ಲಿ ಪರಿಸರ ಪ್ರಜ್ಞೆ ಮರೆತು ಪರಿಸರ ಅವನತಿ ಹಾದಿ ಹಿಡಿಯುತ್ತಿದೆ. ಹೆಚ್ಚೆಚ್ಚು ಪ್ರಮಾಣದಲ್ಲಿ ಗಿಡಮರಗಳನ್ನು ಬೆಳೆಸಿ ಅರಣ್ಯವನ್ನು ಬೆಳೆಸಿ ಉಳಿಸುವುದರಿಂದ ಪರಿಸರ ಮಾಲಿನ್ಯ ತಡೆಯಲು ಸಾಧ್ಯ ಎಂದರು.
ಎಸ್ ಡಿ ಎಂ ಸಿ ಸದಸ್ಯ ಮಂಜು ಮರಾಠೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಜನ್ನಾಭಾಯಿ ಸಿಂಧೆ, ಬಮ್ಮಿ ಪಟಗಾರೆ, ನೇತ್ರಾ ಪಾಟೀಲ್, ಎಸ್‌ಡಿಎಂಸಿ ಸದಸ್ಯರು ಇದ್ದರು. ಶಿಕ್ಷಕಿ ಸುಮಂಗಲ ಹೆಗಡೆ ಸ್ವಾಗತಿಸಿದರು, ಗೀತಾ ಶೆಟ್ಟಿ ವಂದಿಸಿದರು, ಮತ್ತು ಮೇಘಾ ಸರ್ಜಾಪುರ್ ನಿರೂಪಿಸಿದರು.