ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿ 63 ರ ಆರ್ಭೈಲ್ ಘಟ್ಟದಲ್ಲಿ ಮಳೆಯ ಪ್ರಭಾವದಿಂದ ಕಂಟೇನರ್ ಲಾರಿ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಈ ಲಾರಿ ಯಲ್ಲಾಪುರ ತಾಲೂಕಿನಲ್ಲಿ ಸುರಿಯುತ್ತಿದ್ದ ಅತಿಯಾದ ಮಳೆಯಿಂದಾಗಿ ಜಾರುತ್ತಿದ್ದ ರಸ್ತೆಯ ಮೇಲೆ ನಿಯಂತ್ರಣ ಕಳೆದುಕೊಂಡು, ಚಾಲಕ ರಸ್ತೆಯ ಎಡಬಾಗದ ಚರಂಡಿಯಲ್ಲಿ ಲಾರಿಯನ್ನು ಉರುಳಿಸಿದ್ದಾನೆ.
ಘಟನೆಯ ನಂತರ, ಜಿಸಿಬಿ ಹಾಗೂ ಟ್ರಾಲಿ ಬಳಸಿ ಲಾರಿಯನ್ನು ಎತ್ತುವ ಕಾರ್ಯದಲ್ಲಿ ಸುಮಾರು ಅರ್ಧ ತಾಸು ಕಾಲ ಸಂಚಾರಕ್ಕೆ ವ್ಯತ್ಯಯವಾಯಿತು. ಈ ಅವಧಿಯಲ್ಲಿ, ರಸ್ತೆಯ ಎರಡು ಬದಿಗಳಲ್ಲಿಯೂ ನೂರಾರು ವಾಹನಗಳು ನಿಂತುಕೊಂಡಿದ್ದವು.